ADS

Elements Compounds and Mixtures class 5 notes Knnada

ನಾವು ದಿನನಿತ್ಯ ಅನೇಕ ದ್ರವ್ಯಗಳನ್ನು ಬಳಸುತ್ತೇವೆ. ಪ್ರಕೃತಿಯಲ್ಲಿ ದೊರೆಯುವ ಈ ದ್ರವ್ಯಗಳು, ಅಣುಗಳಿಂದ ಅಥವಾ ಸಂಯುಕ್ತ ಅಣುಗಳಿಂದ ಕೂಡಿವೆ. ಈ ಸಂಯುಕ್ತ  ಅಣುಗಳನ್ನು ವಿಭಜಿಸಿದಾಗ ಮೂಲಧಾತುಗಳು ಸಿಗುತ್ತವೆ. ಈ ಮೂಲಧಾತುವಿನ ಅತ್ಯಂತ ಚಿಕ್ಕ ಘಟಕವೇ ಪರಮಾಣು. ಪರಮಾಣುವು ಮೂಲಧಾತುವಿನ ಅದೇ ಗುಣಗಳುಳ್ಳ ಅತ್ಯಂತ ಚಿಕ್ಕ ಘಟಕವಾಗಿದೆ. ಕೆಲವು ಪರಮಾಣುಗಳು ಸುಲಭವಾಗಿ ಮತ್ತೊಂದರೊಡನೆ ಸೇರಿ ಬೇರೆ ಬೇರೆ ದ್ರವ್ಯಗಳಾಗುತ್ತವೆ. ದ್ರವ್ಯದಲ್ಲಿರುವ ಪರಮಾಣುಗಳನ್ನು ಆಧರಿಸಿ ಅವುಗಳನ್ನು ಧಾತು, ಸಂಯುಕ್ತ ಮತ್ತು ಮಿಶ್ರಣಗಳು ಎಂದು ವರ್ಗೀಕರಿಸಲಾಗಿದೆ.ಇಲ್ಲಿ ನಾವು Elements Compounds and Mixtures class 5 notes Knnada ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.Elements Compounds and Mixtures class 5 notes Knnada

Elements Compounds and Mixtures class 5 notes Knnada.

ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡು.

೧. ಧಾತುವಿನಲ್ಲಿ ಒಂದೇ ರೀತಿಯ __________ ಗಳ ಸಮೂಹವಿರುತ್ತದೆ. 

ಉತ್ತರ- ಕಣ 

೨. ಸಂಯುಕ್ತ ವಸ್ತುವಿನಲ್ಲಿ ವಿಭಿನ್ನ __________ ಪರಮಾಣುಗಳ ಸಮೂಹವಿರುತ್ತದೆ. 

ಉತ್ತರ- ಧಾತುಗಳ 

೩. ಸಂಯುಕ್ತ ವಸ್ತು ಎಂದರೆ _____________________________________

__________________________________________________________

__________________________________________________________

ಉತ್ತರ- ಎರಡು ಅಥವಾ ಹೆಚ್ಚು ಧಾತುಗಳು ರಾಸಾಯನಿಕವಾಗಿ ನಿರ್ದಿಷ್ಟ ಅನುಪಾತದಲ್ಲಿ 

ಸಂಯೋಗಗೊಂಡು ಹೊಸ ಲಕ್ಷಣದ ವಸ್ತುವಾದಲ್ಲಿ ಅದಕ್ಕೆ ಸಂಯುಕ್ತವಸ್ತು ಎನ್ನಲಾಗುತ್ತದೆ. 

ಉದಾಹರಣೆ : ನೀರು

೪. ಮಿಶ್ರಣ ಎಂದರೆ ___________________________________________

_________________________________________________________

_________________________________________________________

ಉತ್ತರ- ಎರಡು ಅಥವಾ ಹೆಚ್ಚು ವಸ್ತುಗಳು (ಧಾತುಗಳು ಅಥವಾ ಸಂಯುಕ್ತಗಳು) ಯಾವುದೇ 

ಅನುಪಾತದಲ್ಲಿ ಸೇರಿಸಲ್ಪಟ್ಟಾಗ, ಅವು ರಾಸಾಯನಿಕ ಬದಲಾವಣೆಯಾಗದೆ ತಮ್ಮ ಮೂಲ 

ಲಕ್ಷಣಗಳನ್ನು ಉಳಿಸಿಕೊಂಡಿದ್ದಲ್ಲಿ ಆ ವಸ್ತುವನ್ನು ಮಿಶ್ರಣ ಎನ್ನುತ್ತೇವೆ.

ಉದಾಹರಣೆ : ಮಣ್ಣು - ಮರಳು, ಜೇಡಿಮಣ್ಣು ಮತ್ತು ಹಲವು ಬಗೆಯ ಲವಣಗಳು

ಹಾಗೂ ಸಸ್ಯ ಮತ್ತು ಪ್ರಾಣಿಗಳ ಅವಶೇಷಗಳ ಮಿಶ್ರಣವಾಗಿದೆ.

೫. ಇವುಗಳಿಗೆ ಪ್ರತಿಯೊಂದಕ್ಕೂ ೫ ಉದಾಹರಣೆ ಕೊಡು (ಶಿಕ್ಷಕರ ಸಹಾಯ ಪಡೆ).

ಧಾತು ________ ________ ________ ________ ________

ಉತ್ತರ- ಆಕ್ಸಿಜನ್,ಪ್ಲುಟೋನಿಯಂ,ಹೈಡ್ರೋಜೆನ್, ಚಿನ್ನ, ಬೆಳ್ಳಿ, 

ಸಂಯುಕ್ತ ________ ________ ________ ________ ________

ಉತ್ತರ- ನೀರು,ಇಂಗಾಲದ ಡೈ ಆಕ್ಸೈಡ್, ಸೋಡಿಯಮ್ ಕ್ಲೋರೈಡ್ (ಉಪ್ಪು), ಸಕ್ಕರೆ, ಅಡುಗೆ ಸೋಡ. 

ಮಿಶ್ರಣ ________ ________ ________ ________ ________

ಉತ್ತರ- ಗಾಳಿ, ಮಣ್ಣು,ಸಮುದ್ರದ ನೀರು, ಮರಳು.

FAQS-

elements compounds and mixtures class 5 questions and answers.

ಸಂಯುಕ್ತ ಮತ್ತು ಮಿಶ್ರಣಗಳ ನಡುವಣ ವ್ಯತ್ಯಾಸಗಳನ್ನು ಪಟ್ಟಿ ಮಾಡು.  

"elements, compounds and mixtures class 5 notes"elements, compounds and mixtures class 5 notes

ನೈಸರ್ಗಿಕ ಧಾತು ಹಾಗೂ ಕೃತಕ ಧಾತುಗಳಿಗೆ ಉದಾಹರಣೆ ಕೊಡಿ. 
ಧಾತುಗಳು ನೈಸರ್ಗಿಕವಾಗಿ ಲಭ್ಯವಿದ್ದರೆ, ಇನ್ನೂ ಕೆಲವು ಧಾತುಗಳನ್ನು ಕೃತಕವಾಗಿ 
ಸೃಷ್ಟಿಸಲಾಗಿದೆ.ಉದಾಹರಣೆ : ನೈಸರ್ಗಿಕ ಧಾತು __ ಚಿನ್ನ  ಕೃತಕ ಧಾತು __ ಪ್ಲುಟೋನಿಯಂ 
ಧಾತುಗಳನ್ನು ಹೇಗೆ ವಿಂಗಡಿಸಲಾಗಿದೆ?
ಧಾತುಗಳನ್ನು ಲೋಹಗಳು ಮತ್ತು ಅಲೋಹಗಳೆಂದು ವಿಂಗಡಿಸಲಾಗಿದೆ.
ಅಣುಸೂತ್ರ ಎಂದರೇನು? 
ಅಣುವಿನಲ್ಲಿರುವ ಪರಮಾಣುಗಳ ಸಂಖ್ಯೆಗಳನ್ನು ರಾಸಾಯನಿಕ ಸಂಕೇತದ ಮೂಲಕ ಸೂಚಿಸುವುದನ್ನು ಅಣುಸೂತ್ರ ಎನ್ನುವರು.
ಅಣುಸೂತ್ರವು ಸಂಯುಕ್ತ ವಸ್ತು ಯಾವ ಧಾತುಗಳಿಂದ ಕೂಡಿದೆ ಎಂಬುದನ್ನು ತಿಳಿಸುವುದರ ಜೊತೆಗೆ ಪರಮಾಣುಗಳ ಸಂಖ್ಯೆಯನ್ನು ಸೂಚಿಸುತ್ತದೆ. 

elements, compounds and mixtures notes in kannada pdf.👇👇👇

pdf 1.3Mb

5th class evs question answer.👇👇👇👇

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.