ನಾವು ದಿನವೂ ಅನೇಕ ವಸ್ತುಗಳನ್ನು ನೋಡುತ್ತೇವೆ ಮತ್ತು ಕೆಲವನ್ನು ಬಳಸುತ್ತೇವೆ. ವಸ್ತುಗಳನ್ನು ದ್ರವ್ಯಗಳೆಂದೂ ಕರೆಯುತ್ತಾರೆ. ಒಂದು ವಸ್ತುವು ಇನ್ನೊಂದರಂತೆ ಇರುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ವಸ್ತುಗಳ ಲಕ್ಷಣಗಳು ಒಂದೇ ಆಗಿರುತ್ತವೆ. ವಸ್ತುಗಳು ಯಾವುದರಿಂದಾಗಿವೆ? ಈ ವಸ್ತುಗಳ ಸಾಮಾನ್ಯ ಲಕ್ಷಣಗಳು ಏನು? ಎಂಬ ಕುತೂಹಲ ಎಲ್ಲರಿಗೂ ಇದೆ.ಇಲ್ಲಿ ನಾವು KSEEB Solutions For Class 5 EVS Chapter 11 Nature of Matter ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.
KSEEB Solutions For Class 5 EVS Chapter 11 Nature of Matter.
ಚಟುವಟಿಕೆ : ನಿನ್ನ ಸುತ್ತಮುತ್ತ ಇರುವ ವಸ್ತುಗಳಲ್ಲಿ ಕನಿಷ್ಠ ಹತ್ತನ್ನಾದರೂ ಸಂಗ್ರಹಿಸು.
ಚಟುವಟಿಕೆ : ನೀನು ಸಂಗ್ರಹಿಸಿದ ವಸ್ತುಗಳನ್ನು ಒಂದೆಡೆ ಅಚ್ಚುಕಟ್ಟಾಗಿ ಜೋಡಿಸಿ ಆ
ವಸ್ತುಗಳ ಹೆಸರನ್ನು ಪಟ್ಟಿ ಮಾಡು.
________ ________ ________ ________ ________
________ ________ ________ ________ ________
ಉತ್ತರ-ಕಲ್ಲು,ಮಣ್ಣು,ಬಾಚಣಿಗೆ,ಸೀಮೆಸುಣ್ಣ, ಪೆನ್ನು,ಪೆನ್ಸಿಲ್,ಎರೇಸರ್, ಹೂವು,ನೋಟಬುಕ್,ಹತ್ತಿನೀರು,ಸಕ್ಕರೆ,ಬೆಲ್ಲ.
ನೀನು ಸಂಗ್ರಹಿಸಿದ ವಸ್ತುಗಳು ಕೆಳಗಿನಂತಿವೆಯೇ ಎಂದು ಗಮನಿಸಿ, (✔) ಅಥವಾ
(x) ಎಂದು ಗುರುತಿಸು.
ದ್ರವ್ಯ ಎಂದರೇನು?ಉತ್ತರ-ವಸ್ತುವನ್ನು ವೈಜ್ಞಾನಿಕವಾಗಿ ದ್ರವ್ಯವೆಂದು ಕರೆಯಲಾಗುತ್ತದೆ. ದ್ರವ್ಯಗಳೆಲ್ಲವೂ ಅತ್ಯಂತ ಸಣ್ಣ ಕಣಗಳಿಂದಾಗಿವೆ. ಯಾವ ವಸ್ತುವು ಸ್ಥಳವನ್ನು ಆಕ್ರಮಿಸುವುದೊ ಮತ್ತು ರಾಶಿಯನ್ನುಹೊಂದಿದೆಯೋ ಅದನ್ನು ದ್ರವ್ಯ ಎನ್ನುವರು.
ಹುಡಿ ಕೆಳಗೆ ಚೆಲ್ಲದಂತೆ ಮತ್ತೆ ಮತ್ತೆ ಬಟ್ಟಲಿಗೆ ಸುರಿಯಲು ಪ್ರಯತ್ನಿಸು.ಸಾಧ್ಯವಾಯಿತೆ?ಉತ್ತರ--ಇಲ್ಲ
ಬಟ್ಟಲ ಪೂರ್ತಿ ಹುಡಿ ತುಂಬಿತೆ?-ಉತ್ತರ-ಹೌದು
ಬಟ್ಟಲಲ್ಲಿ ಹೆಚ್ಚಿನ ಹುಡಿಯನ್ನು ತುಂಬಲು ಏನು ಮಾಡಬೇಕಾಯಿತು? ಏಕೆ?
ಉತ್ತರ-ಒತ್ತಡವನ್ನು ಹಾಕಬೇಕಾಯಿತು, ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ.
ಡಬ್ಬದಲ್ಲಿದ್ದ ಎಲ್ಲಾ ಹುಡಿಯನ್ನು ಬಟ್ಟಲಲ್ಲಿ ತುಂಬಲು ಸಾಧ್ಯವಾಗಲಿಲ್ಲ. ಏಕೆ?
ಉತ್ತರ-ಬಟ್ಟಲಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲ.ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ.
KSEEB Solutions For Class 5 EVS Chapter 11 Nature of Matter.
ನಿನ್ನ ಸುತ್ತಮುತ್ತ ಕಾಣಸಿಗುವ ಕೆಲವು ದ್ರವ್ಯಗಳ ಹೆಸರನ್ನು ಬರೆ.
____________________ ____________________
____________________ ____________________
____________________ ____________________
____________________ ____________________
ಉತ್ತರ-ಕಲ್ಲು,ಮಣ್ಣು,ಬಾಚಣಿಗೆ,ಸೀಮೆಸುಣ್ಣ, ಪೆನ್ನು,ಪೆನ್ಸಿಲ್,ಎರೇಸರ್, ಹೂವು,ನೋಟಬುಕ್,ಹತ್ತಿನೀರು,ಸಕ್ಕರೆ,ಬೆಲ್ಲ.
kseeb solutions for class 5 evs chapter 11 kannada medium.
ಆಲೋಚಿಸು : ವಾಹನ ಚಕ್ರದ ಟ್ಯೂಬ್‌ಗೆ ಹೆಚ್ಚು ವಾಯುವನ್ನು ತುಂಬಿದಾಗ ಟ್ಯೂಬ್ ಏನಾಗುತ್ತದೆ? ಏಕಿರಬಹುದು?
ಉತ್ತರ-ಟ್ಯೂಬ್ ತೀವ್ರವಾಗಿ ಸ್ಫೋಟಗೊಳ್ಳುತ್ತದೆ. ನಿಗಧಿತ ಸ್ಥಳಕ್ಕಿಂತ ಹೆಚ್ಚಿನ ಕಣಗಳು ಟ್ಯೂಬ್ನಲ್ಲಿ ಸೇರಿಸಲು ಸಾಧ್ಯವಿಲ್ಲ.
ಚಟುವಟಿಕೆ : * ದ್ರವ್ಯದ ಲಕ್ಷಣಗಳು ಯಾವುವು? ಇಲ್ಲಿ ಬರೆ
ಉತ್ತರ-೧. ದ್ರವ್ಯವು ಸ್ಥಳವನ್ನು ಆಕ್ರಮಿಸುತ್ತದೆ
೨. ದ್ರವ್ಯಕ್ಕೆ ರಾಶಿ (ದ್ರವ್ಯರಾಶಿ) ಇದೆ.
ಚಟುವಟಿಕೆ : ಸುಳಿವು ಬಳಸಿ ಕೆಳಗಿನ ಅಂಕಣ ತುಂಬು.
- ಉರಿಯಲು ಬೇಕು- ಕ_____ಗೆ.
- ಕುಡಿಯಲು ಬೇಕು- ______ರು.
- ಉಸಿರಾಡಲು ಬೇಕು- ವಾ______.
ಉತ್ತರ-ಉರಿಯಲು ಬೇಕು- ಕಟ್ಟಿಗೆ
ಕುಡಿಯಲು ಬೇಕು-ನೀರು
ಉಸಿರಾಡಲು ಬೇಕು- ವಾಯು
kseeb solutions for class 5 evs chapter 11.
ಚಟುವಟಿಕೆ : ನಿನಗೆ ತಿಳಿದಿರುವ ಘನ, ದ್ರವ, ಅನಿಲ ರೂಪದ ವಸ್ತುಗಳನ್ನು ಪಟ್ಟಿ ಮಾಡು.
ಘನ : ________ ________ ________ ________ ________
ದ್ರವ : ________ ________ ________ ________ ________
ಅನಿಲ : ________ ________ ________ ________ ________
ಉತ್ತರ-
ಘನ :ಕಲ್ಲು,ಇಟ್ಟಿಗೆ,ಮೇಣದ ಬತ್ತಿ, ಸೀಮೆ ಸುಣ್ಣ, ಪೆನ್ನು.
ದ್ರವ :ಹಾಲು,ನೀರು,ಮಜ್ಜಿಗೆ,ಪೆಟ್ರೋಲ್,ಸೀಮೆ ಎಣ್ಣೆ,
ಅನಿಲ :ಹೊಗೆ,ನೀರಾವಿ,
ಕೆಳಗೆ ಹೆಸರಿಸಿದ ವಸ್ತುಗಳು ಯಾವ ಗುಂಪಿಗೆ ಸೇರಿದವು ಎಂದು ಆಲೋಚಿಸಿ ಬರೆ.
ಮಜ್ಜಿಗೆ, ಮೇಣದ ಬತ್ತಿ, ಮೊಸರು, ಸೀಮೆಎಣ್ಣೆ, ಇದ್ದಲು, ಜೇನುತುಪ್ಪ, ಇಟ್ಟಿಗೆ ಚೂರು,
ಚಟುವಟಿಕೆ : ಒಂದು ಗೋಲಿಯನ್ನು ಮೇಜು, ತಟ್ಟೆ, ಬೀಕರ್-ಹೀಗೆ ಬೇರೆ ಕಡೆಗಳಲ್ಲಿ ಇಟ್ಟು ನೋಡು. ಆಕಾರ ಮತ್ತು ಗಾತ್ರದಲ್ಲಿ ವ್ಯತ್ಯಾಸವಾಯಿತೆ?
ಉತ್ತರ-ಇಲ್ಲ. ಘನ ವಸ್ತುವು ಯಾವುದೇ ಸ್ಥಳದಲ್ಲಿದ್ದರೂ ಅದರ ಆಕಾರ ಮತ್ತು ಗಾತ್ರ ಬದಲಾಗುವುದಿಲ್ಲ.
ಚಟುವಟಿಕೆ : ಊದುಬತ್ತಿಯನ್ನು ಉರಿಸಿ, ಅದರ ಹೊಗೆಯನ್ನು ಜಾಡಿಯೊಳಗೆ
ಹರಡುವಂತೆ ಮಾಡು. ಅನಿಲವು ಯಾವ ಆಕಾರ ಹೊಂದಿದೆ?
ಉತ್ತರ-ಅನಿಲವು ತಾನಿರುವ ಪಾತ್ರೆಯ ತುಂಬೆಲ್ಲ ಹರಡುತ್ತದೆ. ಹಾಗು ಗಾತ್ರದಲ್ಲಿಯೂ ಬದಲಾಗುತ್ತದೆ.
ಉತ್ತರ-ಗಾಳಿ ತುಂಬಿದ ಬಲೂನ್ ತೂಕದಿಂದ ಕೆಳಗೆ ಬರುತ್ತದೆ, ಗಾಳಿ ತುಂಬದ ಬಲೂನನ್ನು ಕಡಿಮೆ ತೂಕದಿಂದ ಕೆಳಗೆ ಬರುತ್ತದೆ. ಇದರಿಂದ ನಮಗೆ ತಿಳಿಯುವುದೇನೆಂದರೆ, ಗಾಳಿಗೆ ತೂಕವಿದೆ ಎಂಬುದನ್ನು ತಿಳಿಯಬಹುದು.
ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡು.
ಉತ್ತರ-ಕಬ್ಬಿಣದ ಗುಂಡು ನೇರವಾಗಿ ಬಳೆಯೊಳಗೆ ಇಳಿಯಿತು.ಉತ್ತರ-ಕಬ್ಬಿಣದ ಗುಂಡು ಬಳೆಯೊಳಗೆ ಇಳಿಯುವುದಿಲ್ಲ, ಏಕೆಂದರೆ-ಕಬ್ಬಿಣ ಒಂದು ಲೋಹ , ಲೋಹಗಳನ್ನು ಕಾಯಿಸಿದಾಗ ಹಿಗ್ಗುತ್ತವೆ.
ಉತ್ತರ-ಮಂಜುಗಡ್ಡೆಯು ವಾತಾವರಣದ ಉಷ್ಣತೆಯಿಂದ, ಘಾನಾ ಸ್ಥಿತಿಯಿಂದ ದ್ರವ ಸ್ಥಿತಿಗೆ ಬದಲಾಗುತ್ತದೆ.
KSEEB Solutions For Class 5 EVS Chapter 11 Nature of Matter.
೧. ಮಂಜುಗಡ್ಡೆಯನ್ನು ಬಿಸಿ ಮಾಡಿದಾಗ ಕರಗಿ ನೀರಾಗುತ್ತದೆ.
೨. ನೀರನ್ನು ಬಿಸಿ ಮಾಡಿದಾಗ ನೀರಾವಿ ಅಂದರೆ ಅನಿಲ ಸ್ಥಿತಿಗೆ ಬದಲಾಗುತ್ತದೆ.
೩. ನೀರಾವಿಯನ್ನು ತಂಪು ಮಾಡಿದಾಗ ದ್ರವ ಸ್ಥಿತಿಗೆ ಬದಲಾಗುತ್ತದೆ.
೪. ನೀರನ್ನು ಪೂರ್ತಿ ತಂಪು ಮಾಡಿದಾಗ ಮಂಜುಗಡ್ಡೆಯಾಗುತ್ತದೆ.
ಉತ್ತರ-ವಸ್ತುಗಳನ್ನು ಬಿಸಿಮಾಡಿದಾಗ ಅವು ಹಿಗ್ಗುತ್ತವೆ. ಇದರಿಂದ ಕಬ್ಬಿಣವನ್ನು ಅಗತ್ಯ ಆಕಾರಕ್ಕೆ ತರಬಹುದು.
ಉಷ್ಣದಿಂದ ವಸ್ತುವಿನಲ್ಲಾದ ಬದಲಾವಣೆಗಳಿಗೆ ಉದಾಹರಣೆ ಬರೆ.
____________________________________________________
____________________________________________________
ಉತ್ತರ-ಮಂಜುಗಡ್ಡೆಯನ್ನು ಬಿಸಿ ಮಾಡಿದಾಗ ಕರಗಿ ನೀರಾಗುತ್ತದೆ.
ನೀರನ್ನು ಬಿಸಿ ಮಾಡಿದಾಗ ನೀರಾವಿ ಅಂದರೆ ಅನಿಲ ಸ್ಥಿತಿಗೆ ಬದಲಾಗುತ್ತದೆ.
ಉತ್ತರ-ಬಿಸಿ ಮಾಡುವುದನ್ನು ನಿಲ್ಲಿಸಿದಾಗ ನಿಧಾನವಾಗಿ ಆವಿಯು ದ್ರವ ರೂಪಕ್ಕೆ ಬದಲಾಗುತ್ತದೆ.
KSEEB Solutions For Class 5 EVS Chapter 11 Nature of Matter.
ಹತ್ತಿಯು ಹಗುರವಾಗಿದೆ ಮತ್ತು ಕಬ್ಬಿಣವು ಭಾರವಾಗಿದೆ - ಎಂದು ಸಾಮಾನ್ಯವಾಗಿ
ಹೇಳಲು ಕಾರಣವೇನು? ಇಲ್ಲಿ ಬರೆ.
_____________________________________________________
____________________________________________________
ಉತ್ತರ-ತೂಕ ಕಡಿಮೆ ಇರುವ ವಸ್ತುವಿನ ಸಾಂದ್ರತೆ ಕಡಿಮೆ ಎಂತಲೂ, ಹೆಚ್ಚು ತೂಕವಿರುವ ವಸ್ತುವಿನ ಸಾಂದ್ರತೆ ಹೆಚ್ಚು ಎಂತಲೂ ಹೇಳುತ್ತೇವೆ.
ಉತ್ತರ-ನೀರಿನ ಸಾಂದ್ರತೆಯು ಎಣ್ಣೆಯ ಸಾಂದ್ರತೆಗಿಂತ ಹೆಚ್ಚಾಗಿದ್ದು, ಆದುದರಿಂದ ನೀರು ಮತ್ತು ಎಣ್ಣೆ ಬೇರೆ ಬೇರೆಯಾಗಿರುತ್ತದೆ.
ಆಲೋಚಿಸು : 1kg ಹತ್ತಿ ಮತ್ತು 1kgಕಬ್ಬಿಣ-ಇವುಗಳಲ್ಲಿ ಯಾವುದು ಹೆಚ್ಚಿನ ಭಾರ ಹೊಂದಿದೆ?
ಉತ್ತರ-ಎರಡು ಸಮನಾಗಿರುತ್ತವೆ.
ನೀರಿನ ಮೇಲೆ ತೇಲುವ ಯಾವುದಾದರೂ ನಾಲ್ಕು ವಸ್ತುಗಳ ಹೆಸರು ಬರೆ.
೧. _______________________ ೨. _______________________
೩. _______________________ ೪. _______________________
ಉತ್ತರ-ಮರದ ತುಂಡು, ಪ್ಲಾಸ್ಟಿಕ್ ಬಾಚಾಣಿಗೆ, ಎಲೆ , ರಬ್ಬರ್ ಟ್ಯೂಬ್
ಚಟುವಟಿಕೆ : ಇಲ್ಲಿ ಕೊಟ್ಟಿರುವ ವಸ್ತುಗಳನ್ನು ನೀರಿಗೆ ಹಾಕಿ ಕದಡಿ ನೋಡು. ವಸ್ತುಗಳು
ಏನಾದವು ಎಂದು ಸೂಚಿಸಿದಲ್ಲಿ ಬರೆ.
ಉಪ್ಪು, ಮರಳು, ಸಕ್ಕರೆ, ಸೀಮೆಎಣ್ಣೆ,ಅರಶಿನ ಹುಡಿ,ಕಲ್ಲು, ಕಲ್ಲುಸಕ್ಕರೆ, ತೆಂಗಿನೆಣ್ಣೆ, ಹಾಲು.
KSEEB Solutions For Class 5 EVS Chapter 11 Nature of Matter.
FAQS-
ಕಣ ಎಂದರೇನು?
ದ್ರವ್ಯಗಳೆಲ್ಲವೂ ಅತ್ಯಂತ ಸಣ್ಣ ಕಣಗಳಿಂದಾಗಿವೆ. ದ್ರವ್ಯದ ಅತೀ ಸೂಕ್ಷö್ಮವಾದ ಚೂರನ್ನು ಕಣ ಎನ್ನುತ್ತೇವೆ.
ದ್ರವ್ಯದ ಮೂರು ಸ್ಥಿತಿಗಳಾವುವು?
ದ್ರವ್ಯವನ್ನು ಘನ, ದ್ರವ ಮತ್ತು ಅನಿಲ - ಈ ಮೂರು ಸ್ಥಿತಿಯಲ್ಲಿ ಗುರುತಿಸುತ್ತೇವೆ.
ಉತ್ಪತನ ಎಂದರೇನು?
ಘನ ಸ್ಥಿತಿಯ ವಸ್ತುಗಳು ನೇರವಾಗಿ ಅನಿಲಸ್ಥಿತಿಗೆ ಮತ್ತು ಅನಿಲ ಸ್ಥಿತಿಯಿಂದ ನೇರವಾಗಿ ಘನ ಸ್ಥಿತಿಗೆ ವಸ್ತು ಬದಲಾಗುವುದನ್ನು ಉತ್ಪತನ ಎನ್ನುವರು.
ಉದಾಹರಣೆ : ಕರ್ಪೂರ, ಅಯೋಡಿನ್.
ದ್ರವ್ಯರಾಶಿ ಎಂದರೇನು?
ಒಂದು ವಸ್ತುವಿನಲ್ಲಿ ಅಡಕವಾಗಿರುವ ಕಣಗಳ ಮೊತ್ತವನ್ನು ರಾಶಿ (ದ್ರವ್ಯರಾಶಿ) ಎನ್ನುವರು. ಇದನ್ನು
ತೂಕದ ಮುಖಾಂತರ ತಿಳಿಯಲಾಗುವುದು. ರಾಶಿಯ ಅಂತಾರಾಷ್ಟ್ರೀಯ ಮಾನ ಕಿಲೊಗ್ರಾಮ್ (KG).
ಸಾಂದ್ರತೆ ಎಂದರೇನು?
ಒಂದು ವಸ್ತುವಿನ ಏಕಮಾನ ಗಾತ್ರದಲ್ಲಿರುವ ರಾಶಿಯೇ ಸಾಂದ್ರತೆ.
ಒತ್ತಡ ಎಂದರೇನು?
ಒಂದು ಏಕಮಾನ ಪ್ರದೇಶದ ಮೇಲೆ ಪ್ರಯೋಗಿಸಲ್ಪಡುವ ಬಲವೇ ಒತ್ತಡ.
ಪ್ಲವನತೆ ಎಂದರೇನು?
ವಸ್ತು ನೀರಿಗೆ ಬಿದ್ದಾಗ, ಅದು ಕೆಳಮುಖ ಬಲವನ್ನು ಪ್ರಯೋಗಿಸುತ್ತದೆ, ಅದೇ ಸಮಯದಲ್ಲಿ ನೀರು ವಸ್ತುವಿನ ಮೇಲೆ ಮೇಲ್ಮುಖ ಬಲ ಪ್ರಯೋಗಿಸುತ್ತದೆ. ಮೇಲ್ಮುಖ ತಳ್ಳುಬಲ ಜಾಸ್ತಿಯಾದರೆ ವಸ್ತುವು ನೀರಿನ ಮೇಲೆ ತೇಲುತ್ತದೆ. ಈ ಮೇಲ್ಮುಖವಾಗಿ ತಳ್ಳುವ ಬಲಕ್ಕೆ ಪ್ಲವನತೆ ಎನ್ನುವರು.
ವಿಲೀನತೆ ಎಂದರೇನು?
ಕೆಲವು ವಸ್ತುಗಳು ನೀರಿನಲ್ಲಿ ಕರಗುತ್ತವೆ. ಇದನ್ನು ವಿಲೀನತೆ.
YOU CAN DOWNLOAD THE ABOVE NOTES BY CLICKING BELOW LINK👇👇👇👇👇
YOU CAN ALSO READ THE OTHER LESSON NOTES HERE 👇👇👇👇
If you have any doubts please comment