5th EVS Chapter 1st Living World Solutions in Kannada
0science teaching resourcesಮಾರ್ಚ್ 11, 2023
5ನೇ ತರಗತಿ, ಪರಿಸರ ಅಧ್ಯಯನ ಅಧ್ಯಾಯ ಒಂದು ಜೀವ ಪ್ರಪಂಚ - ಈ ಅಧ್ಯಾಯದಲ್ಲಿ ಜೀವಿಗಳು ಹಾಗೂ ನಿರ್ಜೀವ ವಸ್ತುಗಳು, ಸಸ್ಯದ ಆಹಾರ ತಯಾರಿಕೆಯ ಕ್ರಮ, ಜೀವನ ಚಕ್ರ ಹಾಗೂ ವಿವಿಧ ಬಗೆಯ ಸಸ್ಯಗಳ ಪರಿಚಯ ಆಹಾರ ಸೇವನೆಯ ಆಧಾರದ ಮೇಲೆ ಪ್ರಾಣಿಗಳನ್ನು ವಿಂಗಡಣೆ, ಸಸ್ಯ ಮತ್ತು ಪ್ರಾಣಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ನೀವೆಲ್ಲರೂ ಕಲಿತಿದ್ದೀರಿ ಈ ಬ್ಲಾಗ್ ಲೇಖದಲ್ಲಿ, 5th EVS Chapter 1st Living World Solutions in Kannada ಅಧ್ಯಾಯದಲ್ಲಿ ಕೇಳಲಾಗಿರುವ ಪ್ರಶ್ನೋತ್ತರಗಳಿಗೆ ಮಾದರಿ ಉತ್ತರಗಳು ಹಾಗೂ ಪದೇ ಪದೇ ಈ ಅಧ್ಯಾಯದಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ, ಈ ಉತ್ತರಗಳು ನಿಮ್ಮ ಪರೀಕ್ಷಾ ತಯಾರಿಗೆ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.
5th EVS Chapter 1st Living World Solutions in Kannada.
JEEVA PRAPANCHA.
ಕೆಳಗಿನ ಪಟ್ಟಿಯಲ್ಲಿ ಪರಿಸರದಲ್ಲಿನ ಕೆಲವು ಅಂಶಗಳನ್ನು ಹಾಗೂ ಅವು ಕೆಲವು ಲಕ್ಷಣಗಳನ್ನು ನೀಡಿದೆ. ಗಮನವಿಟ್ಟು ಓದು. ಪ್ರತಿಯೊಂದು ಮುಂದೆ ಸೂಚಿಸಿದ ಲಕ್ಷಣಗಳು ಕಂಡುಬಂದರೆ (/) ಗುರುತು ಕಂಡು ಬರದಿದ್ದರೆ (X) ಗುರುತು ಹಾಕು.
ಪರಿಸರದ ಅಂಶಗಳು
ಲಕ್ಷಣಗಳು
ಬೆಳವಣಿಗೆ
ಆಹಾರ ಸೇವನೆ
ಚಲನೆ
ಉಸಿರಾಟ
ವಿಸರ್ಜನೆ
ಪ್ರಚೋದನೆಗೆ ಪ್ರತಿಕ್ರಿಯೆ
ಸಂತಾನೋತ್ಪತ್ತಿ
ಇಲಿ
ಮಾವಿನಮರ
ಇಟ್ಟಿಗೆ
ಗಡಿಯಾರ
ಚಿಟ್ಟೆ
ಮನುಷ್ಯ
ಕಪ್ಪೆ
ಕಾಗದ
ಮೊಬೈಲ್
ಉತ್ತರ -
ಪರಿಸರದ ಅಂಶಗಳು
ಲಕ್ಷಣಗಳು
ಬೆಳವಣಿಗೆ
ಆಹಾರ ಸೇವನೆ
ಚಲನೆ
ಉಸಿರಾಟ
ಪ್ರಚೋದನೆಗೆ ಪ್ರತಿಕ್ರಿಯೆ
ವಿಸರ್ಜನೆ
ಸಂತಾನೋತ್ಪತ್ತಿ
ಇಲಿ
✔
✔
✔
✔
✔
✔
✔
ಮಾವಿನಮರ
✔
✔
✔
✔
✔
✔
✔
ಇಟ್ಟಿಗೆ
🗙
🗙
🗙
🗙
🗙
🗙
🗙
ಗಡಿಯಾರ
🗙
🗙
🗙
🗙
🗙
🗙
🗙
ಚಿಟ್ಟೆ
✔
✔
✔
✔
✔
✔
✔
ಮನುಷ್ಯ
✔
✔
✔
✔
✔
✔
✔
ಕಪ್ಪೆ
✔
✔
✔
✔
✔
✔
✔
ಕಾಗದ
🗙
🗙
🗙
🗙
🗙
🗙
🗙
ಮೊಬೈಲ್
🗙
🗙
🗙
🗙
🗙
🗙
🗙
ಪರಿಸರದಲ್ಲಿ ಕಂಡುಬರುವ ಕೆಲವು ಅಂಶಗಳನ್ನು ಕೆಳಗೆ ನೀಡಿದೆ. ಅವುಗಳನ್ನು ಜೀವಿ ಅಥವಾ ನಿರ್ಜೀವ ವಸ್ತುಗಳಾಗಿ ಗುರುತಿಸು. ಸರಿಯಾದ ಆಯ್ಕೆಯ ಮುಂದೆ (/) ಗುರುತು ಹಾಕು.
5th class evs question answer.
ಪರಿಸರದ ಅಂಶಗಳು
ಜೀವಿಗಳು
ನಿರ್ಜೀವ ವಸ್ತುಗಳು
ಪಕ್ಷಿಗಳು
ಬಲೂನು
ನೀರು
ಮಾವಿನ ಮರ
ಬಂಡಿ
ಪೆನ್ನು
ಉತ್ತರ -
ಪರಿಸರದ ಅಂಶಗಳು
ಜೀವಿಗಳು
ನಿರ್ಜೀವ ವಸ್ತುಗಳು
ಪಕ್ಷಿಗಳು
✔
🗙
ಬಲೂನು
🗙
✔
ನೀರು
🗙
✔
ಮಾವಿನ ಮರ
✔
🗙
ಬಂಡಿ
🗙
✔
ಪೆನ್ನು
🗙
✔
ಈ ಚಿತ್ರವನ್ನು ಗಮನಿಸು.ಇದು ಯಾವ ಚಿತ್ರ ಗುರುತಿಸಿ, ಇಲ್ಲಿ ಬರೆ.
ಉತ್ತರ -ಶ್ವಾಸಕೋಶ
ಕೆಳಗೆ ಕೆಲವು ಜೀವಿಗಳ ಹೆಸರು ನೀಡಿದೆ. ನಾವು ಕೆಲಸ ಮಾಡಲು ಈ ಜೀವಿಗಳು ಸಹಾಯ ಮಾಡುತ್ತವೆ. ಅವುಗಳು ಮಾಡುವ ಪ್ರಮುಖ ಸಹಾಯವನ್ನು ಇಲ್ಲಿ ಬರೆ.
ಜೀವಿ
ಪ್ರಮುಖ ಸಹಾಯ(ಕೆಲಸ)
ಆನೆ
ಎತ್ತು
ನಾಯಿ
ಉತ್ತರ -
ಜೀವಿ
ಪ್ರಮುಖ ಸಹಾಯ(ಕೆಲಸ)
ಆನೆ
ಭಾರವಾದ ವಸ್ತುಗಳನ್ನು ಸಾಗಿಸಲು.
ಎತ್ತು
ಉಳುಮೆ ಮಾಡಲು ಮತ್ತು ಎತ್ತಿನ ಗಾಡಿ/ಬಂಡಿ ಎಳೆಯಲು.
ನಾಯಿ
ಬೇಟೆ ಆಡಲು ಮತ್ತೆ ಮನೆ ಕಾಯಲು.
ಚಿತ್ರವನ್ನು ಗಮನಿಸು, ಸಸ್ಯವು ಆಹಾರ ತಯಾರಿಸಲು ಅಗತ್ಯವಿರುವ ನಾಲ್ಕು ಪ್ರಮುಖ ಅಂಶಗಳನ್ನು ನೀಡಿದೆ. ಯಾವುದು? ಯಾರಿಂದ? ಎಂಬ ಚಟುವಟಿಕೆಯನ್ನು ಕೆಳಗೆ ನೀಡಿದೆ. ಅದರಲ್ಲಿನ ಹೇಳಿಕೆಗಳನ್ನು ಸರಿಯಾಗಿ ಜೋಡಿಸಿ ಬರೆ. 5th class evs book question answer.
class 5 evs chapter 1 questions and answers
ಯಾವುದು?
ಯಾರಿಂದ?
ಸರಿಪಡಿಸಿ ಇಲ್ಲಿ ಬರೆ
ಬೆಳಕಿನ ಶಕ್ತಿ
ಹಸಿರು ಎಲೆ
ನೀರು, ಖನಿಜ, ಲವಣ
ವಾಯುಗೋಳ
ಕಾರ್ಬನ್ ಡೈಆಕ್ಸೆಡ್
ಸೂರ್ಯ
ಪತ್ರ ಹರಿತ್ತು
ಮಣ್ಣು
ಉತ್ತರ -
ಯಾವುದು?
ಯಾರಿಂದ?
ಸರಿಪಡಿಸಿ ಇಲ್ಲಿ ಬರೆ
ಬೆಳಕಿನ ಶಕ್ತಿ
ಹಸಿರು ಎಲೆ
ಸೂರ್ಯ
ನೀರು, ಖನಿಜ, ಲವಣ
ವಾಯುಗೋಳ
ಮಣ್ಣು
ಕಾರ್ಬನ್ ಡೈಆಕ್ಸೆಡ್
ಸೂರ್ಯ
ವಾಯುಗೋಳ
ಪತ್ರ ಹರಿತ್ತು
ಮಣ್ಣು
ಹಸಿರು ಎಲೆ
ಸಸ್ಯದ ಆಹಾರ ತಯಾರಿಕೆಯಲ್ಲಿ ಗ್ಲೋಕೋಸ್ ತಯಾರಾಗುತ್ತದೆ ಹಾಗೂ ಆಕ್ಸಿಜನ್ ಬಿಡುಗಡೆಯಾಗುತ್ತದೆ. ಜೀವಿಗಳಿಗೆ ಇವೆರಡರ ಉಪಯೋಗಗಳನ್ನು ಇಲ್ಲಿ ಬರೆ.
ಈ ಚಿತ್ರದ ಸಹಾಯದಿಂದ ಸಸ್ಯಾಹಾರಿ, ಮಾಂಸಾಹಾರಿ ಮತ್ತು ಮಿಶ್ರಾಹಾರಿ ಪ್ರಾಣಿಗಳನ್ನು ಕೆಳಗಿನ ಚಾರ್ಟ್‌ನಲ್ಲಿ ಪಟ್ಟಿ ಮಾಡು.5th standard evs notes
ಸಸ್ಯಾಹಾರಿ
ಮಾಂಸಾಹಾರಿ
ಮಿಶ್ರಾಹಾರಿ
ಉತ್ತರ -
ಸಸ್ಯಾಹಾರಿ
ಮಾಂಸಾಹಾರಿ
ಮಿಶ್ರಾಹಾರಿ
ಆನೆ
ಹುಲಿ
ಬೆಕ್ಕು
ಗುಬ್ಬಿ
ಸಿಂಹ
ನಾಯಿ
ಮೊಲ, ಗಿಳಿ
ನರಿ
ಕರಡಿ
ಈ ಹೇಳಿಕೆಗಳು ಸರಿಯಾಗಿದ್ದರೆ (✔) ಗುರುತು, ತಪ್ಪಾಗಿದ್ದರೆ (x) ಗುರುತು ಹಾಕು. ತಪ್ಪಾದ ಹೇಳಿಕೆಯನ್ನು ಸರಿಪಡಿಸಿ ಬರೆ. 5th standard evs textbook answers.
1. ಎಲ್ಲಾ ಜೀವಿಗಳು ಜನನ ಕಾಲದಲ್ಲಿ ಚಿಕ್ಕದಾಗಿದ್ದು, ಆನಂತರ ನಿರ್ದಿಷ್ಟ ಎತ್ತರ
ಹಾಗೂ ಗಾತ್ರ ಪಡೆಯುವುವು. ( )
ಉತ್ತರ - (✔)
2. ಜೀವಿಗಳ ಬೆಳವಣಿಗೆ ವೇಗವಾಗಿ ಅಂದರೆ ಒಂದೆರಡು ದಿನಗಳಲ್ಲಿ
ಆಗುತ್ತದೆ. ( )
ಉತ್ತರ - (x)
3. ಸಸ್ಯಗಳ ಬೆಳವಣಿಗೆಯು ಅವುಗಳ ಕಾಂಡದ ತುದಿ ಅಥವಾ ಕಾಂಡದ ಗಾತ್ರದಲ್ಲಿ
ಕಂಡು ಬರುತ್ತದೆ. ( )
ಉತ್ತರ - (✔)
ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸುತ್ತವೆ. ಅದಕ್ಕಾಗಿ ವಿಶೇಷ
ಅಂಗಗಳು ಪ್ರಾಣಿಗಳಿಗೆ ಇವೆ ಕೆಳಗೆ ಕೆಲವು ಪ್ರಾಣಿಗಳ ಹೆಸರು ನೀಡಿದೆ. ಅವುಗಳ ಚಲನಾಂಗಗಳನ್ನು ಇಲ್ಲಿ ಬರೆ.
ಮನುಷ್ಯ ___________ ಹದ್ದು ____________
ಕಾಂಗರೂ___________ ಬಾವಲಿ___________
ಉತ್ತರ -ಮನುಷ್ಯ - ಕಾಲುಗಳು ಹದ್ದು -ರೆಕ್ಕೆಗಳು
ಕಾಂಗರೂ-ಕಾಲುಗಳು ಬಾವಲಿ-ರೆಕ್ಕೆಗಳು
ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಕೆಳಗೆ ಕೆಲವು ಹೇಳಿಕೆಗಳನ್ನು ನೀಡಲಾಗಿದೆ. ಹೇಳಿಕೆಗಳು ಸರಿಯಾಗಿದ್ದರೆ (೩) ಗುರುತು, ತಪ್ಪಾಗಿದ್ದರೆ (x) ಗುರುತು ಹಾಕು. ತಪ್ಪಾದ ಹೇಳಿಕೆಯನ್ನು ಅದರ ಮುಂದೆ ನೀಡಿರುವ ಸ್ಥಳದಲ್ಲಿ ಸರಿಪಡಿಸಿ ಬರೆ.
kseeb solutions for class 5 evs.
ಉತ್ತರ -
ಮೊಟ್ಟೆಯ ಮೂಲಕ ಮತ್ತು ನೇರವಾಗಿ ಮರಿಗಳಿಗೆ ಜನ್ಮ ನೀಡುವ ಜೀವಿಗಳನ್ನು ಪಟ್ಟಿ ಮಾಡು.
ಉತ್ತರ -
ಮೊಟ್ಟೆಯ ಮೂಲಕ ಜನ್ಮ ನೀಡುವ ಜೀವಿಗಳ ಪಟ್ಟಿ
-ಕೋಳಿ, ಹಲ್ಲಿ ,ಪಾರಿವಾಳ, ಮೊಸಳೆ.
ನೇರವಾಗಿ ಮರಿಗಳಿಗೆ ಜನ್ಮ ನೀಡುವ ಜೀವಿಗಳಪಟ್ಟಿ
-ಮನುಷ್ಯ, ನಾಯಿ, ಬೆಕ್ಕು, ಆನೆ, ಹಸು.
ಬೀಜ ಮತ್ತು ಕಾಂಡಗಳ ಮೂಲಕ ಸಂತಾನೋತ್ಪತ್ತಿ ಮಾಡುವ ಸಸ್ಯಗಳನ್ನು ಪಟ್ಟಿ ಮಾಡು.
ಉತ್ತರ -
ಬೀಜಗಳ ಮೂಲಕ ಸಂತಾನೋತ್ಪತ್ತಿ ಮಾಡುವ ಸಸ್ಯಗಳ ಪಟ್ಟಿ
-ಅವರೆ, ನೆಲಗಡಲೆ, ಮಾವು, ಹಲಸು, ತಗರಿ.
ಕಾಂಡಗಳ ಮೂಲಕ ಸಂತಾನೋತ್ಪತ್ತಿ ಮಾಡುವ ಸಸ್ಯಗಳ ಪಟ್ಟಿ
-ಗುಲಾಬಿ, ದಾಸವಾಳ, ಕಬ್ಬು, ಪಾಪಾಸುಕಳ್ಳಿ.
ಸಸ್ಯದ ಸಂತಾನೋತ್ಪತ್ತಿಯಿಂದ ಮಾನವನೂ ಸೇರಿದಂತೆ ಪ್ರಾಣಿಗಳಿಗೆ ಅನೇಕ ಅನುಕೂಲಗಳಿವೆ. ಗೆಳೆಯ/ಗೆಳತಿಯರೊಂದಿಗೆ ಚರ್ಚಿಸಿ, ಪಟ್ಟಿ ಮಾಡು.
ಉತ್ತರ -
ಸಂತಾನೋತ್ಪತ್ತಿಯಿಂದ ಜೀವಿಗಳು ತಮ್ಮ ಸಂತತಿಯನ್ನು ಮುಂದುವರೆಸುತ್ತವೆ.
ಸಂತಾನೋತ್ಪತ್ತಿಯಿಂದಾಗಿ ಪರಿಸರದಲ್ಲಿ ಇತರೆ ಜೀವಿಗಳಿಗೆ ಆಹಾರ ದೊರೆಯುತ್ತದೆ.
ಪ್ರಾಣಿಗಳು ಪರಿಸರದ ಸಮತೋಲನವನ್ನು ಉಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಕೆಳಗೆ ನೀಡಿರುವ ಸಸ್ಯಗಳ ಉಪಯೋಗಗಳನ್ನು ಬರೆ.
1.ಏಕ ವಾರ್ಷಿಕ ಸಸ್ಯಗಳು
2.ದ್ವೈವಾರ್ಷಿಕ ಸಸ್ಯಗಳು
3.ಬಹುವಾರ್ಷಿಕ ಸಸ್ಯಗಳು :
ಉತ್ತರ -
1.ಏಕ ವಾರ್ಷಿಕ ಸಸ್ಯಗಳು -ಆಹಾರ, ಪಶುಗಳಿಗೆ ಆಹಾರ.
2.ದ್ವೈವಾರ್ಷಿಕ ಸಸ್ಯಗಳು -ವಾಣಿಜ್ಯ ಬಳಕೆಗೆ, ಆಹಾರಕ್ಕಾಗಿ
3.ಬಹುವಾರ್ಷಿಕ ಸಸ್ಯಗಳು : ವಾಣಿಜ್ಯ ಬಳಕೆಗೆ,ಮರಮುಟ್ಟು, ಸಲಕರಣೆಗಳ ತಯಾರಿಕೆಗೆ.
ಸಸ್ಯಗಳನ್ನು ನಾವೇಕೆ ಸಂರಕ್ಷಿಸಬೇಕು?
ಉತ್ತರ -
- ಮಳೆಗಾಗಿ - ಆಹಾರಕ್ಕಾಗಿ - ಮುಂದಿನ ಪೀಳಿಗೆಗಾಗಿ.
ಕರ್ನಾಟಕದಲ್ಲಿರುವ ರಾಷ್ಟ್ರೀಯ ಅಭಯಾರಣ್ಯ, ವನ್ಯಜೀವಿಧಾಮ ಹಾಗೂ ಪಕ್ಷಿ ಧಾಮಗಳನ್ನು ಪಟ್ಟಿಮಾಡು.
ಬೆಳವಣಿಗೆ, ಆಹಾರ ಸೇವನೆ, ಚಲನೆ, ಉಸಿರಾಟ, ವಿಸರ್ಜನೆ, ಪ್ರಚೋದನೆಗೆ ಪ್ರತಿಕ್ರಿಯೆ, ಸಂತಾನೋತ್ಪತಿ.
3. ಆಹಾರದಿಂದ ದೊರೆಯುವ ಶಕ್ತಿಯಿಂದ ಜೀವಿಗಳಿಗಾಗುವ ಅನುಕೂಲಗಳೇನು?
ಕಟ್ಟಿಗೆ ಕಡಿಯುವುದು, ಭಾರವಾದ ಚೀಲಹೊರುವುದು, ಬೇಟೆಯಾಡುವುದು, ಹೀಗೆ ಜೀವಿಗಳು ನಿತ್ಯವೂ ಅನೇಕ ಚಟುವಟಿಕೆಗಳನ್ನು ಮಾಡುತ್ತವೆ. ಈ ಎಲ್ಲಾ ಕೆಲಸಗಳನ್ನು ಮಾಡಲು ಜೀವಿಗಳಿಗೆ ಶಕ್ತಿ ಬೇಕು.
4.ದ್ಯುತಿಸಂಶ್ಲೇಷಣೆ ಎಂದರೇನು?
ಸಸ್ಯಗಳು ಸೂರ್ಯನ ಬೆಳಕಿನ ಶಕ್ತಿ, ವಾಯುವಿನಲ್ಲಿನ ಕಾರ್ಬನ್ ಡೈಆಕ್ಸೆಡ್, ಮಣ್ಣಿನಲ್ಲಿರುವ ನೀರು, ಖನಿಜ-ಲವಣಾಂಶಗಳನ್ನು ಬೇರುಗಳ ಮೂಲಕ ಹೀರಿ ಎಲೆಯಲ್ಲಿನ ಪತ್ರಹರಿತ್ತಿನ ಸಹಾಯದಿಂದ ಆಹಾರ ತಯಾರಿಸುತ್ತವೆ. ಇದನ್ನು ದ್ಯುತಿ ಸಂಶ್ಲೇಷಣೆ ಎನ್ನುವರು.
5.ಕೀಟಾಹಾರಿ ಸಸ್ಯಗಳೆಂದರೇನು?
ಡ್ರಾಸಿರಾ, ನೆಪೆಂಥಿಸ್, ಯುಟ್ರಿಕ್ಯುಲೇರಿಯಾ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಂಡರು ಕೂಡ ನೈಟ್ರೊಜನ್‌ಗಾಗಿ ಕೀಟಗಳನ್ನು ಅವಲಂಬಿಸಿವೆ. ಇವುಗಳನ್ನು ಕೀಟಾಹಾರಿ ಸಸ್ಯಗಳು ಎನ್ನುವರು,
6.ಸಸ್ಯಾಹಾರಿಗಳೆಂದರೇನು?
ಸಸ್ಯ ಹಾಗೂ ಅದರ ಉತ್ಪನ್ನಗಳನ್ನು ಮಾತ್ರ ಆಹಾರವನ್ನಾಗಿ ಸೇವಿಸುವ ಪ್ರಾಣಿಗಳು.
ಉದಾ -ಹಸು,ಎಮ್ಮೆ,ಜಿಂಕೆ,ಮೊಲ.
7.ಮಾಂಸಾಹಾರಿಗಳೆಂದರೇನು?
ತಮ್ಮ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ತಿಂದು ಬದುಕುವ ಪ್ರಾಣಿಗಳು.ಉದಾ- ಹುಲಿ, ಸಿಂಹ, ಚಿರತೆ, ಹಾವು.
8.ಮಿಶ್ರಾಹಾರಿಗಳೆಂದರೇನು?
ಸಸ್ಯ ಹಾಗೂ ಪ್ರಾಣಿಗಳೆರಡನ್ನೂ ಆಹಾರವಾಗಿ ಸೇವಿಸುವ ಪ್ರಾಣಿಗಳು.ಉದಾ- ಕರಡಿ,ಬೆಕ್ಕು, ಕಾಗೆ, ಮನುಷ್ಯ
10.ಬೆಳವಣಿಗೆ ಎಂದರೇನು?
ಜೀವಿಗಳ ಎತ್ತರ ಮತ್ತು ಗಾತ್ರದಲ್ಲಿ ಹೆಚ್ಚಳವಾಗಿದರೆ ಇದನ್ನು ಬೆಳವಣಿಗೆ ಎನ್ನುವರು.
11.ವಿಸರ್ಜನೆ ಎಂದರೇನು?
ಜೀವಿಗಳ ದೇಹದಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತವೆ, ಇದರಿಂದಾಗಿ ದೇಹಕ್ಕೆ ಬೇಡವಾದ ವಸ್ತುಗಳು ಉತ್ಪತ್ತಿಯಾಗುತ್ತವೆ. ಇವುಗಳನ್ನು ದೇಹದಿಂದ ಹೊರಹಾಕುವ ಪ್ರಕ್ರಿಯೆಗೆ ವಿಸರ್ಜನೆ ಎನ್ನುವರು.
12.ಪ್ರಾಣಿಗಳು ಯಾವ ರೂಪದಲ್ಲಿ ಬೇಡವಾದ ವಸ್ತುಗಳನ್ನು ಹೇಗೆ ಹೊರಹಾಕುತ್ತವೆ?
ಕಾರ್ಬನ್ ಡೈ ಆಕ್ಸೈಡ್ , ಬೆವರು, ಮಲ, ಮೂತ್ರದ ರೂಪದಲ್ಲಿ ಪ್ರಾಣಿಗಳು ಬೇಡವಾದ ವಸ್ತುಗಳನ್ನು ಹೊರಹಾಕುತ್ತವೆ. ಅದಕ್ಕಾಗಿ ವಿಶೇಷ ಅಂಗಗಳಿವೆ.
13.ಸಸ್ಯಗಳು ಯಾವ ರೂಪದಲ್ಲಿ ಬೇಡವಾದ ವಸ್ತುಗಳನ್ನು ಹೇಗೆ ಹೊರಹಾಕುತ್ತವೆ?
ಸಸ್ಯಗಳು ಕೂಡ ಉಸಿರಾಟ ಕ್ರಿಯೆಯಲ್ಲಿ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹೊರ ಹಾಕುತ್ತವೆ. ಒಣಗಿದ ಎಲೆ, ಕಾಂಡ, ಕೊಳೆತ ಭಾಗಗಳು ಸಸ್ಯಗಳಿಂದ ಕಳಚಿಕೊಳ್ಳುತ್ತವೆ. ಹೆಚ್ಚಾದ ನೀರನ್ನು ಸಸ್ಯಗಳು ಎಲೆಗಳ ಮೂಲಕ ಹೊರಹಾಕುತ್ತವೆ.
14.ಜೀವಿತಾವಧಿ ಎಂದರೇನು?
ಜೀವಿಗಳು ಜನಿಸಿ ನಂತರ, ಪ್ರೌಢ ಜೀವಿಗಳಾಗಿ ಬೆಳೆದು, ಸಂತಾನೋತ್ಪತ್ತಿ ಮಾಡಿ, ಮುಪ್ಪಾಗಿ ಕೊನೆಗೆ ಸಾಯುತ್ತವೆ. ಹೀಗೆ ಒಂದು ಜೀವಿಯ ಜನನ ಮತ್ತು ಮರಣಗಳ ನಡುವಿನ ಅವಧಿಗೆ ಜೀವಿತಾವಧಿ ಎನ್ನುವರು.
15.ಸಸ್ಯಗಳನ್ನು ಜೀವಿತಾವಧಿಯ ಆಧಾರದ ಮೇಲೆ ಹೇಗೆ ವಿವರ್ಗಿಕರಿಸಲಾಗಿದೆ?
ಸಸ್ಯಗಳನ್ನು ಜೀವಿತಾವಧಿಯ ಆಧಾರದ ಮೇಲೆ ಏಕವಾರ್ಷಿಕ ಸಸ್ಯಗಳು, ದ್ವೈವಾರ್ಷಿಕ ಸಸ್ಯಗಳು ಮತ್ತು ಬಹುವಾರ್ಷಿಕ ಸಸ್ಯಗಳು ಎಂದು ವಿಂಗಡಿಸಲಾಗಿದೆ.
16.ಏಕವಾರ್ಷಿಕ ಸಸ್ಯಗಳೆಂದರೇನು? ಉದಾಹರಣೆ ಕೊಡಿ.
17.ದ್ವೈವಾರ್ಷಿಕ ಸಸ್ಯಗಳೆಂದರೇನು? ಉದಾಹರಣೆ ಕೊಡಿ.
18.ಬಹುವಾರ್ಷಿಕ ಸಸ್ಯಗಳೆಂದರೇನು? ಉದಾಹರಣೆ ಕೊಡಿ.
ಸಸ್ಯಗಳ ಬೀಜದಳಗಳ ಆಧಾರದಲ್ಲಿ ಸಸ್ಯಗಳನ್ನು ಹೇಗೆ ವಿವರ್ಗಿಕರಿಸಲಾಗಿದೆ?
ಸಸ್ಯಗಳ ಬೀಜದಳಗಳ ಆಧಾರದಲ್ಲಿ ಸಸ್ಯಗಳನ್ನು ಏಕದಳ ಧಾನ್ಯ ಹಾಗೂ ದ್ವಿದಳ ಧಾನ್ಯ ಸಸ್ಯಗಳೆಂದು ವಿಂಗಡಿಸಲಾಗಿದೆ.
ಏಕದಳ ಧಾನ್ಯ ಸಸ್ಯಗಳ ಬೀಜವು ಒಂದು ಬೀಜ ದಳವನ್ನು ಹೊಂದಿರುತ್ತದೆ.
ಉದಾಹರಣೆ : ಜೋಳ, ರಾಗಿ, ಗೋಧಿ, ಭತ್ತ, ಸಿರಿಧಾನ್ಯಗಳು.
ದ್ವಿದಳ ಧಾನ್ಯ ಸಸ್ಯಗಳ ಬೀಜವು ಎರಡು ಬೀಜ ದಳಗಳನ್ನು ಹೊಂದಿರುತ್ತದೆ.
ಉದಾಹರಣೆ : ಹುರುಳಿ, ಶೇಂಗಾ. ತೊಗರಿ, ಕಡಲೆ, ಉದು
5th evs chapter 1st solutions in kannada medium pdf 👇
If you have any doubts please comment