ADS

KSEEB Solutions For Class 5 EVS Chapter-7 Water in Kannada

ಸಸ್ಯ ಮತ್ತು ಪ್ರಾಣಿಗಳು ಜೀವಿಸಲು ನೀರು ಅತ್ಯವಶ್ಯಕ. ನೀರಿಲ್ಲದೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ನೀರು ಎಲ್ಲರ ಮೂಲಭೂತ ಅಗತ್ಯವಾಗಿದೆ. ನೀರಿನಿಂದ ಅನೇಕ ಉಪಯೋಗಗಳಿವೆ. ಆದ್ದರಿಂದ ನೀರು ಬಹು ಮುಖ್ಯವಾದ ಸಂಪನ್ಮೂಲವಾಗಿದೆ. ಇದನ್ನು ಜೀವಜಲ ಎಂದೂ ಕರೆಯುತ್ತಾರೆ. ಭೂಮಿಯ ಮೇಲ್ಭಾಗ ಶೇ. ೭೧ ಭಾಗದಷ್ಟು ನೀರಿನಿಂದ ಆವರಿಸಿದೆ. ಇಲ್ಲಿ ನಾವು KSEEB Solutions For Class 5 EVS Chapter-7 ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.KSEEB Solutions For Class 5 EVS Chapter-7

KSEEB Solutions For Class 5 EVS Chapter-7.

ಹಿಂದಿನ ತರಗತಿಯಲ್ಲಿ ಕಲಿತ ಭೂಮಿಯ ಮೇಲಿನ ನೀರಿನ ಹಂಚಿಕೆಯನ್ನು ನೆನಪಿಸಿಕೊ. ಈ ಪ್ರಶ್ನೆಗಳಿಗೆ ಉತ್ತರಿಸು.

೧.  ಭೂಮಿಯ ಮೇಲೆ ನೀರು ಹೆಚ್ಚಾಗಿ ಎಲ್ಲಿ ಕಂಡು ಬರುತ್ತದೆ?

__________________________________________________

೨.  ಬಳಸಬಹುದಾದ ಸಿಹಿ ನೀರಿನ ಪ್ರಮಾಣ ಎಷ್ಟು?

__________________________________________________

೩. ಸಿಹಿ ನೀರು ಯಾವ ಆಕರಗಳಲ್ಲಿ ದೊರೆಯುತ್ತದೆ?

__________________________________________________

೪. ನಿನಗೆ ತಿಳಿದಿರುವ ನೀರಿನ ವಿವಿಧ ಆಕರಗಳ ಹೆಸರನ್ನು ಇಲ್ಲಿ ಬರೆ. 

_____________________ _____________________

_____________________ _____________________

_____________________ _____________________

_____________________ ___________________

೧.  ಭೂಮಿಯ ಮೇಲೆ ನೀರು ಹೆಚ್ಚಾಗಿ ಎಲ್ಲಿ ಕಂಡು ಬರುತ್ತದೆ?

ಉತ್ತರ- ಸಮುದ್ರ ಮತ್ತು ಸಾಗರಗಳಲ್ಲಿ.

೨.  ಬಳಸಬಹುದಾದ ಸಿಹಿ ನೀರಿನ ಪ್ರಮಾಣ ಎಷ್ಟು?

ಉತ್ತರ-ಶೇಕಡಾ ಮೂರು. 

೩. ಸಿಹಿ ನೀರು ಯಾವ ಆಕರಗಳಲ್ಲಿ ದೊರೆಯುತ್ತದೆ?

ಉತ್ತರ-ನದಿ, ಹಳ್ಳಗಳು, ಕೆರೆ, ಕೊಳ, ಬಾವಿ, ಜಲಾಶಯಗಳು, ಚಿಲುಮೆಗಳು. 

೪. ನಿನಗೆ ತಿಳಿದಿರುವ ನೀರಿನ ವಿವಿಧ ಆಕರಗಳ ಹೆಸರನ್ನು ಇಲ್ಲಿ ಬರೆ. 

ಉತ್ತರ-ನದಿ, ಹಳ್ಳಗಳು, ಕೆರೆ, ಕೊಳ, ಬಾವಿ, ಜಲಾಶಯಗಳು, ಚಿಲುಮೆಗಳು, ಸಮುದ್ರ, ಸಾಗರಗಳು. 

ಕರ್ನಾಟಕದ ಕೆಲವು ಮುಖ್ಯ ನದಿಗಳನ್ನು ಹೆಸರಿಸು. 

ಉತ್ತರ-ಕಾವೇರಿ, ಹೇಮಾವತಿ, ಶರಾವತಿ, ತುಂಗಾ-ಭದ್ರಾ, ಷಿಂಷಾ, ನೇತ್ರಾವತಿ, ಅರ್ಕಾವತಿ. 

ನಿನಗೆ ತಿಳಿದಿರುವ ಕರ್ನಾಟಕದ ಅಣೆಕಟ್ಟುಗಳ ಹೆಸರುಗಳನ್ನು ಬರೆ. 

ಉತ್ತರ- ಕೃಷ್ಣರಾಜಸಾಗರ ಆಣೆಕಟ್ಟು -ಕೆ.ಆರ್.ಎಸ. ತುಂಗಭದ್ರಾ ಡ್ಯಾಮ್ , ಹೇಮಾವತಿ ಆಣೆಕಟ್ಟು, 

ಇಲ್ಲಿರುವ ಚಿತ್ರಗಳ ಸಹಾಯದಿಂದ ಕೆರೆ ಮತ್ತು ಅಣೆಕಟ್ಟಿನ ನಡುವಿನ ವ್ಯತ್ಯಾಸ ಗುರುತಿಸಿ ಚೌಕಗಳಲ್ಲಿ ಬರೆ. ಆನಂತರ ಎರಡರ ಉಪಯೋಗಗಳನ್ನೂ ಬರೆ. KSEEB Solutions For Class 5 EVS Chapter-7

KSEEB Solutions For Class 5 EVS Chapter-7

KSEEB Solutions For Class 5 EVS Chapter-7

ನಿನ್ನ ಮನೆಯಲ್ಲಿ ಮತ್ತು ಶಾಲೆಯಲ್ಲಿ ನೀರನ್ನು ಯಾವ ಆಕರದಿಂದ ಪಡೆಯುತ್ತಾರೆ.ಎಂಬುದನ್ನು ಇಲ್ಲಿ ಬರೆ.ನೀರಿನ ಉಪಯೋಗಗಳನ್ನು ಪಟ್ಟಿ ಮಾಡು.

KSEEB Solutions For Class 5 EVS Chapter-7 water

KSEEB Solutions For Class 5 EVS Chapter-7 water.

ಮಾಡಿ ನೋಡು : ಹರಿಯುತ್ತಿರುವ  ಮಳೆ ನೀರನ್ನು ಒಂದು ಗಾಜಿನ ಬಾಟಲಿನಲ್ಲಿ ಸಂಗ್ರಹಿಸು. ಮಳೆ ಬಂದಾಗ ಮಳೆಯ ನೀರನ್ನು ನೇರವಾಗಿ ಬಾಟಲಿನಲ್ಲಿ ಸಂಗ್ರಹಿಸು ಎರಡರ ಬಣ್ಣವನ್ನು ವೀಕ್ಷಿಸು. ಏನು ವ್ಯತ್ಯಾಸ ಗುರುತಿಸಿದೆ ಎಂದು ಬರೆ.

ಉತ್ತರ-ಹರಿಯುತ್ತಿರುವ  ಮಳೆ ನೀರಿನಲ್ಲಿ ಮಣ್ಣಿನಲ್ಲಿರುವ ಹಲವು ಕಣಗಳು ಕರಗಿರುತ್ತವೆ ಆದುದರಿಂದ ಅದರ ಬಣ್ಣ ಮಣ್ಣಿನ ಬಣ್ಣ ಹೊಂದಿರುತ್ತದೆ. ಮಳೆ ಬಂದಾಗ ಮಳೆಯ ನೀರನ್ನು ನೇರವಾಗಿ ಬಾಟಲಿನಲ್ಲಿ ಸಂಗ್ರಹಿಸಿದಾಗ ಯಾವುದೇ ಬಣ್ಣ ಹೊಂದಿರದೆ ಬಣ್ಣ ರಹಿತವಾಗಿರುತ್ತದೆ. 

ಎರಡು ಲೋಟ ನೀರನ್ನು ತೆಗೆದುಕೊಂಡು, ಒಂದು ಲೋಟದ ನೀರಿಗೆ ಒಂದು ಚಮಚ ಸಕ್ಕರೆಯನ್ನು, ಮತ್ತೊಂದು ಲೋಟದ ನೀರಿಗೆ ಒಂದು ಚಮಚ ಉಪ್ಪನ್ನು ಹಾಕಿ ಚೆನ್ನಾಗಿ ಕಲಕು. ಎರಡೂ ನೀರಿನ ರುಚಿ ನೋಡು. ಇದರಿಂದ ನೀನೇನು ತಿಳಿದೆ ಎಂದು ಬರೆ.

ಉತ್ತರ-ಸಕ್ಕರೆ ಹಾಕಿದ ನೀರು ಸಿಹಿಯಾಗಿರುತ್ತದೆ. ಉಪ್ಪು ಬೆರೆಸಿದ ನೀರಿನ ರುಚಿ ಉಪ್ಪಾಗಿರುತ್ತದೆ. ಶುದ್ಧ ನೀರಿಗೆ ಬಣ್ಣ, ವಾಸನೆ ಮತ್ತು ರುಚಿ ಇರುವುದಿಲ್ಲ. ನೀರಿನ ರುಚಿಗೆ ಅದರಲ್ಲಿ ವಿಲೀನವಾಗಿರುವ ಲವಣ ಮತ್ತು ಖನಿಜಾಂಶಗಳು ಕಾರಣ

ಇಲ್ಲಿ ಕೊಟ್ಟಿರುವ ಚಟುವಟಿಕೆಗಳನ್ನು ಶಿಕ್ಷಕರು/ಪೋಷಕರ ಸಹಾಯದೊಂದಿಗೆ ಮಾಡು. ನಂತರ ಅದಕ್ಕೆ ಸಂಬಂಧಿಸಿದ ಹೇಳಿಕೆಗಳಲ್ಲಿ ಸರಿ (✔), ತಪ್ಪು  (x) ಗುರ್ತಿಸು. ತಪ್ಪಾಗಿರುವ ಹೇಳಿಕೆಗಳನ್ನು ಸರಿಪಡಿಸಿ ಬರೆ.

KSEEB Solutions For Class 5 EVS Chapter-7
ನಿನ್ನ ಕುಟುಂಬ ಅಥವಾ ನೆರೆಯ ಕುಟುಂಬಗಳಲ್ಲಿ ನೀರನ್ನು ಪೂಜಿಸುವ ಪದ್ಧತಿಯಿದ್ದರೆ 
ಅದು ಯಾವುದು ಮತ್ತು ಯಾವಾಗ ಎಂಬುದನ್ನು ಬರೆ.

ಉತ್ತರ-ಮಳೆಯೂ ಉತ್ತಮವಾಗಿ ಬಂದು ಕೆರೆ ಕಟ್ಟೆಗಳು ತುಂಬಿದಾಗ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸುತ್ತಾರೆ, ಶುಭ ಸಮಾರಂಭಗಳಲ್ಲಿ ಉದಾಹರಣೆಗೆ- ಗೃಹಪ್ರವೇಶ, ಮದುವೆ, ನಾಮಕರಣ, ಕಳಸದಲ್ಲಿ ನೀರನ್ನು ಇಟ್ಟು ಪೂಜಿಸುತ್ತಾರೆ. 

ನೀರಿನ ಆಕರಗಳು ಏಕೆ ಕಲುಷಿತಗೊಳ್ಳುತ್ತವೆ?

ಉತ್ತರ-ನೀರಿನ ಮೂಲಗಳಾದ ಕೆರೆ, ಕೊಳ ,ನದಿ,ಹಳ್ಳ, ಇತ್ಯಾದಿಗಳಲ್ಲಿ ಬಟ್ಟೆ ತೊಳೆಯುವುದು, ಜಾನುವಾರುಗಳನ್ನು ತೊಳೆಯುವುದು, ಚರಂಡಿ ನೀರನ್ನು ನೇರವಾಗಿ ಈ ಮೂಲಗಳಿಗೆ ಸೇರಿಸುವುದರಿಂದ, ಜೊತೆಗೆಕಾರ್ಖಾನೆಗಳಿಂದ ರಾಸಾಯನಿಕ ತ್ಯಾಜ್ಯವನ್ನು ಕೆಲವೊಮ್ಮೆ ನದಿಗಳು ಮತ್ತು ಸರೋವರಗಳಿಗೆ ಅಥವಾ ನೇರವಾಗಿ ನೆಲಕ್ಕೆ ಸುರಿಯಲಾಗುತ್ತದೆ. ಕೃಷಿ ಭೂಮಿಗೆ ಅನ್ವಯಿಸಲಾದ ಕೀಟನಾಶಕಗಳು (ಕೀಟಗಳನ್ನು ಕೊಲ್ಲುವ ರಾಸಾಯನಿಕಗಳು) ಮೇಲ್ಮೈ ನೀರು ಮತ್ತು ಅಂತರ್ಜಲವನ್ನು ಹೆಚ್ಚಾಗಿ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುತ್ತವೆ. ಗ್ಯಾಸೋಲಿನ್‌ನಂತಹ ದ್ರವಗಳಿಗೆ ಭೂಗತ ಶೇಖರಣಾ ಟ್ಯಾಂಕ್‌ಗಳಿಂದ ಸೋರಿಕೆಯು ನೇರವಾಗಿ ಅಂತರ್ಜಲಕ್ಕೆ ಹೋಗುತ್ತದೆ.

KSEEB Solutions For Class 5 EVS Chapter-7.

FAQS-

ನೀರಿನ ಮುಖ್ಯ ಮೂಲ ಯಾವುದು?

ನೀರಿನ ಮುಖ್ಯ ಮೂಲ ಮಳೆ. 

ಭೂಮಿಯ ಮೇಲೆ ನೀರಿನ ಅತೀ ದೊಡ್ಡ ಆಕರ ಯಾವುವು?

ಭೂಮಿಯ ಮೇಲೆ ಸಾಗರಗಳು ನೀರಿನ ಅತೀ ದೊಡ್ಡ ಆಕರಗಳಾಗಿವೆ. 

ಚಿಲುಮೆ ಎಂದರೇನು?

ಭೂ ಕವಚದ ಕೆಳಗೆ ಸಂಗ್ರಹಗೊಂಡಿರುವ ಅಂತರ್ಜಲವು ಒತ್ತಡದಿಂದಾಗಿ ರಂಧ್ರಗಳ ಮೂಲಕ ಹೊರ ಹೊಮ್ಮುತ್ತದೆ. ಇದನ್ನು ಚಿಲುಮೆ ಎನ್ನುತ್ತಾರೆ. 

ಬಾವಿಗಳಲ್ಲಿ ಎಷ್ಟು ವಿಧ?

ಬಾವಿಗಳಲ್ಲಿ ಎರಡು ವಿಧ ತೆರೆದಬಾವಿ, ಕೊಳವೆ ಬಾವಿ. 

Water Class 5 Questions Answers In PDF  👇👇👇

pdf 2.3Mb

YOU CAN ALSO READ-👇👇👇👇👇

















ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.