ವಿಸ್ಮಯ ಶಕ್ತಿ-ನಾವು ವಾಸಿಸುವ ವಿಶ್ವವು ದ್ರವ್ಯ ಮತ್ತು ಶಕ್ತಿಯಿಂದಾಗಿದೆ ಎಂದು ಹಿಂದಿನ ಪಾಠದಲ್ಲಿ ತಿಳಿದಿರುವೆ. ಮಾನವರು ಪರಿಸರದ ಒಂದು ಭಾಗ. ಪರಿಸರದ ಅನೇಕ ಸ್ವಾಭಾವಿಕ ಸಂಗತಿಗಳನ್ನು ಮಾನವರು ಅರ್ಥಮಾಡಿಕೊಂಡಿದ್ದಾರೆ. ಪರಿಸರದಲ್ಲಿ ಕಂಡು ಬರುವ ಬದಲಾವಣೆಗಳಿಗೆ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರಕೃತಿಯಲ್ಲಿನ ವಿಸ್ಮಯಗಳಿಗೆ ವೈಜ್ಞಾನಿಕವಾಗಿ ಆಲೋಚಿಸುವುದನ್ನು ಕಲಿತಿದ್ದಾರೆ. ನಾವು ದಿನನಿತ್ಯ ಬಲ, ಕೆಲಸ, ಶಕ್ತಿ ಎಂಬ ಪದಗಳನ್ನು ಬಳಸುತ್ತಿರುತ್ತೇವೆ. ಇಲ್ಲಿ ನಾವು 5th evs chapter 13 answers kannada medium ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.
5th EVS Chapter 13 Answers Kannada Medium.
ಚಟುವಟಿಕೆ : ನೀನು ಮಾಡುವ ಯಾವುದಾದರೂ ೫ ಕೆಲಸಗಳ ಹೆಸರು ಬರೆ.
(ಉದಾಹರಣೆಯನ್ನು ಗಮನಿಸು)
೧. ನೀರು ತರುವುದು.
೨. ____________________________________________________
೩. ____________________________________________________
೪. ____________________________________________________
೫. ____________________________________________________
೬. ____________________________________________________
ಉತ್ತರ-
೧. ನೀರು ತರುವುದು.
೨. ಕಸಗುಡಿಸುವುದು.
೩. ಸೌದೆ ಒಡೆಯುವುದು.
೪. ಅಂಗಡಿಗೆ ಹೋಗಿ ಅಗತ್ಯ ಸಾಮಗ್ರಿಗಳನ್ನು ತರುವುದು.
೫. ಬಟ್ಟೆ ಹೊಗೆಯುವುದು.
೬. ಅಡುಗೆ ತಯಾರಿಸುವುದು.
ಮೇಲಿನ ಚಿತ್ರದಲ್ಲಿ ಯಾವ ಯಾವ ಕೆಲಸಗಳನ್ನು ಮಾಡಲಾಗುತ್ತಿದೆ ಎಂಬುದನ್ನು ಕೆಳಗೆ ಕೊಟ್ಟಿರುವ ಜಾಗದಲ್ಲಿ ಬರೆ.
೧. ___________________________________________________
೨. ___________________________________________________
೩. ___________________________________________________
೪. ___________________________________________________
೫. ___________________________________________________
ಉತ್ತರ- ೧. ಸೈಕಲ್ ಸವಾರಿ ಮಾಡುತ್ತಿರುವುದು.
೨. ಕೈ ಗಾಡಿ ಎಳೆಯುತ್ತಿರುವುದು.
೩. ಬೆಳೆಗಳಿಗೆ ರಾಸಾಯನಿಕ ಸಿಂಪರಣೆ ಮಾಡಲಾಗುತ್ತಿದೆ.
೪. ಚೆಂಡನ್ನು ಎಸೆಯುತ್ತಿರುವುದು.
೫. ತಲೆಯ ಮೇಲೆ ವಸ್ತುಗಳನ್ನು ಹೊತ್ತಿರುವುದು.
ಸ್ನಾಯು ಶಕ್ತಿ ಬಳಸಿ ನೀನು ಮಾಡುವ ಯಾವುದಾದರೂ ೪ ಕೆಲಸಗಳನ್ನು ಬರೆ.
೧. ____________________________________________________
೨. ____________________________________________________
೩. ____________________________________________________
೪. ___________________________________________________
ಉತ್ತರ-೧. ನೀರು ತರುವುದು.
೨. ಕಸಗುಡಿಸುವುದು.
೩. ಓಡುವುದು.
೪. ಸೈಕಲ್ ಸವಾರಿ ಮಾಡುವುದು.
ಯಾಂತ್ರಿಕ ಶಕ್ತಿ ಬಳಸಿ ನಿನ್ನ ಮನೆಯಲ್ಲಿ ಮಾಡುವ ಯಾವುದಾದರೂ ೨ ಕೆಲಸಗಳನ್ನು ಬರೆ.
೧. _________________________________________________
೨. _________________________________________________
ಉತ್ತರ-೧. ಫ್ಯಾನ್ ತಿರುಗುವುದು.
೨. ಮಿಕ್ಸಿ ಬಳಸಿ ಕೆಲಸ ಮಾಡುವುದು.
ನಿನ್ನ ಮನೆಯಲ್ಲಿ ಉಷ್ಣದ ಸಹಾಯದಿಂದ ಮಾಡುವ ಯಾವುದಾದರೂ ೨ ಕೆಲಸಗಳನ್ನು ಇಲ್ಲಿ ಬರೆ.
೧. ____________________________________________________
೨. ____________________________________________________
ಚಳಿಗಾಲದಲ್ಲಿ ಘನೀಕೃತ ಎಣ್ಣೆಯ ಪಾತ್ರೆಗಳನ್ನು ಒಲೆಯ ಉರಿ ಇಲ್ಲವೆ ಸೂರ್ಯನ
ಬಿಸಿಲಿಗೆ ಇಡುತ್ತಾರೆ. ಏಕಿರಬಹುದು? ಆಲೋಚಿಸಿ, ಬರೆ.
____________________________________________________
____________________________________________________
ಉತ್ತರ-ಘನೀಕೃತ ಎಣ್ಣೆಯನ್ನು ದ್ರವ ರೂಪಕ್ಕೆ ತರಲು ಘನೀಕೃತ ಎಣ್ಣೆಯ ಪಾತ್ರೆಗಳನ್ನು ಒಲೆಯ ಉರಿ ಇಲ್ಲವೆ ಸೂರ್ಯನ ಬಿಸಿಲಿಗೆ ಇಡುತ್ತಾರೆ.
ಆಲೋಚಿಸು : ಇದ್ದಿಲಿನ ಇಸ್ತ್ರಿಪೆಟ್ಟಿಗೆ ಬಳಸುವಾಗ ಯಾವುದು ಉಷ್ಣಶಕ್ತಿಯಾಗುತ್ತದೆ?
ಉತ್ತರ-ಇದ್ದಿಲು ಉರಿಯುವುದರಿಂದ ಉಷ್ಣ ಬಿಡುಗಡೆಯಾಗುತ್ತದೆ.
ಚಟುವಟಿಕೆ : ಗೆಳೆಯರು ಇಲ್ಲವೆ ಹಿರಿಯರೊಂದಿಗೆ ಚರ್ಚಿಸಿ, ಬರೆ.
೧. ಬೇಸಿಗೆ ಕಾಲದಲ್ಲಿ ಒಣ ಹಾಕಿದ ಬಟ್ಟೆಗಳು ಬಹಳ ಬೇಗ ಒಣಗುತ್ತವೆ. ಹೇಗೆ?
____________________________________________________
____________________________________________________
ಉತ್ತರ-ಬಟ್ಟೆಯ ಮೇಲ್ಮೈಯಿಂದ ನೀರಿನ ಆವಿಯಾಗುವಿಕೆಯಿಂದಾಗಿ ಒದ್ದೆಯಾದ ಬಟ್ಟೆಗಳು ಒಣಗುತ್ತವೆ. ಬೇಸಿಗೆಯಲ್ಲಿ ತಾಪಮಾನವು ಅಧಿಕವಾಗಿರುತ್ತದೆ. ಆದ್ದರಿಂದ, ಆವಿಯಾಗುವಿಕೆಯ ಪ್ರಮಾಣವು ಹೆಚ್ಚು. ಆದ್ದರಿಂದ, ಬೇಸಿಗೆಯಲ್ಲಿ ಒದ್ದೆಯಾದ ಬಟ್ಟೆಗಳು ವೇಗವಾಗಿ ಒಣಗುತ್ತವೆ.
೨. ಬೇಸಿಗೆ ಕಾಲದಲ್ಲಿ ಕೆರೆ ಬಾವಿಗಳ ನೀರು ಕಡಿಮೆಯಾಗುತ್ತದೆ. ಏಕೆ?
____________________________________________________
____________________________________________________
ಉತ್ತರ-ಬೇಸಿಗೆ ಕಾಲ ಎಂದರೆ ಹೆಚ್ಚು ಹಗಲು ಮತ್ತು ಸೂರ್ಯನ ಶಾಖ. ಆದ್ದರಿಂದ, ಸೂರ್ಯನ ಶಾಖ ಇರುವ ಕಾರಣ ಹಗಲಿನ ಸಮಯದಲ್ಲಿ ನೀರು ವೇಗವಾಗಿ ಆವಿಯಾಗುವುದರಿಂದ ಬೇಸಿಗೆಯಲ್ಲಿ ಬಾವಿಗಳು ಒಣಗುತ್ತವೆ.
೩. ವಿಪರೀತ ಚಳಿ ಇರುವಾಗ ಜನರು ಸೂರ್ಯನ ಬೆಳಕಿಗಾಗಿ ಕಾಯುತ್ತಾರೆ. ಏಕೆ?
____________________________________________________
____________________________________________________
ಉತ್ತರ-ಚಳಿಯಿಂದ ಮುಕ್ತಿ ಹೊಂದಲು ಮತ್ತು ದೇಹವನ್ನು ಬೆಚ್ಚಗಿಡಲು ಜನರು ಚಳಿಗಾಲದಲ್ಲಿ ಸೂರ್ಯನ ಬೆಳಕನ್ನು ಕಾಯುತ್ತಾರೆ. ಅಲ್ಲದೆ, ತಂಪಾದ ವಾತಾವರಣದಲ್ಲಿ ದೇಹವು ವೈರಸ್ಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು.
೪. ಸೌರ ಜಲತಾಪಕವನ್ನು ಏಕೆ ಬಳಸುತ್ತಾರೆ?
____________________________________________________
ಉತ್ತರ-ನೀರನ್ನು ಬಿಸಿ ಮಾಡಲು ಅಥವಾ ಕಾಯಿಸಲು ಬಳಸುತ್ತಾರೆ. ಸೋಲಾರ್ ವಾಟರ್ ಹೀಟರ್ ಅನ್ನು ಬಳಸುವುದರಿಂದ 70-80% ವಿದ್ಯುತ್ ಅಥವಾ ಇಂಧನ ಬಿಲ್‌ಗಳನ್ನು ಉಳಿಸಬಹುದು.
ಈ ಚಿತ್ರಗಳನ್ನು ಗಮನಿಸು. ಸೌರಶಕ್ತಿಯನ್ನು ಎಲ್ಲಿ ಬಳಸಲಾಗಿದೆ ಎಂದು ಗುರುತಿಸಿ ಹೇಳು.
5th EVS Chapter 13 Answers Kannada Medium.
ಉತ್ತರ-ಮೊದಲ ಚಿತ್ರದಲ್ಲಿ ಕಾರಿನ ರೂಫ್ ಮೇಲೆ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ಕಾರನ್ನು ಚಲಾಯಿಸಲು ಬಳಸಲಾಗಿದೆ.
ಎರಡನೇ ಚಿತ್ರದಲ್ಲಿ ದೋಣಿ ಅಥವಾ ಹಡಗಿನ ಮೇಲೆ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ದೋಣಿ ಅಥವಾ ಹಡಗನ್ನು ಚಲಾಯಿಸಲು ಬಳಸಲಾಗಿದೆ.
ಮೂರನೇ ಚಿತ್ರದಲ್ಲಿ ವಿಮಾನದ ಮೇಲ್ಬಾಗ ರೂಫ್ ಮೇಲೆ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ವಿಮಾನವನ್ನು ಚಲಾಯಿಸಲು ಬಳಸಲಾಗಿದೆ.
ನಾಲ್ಕನೇ ಚಿತ್ರದಲ್ಲಿ ಸೋಲಾರ್ ಕುಕ್ಕರ್ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ಮನೆಯಲ್ಲಿ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಅಡುಗೆ ತಯಾರಿಸಬಹುದು.
ಐದನೇ ಚಿತ್ರದಲ್ಲಿ ನೀರನ್ನು ಬಿಸಿ ಮಾಡಲು ಅಥವಾ ಕಾಯಿಸಲು ಬಳಸಲಾಗಿದೆ. ಸೋಲಾರ್ ವಾಟರ್ ಹೀಟರ್ ಅನ್ನು ಬಳಸುವುದರಿಂದ 70-80% ವಿದ್ಯುತ್ ಅಥವಾ ಇಂಧನ ಬಿಲ್‌ಗಳನ್ನು ಉಳಿಸಬಹುದು.
ಆರನೇ ಚಿತ್ರದಲ್ಲಿ ಬೀದಿ ದೀಪಗಳಲ್ಲಿ ಸೌರಶಕ್ತಿಯನ್ನು ಬಳಸಿದ್ದು, ಇದರ ಸಹಾಯದಿಂದ ವಿದ್ಯುತ್ ಉತ್ಪಾದಿಸಿ ಬೆಳಕನ್ನು ಪಡೆಯಲಾಗುತ್ತದೆ.
ಚಟುವಟಿಕೆ : ನೀನು ಬಹಳ ಹತ್ತಿರದಿಂದ ನೋಡಿರುವ ಅಥವಾ ಬಳಸಿರುವ ಸೌರಶಕ್ತಿಯ ಸಾಧನಗಳ ಹೆಸರು ಬರೆ.
- ಗಾಳಿಯಿಂದ ವಿದ್ಯುಚ್ಛಕ್ತಿ ಉತ್ಪಾದನೆ.
- ವಿಂಡ್‌ಮಿಲ್‌ಗಳಲ್ಲಿ ಬಳಕೆ.
- ಗಾಳಿ ಚಾಲಿತ ವಾಹನಗಳು, ನೀರಿನ ಪಂಪ್, ವಿಂಡ್‌ಸರ್ಫಿಂಗ್, ಚಾಲಿತ ಹಡಗುಗಳು ಮತ್ತು ಸರಕು ಹಡಗುಗಳಲ್ಲಿ ಬಳಸಬಹುದು.
If you have any doubts please comment