ADS

5th EVS Chapter 16 Answers Kannada Medium

ನಮ್ಮ ಭಾರತ - ರಾಜಕೀಯ ಮತ್ತು ಸಾಂಸ್ಕೃತಿಕ ನಮ್ಮ ಭಾರತ ದೇಶವು ತನ್ನದೇ ಆದ ಭೌಗೋಳಿಕ, ಐತಿಹಾಸಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಇದು ಭವ್ಯ ಪರಂಪರೆಯುಳ್ಳ ದೇಶ. ಶತಮಾನಗಳಷ್ಟು ಕಾಲ ಅನೇಕ ಪರಕೀಯರ ಆಡಳಿತಕ್ಕೆ ಭಾರತವು ಒಳಗಾಗಿತ್ತು ಎಂಬುದನ್ನು ಇತಿಹಾಸದ ಪುಟಗಳು ತಿಳಿಸುತ್ತವೆ. ಭಾರತಕ್ಕೆ ಬಂದ ಯುರೋಪಿಯನ್ನರಲ್ಲಿ ಬ್ರಿಟಿಷರು ಸುದೀರ್ಘ ೨೦೦ ವರ್ಷಗಳವರೆಗೆ ಭಾರತವನ್ನಾಳಿದರು. ಭಾರತೀಯರು ಅವರ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಿದ್ದರ ಫಲವಾಗಿ ೧೫ ಆಗಸ್ಟ್, ೧೯೪೭ರಲ್ಲಿ ಸ್ವಾತಂತ್ರ್ಯ ದೊರೆಯಿತು. ಅಲ್ಲಿಯವರೆಗೂ ನಿರ್ದಿಷ್ಟ ರಾಷ್ಟ್ರೀಯ ಗಡಿ ನಿರ್ಧಾರವಾಗಿರಲಿಲ್ಲ. ಸ್ವಾತಂತ್ರö್ಯದ ತರುವಾಯ ನಿರ್ದಿಷ್ಟ ಗಡಿ ನಮಗೆ ದೊರೆತಿದೆ. ನಾವಿಂದು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಟ್ಟಿಗೇ ಬದುಕುತ್ತಿದ್ದೇವೆ. ಇದುವೇ ನಮ್ಮ ಭಾರತ ಎಂದು ಹೆಮ್ಮೆಯಿಂದ ಹೇಳೋಣ.ಇಲ್ಲಿ ನಾವು 5th EVS Chapter 16 Answers Kannada Medium ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.5th EVS Chapter 16 Answers Kannada Medium

5th EVS Chapter 16 Answers Kannada Medium.

ಹಿಂದಿನ ತರಗತಿಯಲ್ಲಿ ಕರ್ನಾಟಕ ರಾಜ್ಯದ ಬಗ್ಗೆ ಕೆಲವು ವಿಷಯಗಳನ್ನು ತಿಳಿದಿದ್ದೀಯ. ಅವುಗಳನ್ನು ಒಮ್ಮೆ ನೆನಪಿಸಿಕೊಳ್ಳೋಣ. 

೧.  ಕರ್ನಾಟಕ ರಾಜ್ಯವು ಭಾರತದ ಯಾವ ಭಾಗದಲ್ಲಿದೆ? 

ಉತ್ತರ-ಕರ್ನಾಟಕ ರಾಜ್ಯವು ಭಾರತದ ದಕ್ಷಿಣ ಭಾಗದಲ್ಲಿದೆ. 

೨.  ಕರ್ನಾಟಕ ರಾಜ್ಯದಲ್ಲಿರುವ ಜಿಲ್ಲೆಗಳನ್ನು ಹೆಸರಿಸು. 

ಉತ್ತರ-ಬೀದರ್,ಕಲ್ಬುರ್ಗಿ,ವಿಜಯಪುರ, ಯಾದಗಿರಿ,ಬೆಳಗಾವಿ,ಬಾಗಲಕೋಟೆ,ರಾಯಚೂರು, ಧಾರವಾಡ,ಕೊಪ್ಪಳ, ಗದಗ,ಬಳ್ಳಾರಿ, ಉತ್ತರ ಕನ್ನಡ,ದಕ್ಷಿಣ ಕನ್ನಡ,ಹಾವೇರಿ,ವಿಜಯನಗರ, ಶಿವಮೊಗ್ಗ,ದಾವಣಗೆರೆ,ಉಡುಪಿ,ಚಿಕ್ಕಮಂಗಳೂರು,ಚಿತ್ರದುರ್ಗ,ಹಾಸನ,ತುಮಕೂರು,ಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ,ರಾಮನಗರ,ಮಂಡ್ಯ,ಮೈಸೂರು,ಕೊಡಗು,ಚಾಮರಾಜನಗರ. 

೩.  ಕರ್ನಾಟಕ ರಾಜ್ಯದ ನೆರೆಯ ರಾಜ್ಯಗಳು ಯಾವುವು? ಹೆಸರಿಸು. 

ಉತ್ತರ- ಕರ್ನಾಟಕ ರಾಜ್ಯದ ನೆರೆಯ ರಾಜ್ಯಗಳು- ಆಂಧ್ರಪ್ರದೇಶ,ತೆಲಂಗಾಣ,ಕೇರಳ,ತಮಿಳುನಾಡು,ಗೋವಾ,ಮಹಾರಾಷ್ಟ್ರ. 

ಭಾರತದ ನೆರೆಯ ರಾಷ್ಟ್ರಗಳನ್ನು ಇಲ್ಲಿ ಬರೆ.

ಉತ್ತರ- ಭಾರತದ ನೆರೆಯ ರಾಷ್ಟ್ರಗಳು-

ಆಫ್ಗಾನಿಸ್ತಾನ,ಪಾಕಿಸ್ತಾನ,ಚೀನಾ,ನೇಪಾಳ,ಭೂತಾನ್,ಬಾಂಗ್ಲಾದೇಶ,ಮಯನ್ಮಾರ್,ಶ್ರೀಲಂಕಾ. 

ಚಟುವಟಿಕೆ : ಒಂದು ನೋಟನ್ನು ನಿಮ್ಮ ಪೋಷಕರಿಂದ ಪಡೆದು ಗಮನಿಸಿ, ಮುದ್ರಿತ 
ಭಾಷೆಗಳ ಹೆಸರನ್ನು ಪಟ್ಟಿ ಮಾಡು.

ಉತ್ತರ-ಭಾರತದ ನೋಟಿನ ಮೇಲೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳನ್ನು ಸೇರಿಸಲಾಗಿದೆ. 

ನಮ್ಮ ರಾಜ್ಯದ ಆಡಳಿತ ಭಾಷೆ ಯಾವುದು?

ಉತ್ತರ-ನಮ್ಮ ರಾಜ್ಯದ ಆಡಳಿತ ಭಾಷೆ ಕನ್ನಡ. 

ನಿನ್ನ ನೆರೆಯ ರಾಜ್ಯಗಳ ಭಾಷೆಗಳಾವುವು?

ಉತ್ತರ-ನನ್ನ ನೆರೆಯ ರಾಜ್ಯಗಳ ಭಾಷೆಗಳು-

ತಮಿಳು,ತೆಲುಗು,ಮಲೆಯಾಳಂ,ಮರಾಠಿ,ಕೊಂಕಣಿ,

ನೀನು ಮನೆಯಲ್ಲಿ ಮಾತನಾಡುವ ಭಾಷೆ ಯಾವುದು?

ಉತ್ತರ-ಕನ್ನಡ. 

ಭಾರತದ ಆಡಳಿತ ಭಾಷೆ ಯಾವುದು?

ಉತ್ತರ-ಹಿಂದಿ. 

ನಮ್ಮ ಕರ್ನಾಟಕ ರಾಜ್ಯದ ರಾಜಧಾನಿ ಯಾವುದು? 

ಉತ್ತರ-ನಮ್ಮ ಕರ್ನಾಟಕ ರಾಜ್ಯದ ರಾಜಧಾನಿ-ಬೆಂಗಳೂರು 

೧.  ಶಿಕ್ಷಕರು/ಪೋಷಕರ ಸಹಕಾರದಿಂದ ಮಾಹಿತಿಯನ್ನು ಸಂಗ್ರಹಿಸಿ, ಸೂಕ್ತ ಉತ್ತರಗಳಿಂದ ಈ ವಾಕ್ಯಗಳನ್ನು ಪೂರ್ಣಗೊಳಿಸು. 

೧) ಗೋವಾ ರಾಜ್ಯದ ಆಡಳಿತ ಭಾಷೆ _______________

ಉತ್ತರ-ಕೊಂಕಣಿ

೨) ನಾಗಾಲ್ಯಾಂಡ್ ರಾಜ್ಯದ ರಾಜಧಾನಿ _______________

ಉತ್ತರ-ಕೊಹಿಮಾ 

೩) ಜಮ್ಮು ಮತ್ತು ಕಾಶ್ಮೀರದ ಈಗಿನ ಮುಖ್ಯಮಂತ್ರಿಯ ಹೆಸರು ______________

ಉತ್ತರ-ರಾಜ್ಯಪಾಲರ ಆಡಳಿತ 

೪) ಭಾರತ ದೇಶದ ಈಗಿನ ರಾಷ್ಟ್ರಪತಿ _______________

ಉತ್ತರ-ಶ್ರೀಮತಿ. ದ್ರೌಪದಿ ಮುರ್ಮು

೫) ಕರ್ನಾಟಕ ರಾಜ್ಯದ ಈಗಿನ ರಾಜ್ಯಪಾಲರು _______________

ಉತ್ತರ-ಥಾವರ್ ಚಂದ್ ಗೆಹ್ಲೋಟ್

೬) ಆಂಧ್ರಪ್ರದೇಶವನ್ನು ಇತ್ತೀಚೆಗೆ _______________ ಮತ್ತು _______________

 ರಾಜ್ಯಗಳನ್ನಾಗಿ ವಿಂಗಡಿಸಲಾಗಿದೆ.

ಉತ್ತರ-ಆಂಧ್ರ ಪ್ರದೇಶ ಮತ್ತು ತೆಲಂಗಾಣ

೭) ಭಾರತ ದೇಶದ ಈಗಿನ ಪ್ರಧಾನಮಂತ್ರಿ _______________

ಉತ್ತರ-ನರೇಂದ್ರ ಮೋದಿ 

೮) ಕರ್ನಾಟಕ ರಾಜ್ಯದ ಈಗಿನ ಮುಖ್ಯಮಂತ್ರಿ _______________

ಉತ್ತರ-ಬಸವರಾಜ ಬೊಮ್ಮಾಯಿ 

ಚಟುವಟಿಕೆ :

ಮೊದಲೆರಡು ಪದಗಳ ಸಂಬಂಧವನ್ನು ಗಮನಿಸಿ. ೩ನೇ ಪದಕ್ಕೆ ಸರಿಹೊಂದುವ ೪ನೇ ಪದವನ್ನು ಬರೆ.

ಉದಾಹರಣೆ : ಭಾರತ : ದೆಹಲಿ :: ಕರ್ನಾಟಕ : ಬೆಂಗಳೂರು

೧) ಕೇರಳ : ದಕ್ಷಿಣ :: ಕಾಶ್ಮೀರ : ___________ 

ಉತ್ತರ- ಉತ್ತರ

೨) ಭಾರತ : ಪರ್ಯಾಯದ್ವೀಪ :: ಅಂಡಮಾನ್ : ___________

ಉತ್ತರ- ದ್ವೀಪ

೩) ಕೇಂದ್ರಾಡಳಿತ ಪ್ರದೇಶಗಳು : 6 :: ರಾಜ್ಯಗಳು : ___________

ಉತ್ತರ- 28

೪) ಬಂಗಾಳಕೊಲ್ಲಿ : ಪೂರ್ವ :: ಅರಬ್ಬೀ ಸಮುದ್ರ : ___________

ಉತ್ತರ-  ಪಶ್ಚಿಮ 

ಅಟ್ಲಾಸ್‌ನ ನೆರವಿನಿಂದ ಈ ಅಭ್ಯಾಸವನ್ನು ಪೂರ್ಣಗೊಳಿಸು.

೧. ಭಾರತದ ನೆರೆಯ ರಾಷ್ಟ್ರಗಳು-

ಉತ್ತರ-ಆಫ್ಗಾನಿಸ್ತಾನ,ಪಾಕಿಸ್ತಾನ,ಚೀನಾ,ನೇಪಾಳ,ಭೂತಾನ್,ಬಾಂಗ್ಲಾದೇಶ,ಮಯನ್ಮಾರ್,ಶ್ರೀಲಂಕಾ. 

೨. ಭಾರತದ ದ್ವೀಪಗಳು-ಲಕ್ಷದ್ವೀಪ ಮತ್ತು ಅಂಡಮಾನ್-ನಿಕೋಬಾರ್. 

೩. ಭಾರತದ ಕೇಂದ್ರಾಡಳಿತ ಪ್ರದೇಶಗಳು-ಉತ್ತರ-ಭಾರತದಲ್ಲಿ 8 ಕೇಂದ್ರಾಡಳಿತ ಪ್ರದೇಶಗಳಿವೆ: ಲಡಾಖ್, ಚಂಡೀಗಢ, ದೆಹಲಿ, ದಾದ್ರಾ ಮತ್ತು ನಗರ್ ಹವೇಲಿ, ದಮನ್ ಮತ್ತು ದಿಯು, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ ಮತ್ತು ಪುದುಚೇರಿ.

೬. ಉತ್ತರ ಭಾರತದ ರಾಜ್ಯಗಳು- ಉತ್ತರ-

ಉತ್ತರ ಭಾರತದ ರಾಜ್ಯಗಳ ಹೆಸರುಗಳು ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್, ದೆಹಲಿ, ಲಡಾಖ್, ಉತ್ತರಾಖಂಡ, ಜೆ & ಕೆ ಮತ್ತು ಚಂಡೀಗಢ.

೫. ದಕ್ಷಿಣ ಭಾರತದ ರಾಜ್ಯಗಳು-ಉತ್ತರ-

ದಕ್ಷಿಣ ಭಾರತವು ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯಗಳು ಮತ್ತು ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ.

೬. ಭಾರತದ ಈಶಾನ್ಯಕ್ಕಿರುವ ಚಿಕ್ಕ ರಾಜ್ಯಗಳು-ಉತ್ತರ-ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ

ಚಿತ್ರಗಳನ್ನು ಗಮನಿಸಿ, ಗೆರೆ ಎಳೆದು ಇವುಗಳನ್ನು ಸರಿಯಾಗಿ ಹೊಂದಿಸಿ

5th EVS Chapter 16 Answers Kannada Medium

ಉತ್ತರ- 

5th EVS Chapter 16 Answers Kannada Medium
ನಮ್ಮ ರಾಷ್ಟ್ರೀಯ ಹಬ್ಬಗಳನ್ನು ಹೆಸರಿಸು. 
ಉತ್ತರ- ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಮಹಾತ್ಮಾ ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ.

ರಾಷ್ಟ್ರೀಯ ಹಬ್ಬದಂದು ಶಾಲೆಗಳಲ್ಲಿ ಧ್ವಜಾರೋಹಣ ಮಾಡುತ್ತೇವೆ, ಅಲ್ಲವೆ? ನಮ್ಮ ರಾಷ್ಟ್ರ ಧ್ವಜದ ಬಣ್ಣಗಳು ಯಾವುವು?

ಉತ್ತರ- ನಮ್ಮ ರಾಷ್ಟ್ರ ಧ್ವಜದ ಬಣ್ಣಗಳು -

ಕೇಸರಿ,ಬಿಳಿ,ಹಸಿರು.

ಶಿಕ್ಷಕರ ಸಹಾಯದೊಂದಿಗೆ ಈ ಚಟುವಟಿಕೆಯನ್ನು ಪೂರ್ಣಗೊಳಿಸು. 

5th EVS Chapter 16 Answers Kannada Medium

ಉತ್ತರ- 

5th EVS Chapter 16 Answers Kannada Medium

ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಸರಾಗಿರುವ ಜನಪದ ನೃತ್ಯ/ಕಲೆಗಳನ್ನು ಹೆಸರಿಸು. 

ಉತ್ತರ- 

  1. ಯಕ್ಷಗಾನ
  2. ಭರತನಾಟ್ಯ
  3. ಕಂಸಾಳೆ 
  4. ವೀರಗಾಸೆ 
  5. ಕೋಲಾಟ 

ಕರ್ನಾಟಕದಲ್ಲಿ ಪ್ರಸಿದ್ಧಿ ಹೊಂದಿದ ಯಾವುದಾದರು ೩ ಜನಪದ ಕ್ರೀಡೆಗಳನ್ನು ಹೆಸರಿಸು.

ಉತ್ತರ- 

  • ಮರಕೋತಿ ಅಟ
  • ಚೆನ್ನೆಮಣೆ ಆಟ
  • ಚೌಕಾಭಾರ
  • ಲಗೋರಿ
  • ಕುಂಟೆಬಿಲ್ಲೆ

ಚಟುವಟಿಕೆ : ಈ ಕೆಳಗಿನ ಗೌರವಕ್ಕೆ ಪಾತ್ರರಾದ ತಲಾ ಇಬ್ಬರು ಸಾಧಕರ ಹೆಸರುಗಳನ್ನು ಬರೆ. (ಹಿರಿಯರು/ಶಿಕ್ಷಕರ ಸಹಾಯ ಪಡೆ)

೧. ಪದ್ಮಶ್ರೀ-

  • ಸಿದ್ದಲಿಂಗಯ್ಯ (ಮರಣೋತ್ತರ) ಸಾಹಿತ್ಯ ಮತ್ತು ಶಿಕ್ಷಣ
  • ಸುಬ್ಬಣ್ಣ ಅಯ್ಯಪ್ಪನ್ (ವಿಜ್ಞಾನ ಮತ್ತು ಎಂಜಿನಿಯರಿಂಗ್)

೨. ಪದ್ಮಭೂಷಣ-

  • ಎಸ್ ಎಲ್ ಭೈರಪ್ಪ
  • ಖಾದರ್ ವಲ್ಲಿ ದೂದೇಕುಲ

೩. ಪದ್ಮವಿಭೂಷಣ-

  • ಸತ್ಯೇಂದ್ರ ನಾಥ್ ಬೋಸ್
  •  ನಂದಲಾಲ್ ಬೋಸ್
  •  ಜಾಕಿರ್ ಹುಸೇನ್

೪. ಭಾರತರತ್ನ-

  • ವಿಶ್ವೇಶ್ವರಯ್ಯ.
  • ಭೀಮಸೇನ ಜೋಶಿ.
  • ಸಿ.ಎನ್.ಆರ್. ರಾವ್.

5th EVS Chapter 16 Answers Kannada Medium

ಇವರು ಯಾರು? ಇವರ ಬಗ್ಗೆ ೩ ವಾಕ್ಯಗಳನ್ನು ಬರೆ. 

ಉತ್ತರ- ಸೈನಾ ನೆಹ್ವಾಲ್ ವಿಶ್ವದ ನಂ. 1 ಶಟ್ಲರ್

ಜನನ 17 ಮಾರ್ಚ್ 1990) ಒಬ್ಬ ಭಾರತೀಯ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ. ಮಾಜಿ ವಿಶ್ವ ನಂ. 1, ಅವರು 24 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಇದರಲ್ಲಿ ಹತ್ತು ಸೂಪರ್‌ಸರಣಿ ಪ್ರಶಸ್ತಿಗಳು ಸೇರಿವೆ. 2009ರಲ್ಲಿ ವಿಶ್ವದ 2ನೇ ಸ್ಥಾನಕ್ಕೆ ತಲುಪಿದ್ದರೂ, 2015ರಲ್ಲಿ ಮಾತ್ರ ವಿಶ್ವ ನಂ. 1 ಶ್ರೇಯಾಂಕ, ಆ ಮೂಲಕ ಭಾರತದ ಏಕೈಕ ಮಹಿಳಾ ಆಟಗಾರ್ತಿ ಮತ್ತು ನಂತರ ಎರಡನೇ ಭಾರತೀಯ ಆಟಗಾರ್ತಿ - ಪ್ರಕಾಶ್ ಪಡುಕೋಣೆ ನಂತರ - ಈ ಸಾಧನೆಯನ್ನು ಸಾಧಿಸಿದರು.ಅವರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಮೂರು ಬಾರಿ ಪ್ರತಿನಿಧಿಸಿದ್ದಾರೆ, ಲಂಡನ್ 2012 ರಲ್ಲಿ ಎರಡನೇ ಬಾರಿಗೆ ಕಂಚಿನ ಪದಕವನ್ನು ಗೆದ್ದಿದ್ದಾರೆ.

ನಿನ್ನ ಸುತ್ತಲಿನ ಪರಿಸರದಲ್ಲಿ ಪ್ರಸಿದ್ಧರಾದ ಯಾರಾದರು ಒಬ್ಬರು ಸಾಹಿತಿ/ಕ್ರೀಡಾಪಟು/ಕವಿ/ಲೇಖಕರು/ ನೃತ್ಯಪಟು / ರಂಗಭೂಮಿಯಲ್ಲಿ ಹೆಸರಾದವರ ಬಗ್ಗೆ ೫ ವಾಕ್ಯಗಳನ್ನು ಬರೆ. 

ಉತ್ತರ- 

  • ಎಸ್ ಎಲ್ ಭೈರಪ್ಪ

ಸಂತಶಿವರ ಲಿಂಗಣ್ಣಯ್ಯ ಭೈರಪ್ಪ (ಜನನ 20 ಆಗಸ್ಟ್ 1931) ಒಬ್ಬ ಭಾರತೀಯ ಕನ್ನಡ  ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿತ್ರಕಥೆಗಾರ .ಅವರ ಕೃತಿಗಳು ಕರ್ನಾಟಕ ರಾಜ್ಯದಲ್ಲಿ ಜನಪ್ರಿಯವಾಗಿದೆ ಮತ್ತು ಅವರು ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.ಅವರ ಕಾದಂಬರಿಗಳು ವಿಷಯ, ರಚನೆ ಮತ್ತು ಪಾತ್ರದ ವಿಷಯದಲ್ಲಿ ಅನನ್ಯವಾಗಿವೆ.ಅವರು ಕನ್ನಡ ಭಾಷೆಯಲ್ಲಿ ಹೆಚ್ಚು ಮಾರಾಟವಾದ ಲೇಖಕರಲ್ಲಿ ಒಬ್ಬರಾಗಿದ್ದಾರೆ ಮತ್ತು ಅವರ ಪುಸ್ತಕಗಳನ್ನು ಹಿಂದಿ ಮತ್ತು ಮರಾಠಿಗೆ ಅನುವಾದಿಸಲಾಗಿದೆ ಮತ್ತು ಮಾರಾಟಗಾರರಾಗಿದ್ದಾರೆ.

ಭೈರಪ್ಪ ಅವರ ಕೃತಿಗಳು ನವೋದಯ, ನವ್ಯ, ಬಂಡಾಯ ಅಥವಾ ದಲಿತದಂತಹ ಸಮಕಾಲೀನ ಕನ್ನಡ ಸಾಹಿತ್ಯದ ಯಾವುದೇ ನಿರ್ದಿಷ್ಟ ಪ್ರಕಾರಕ್ಕೆ ಹೊಂದಿಕೆಯಾಗುವುದಿಲ್ಲ, ಭಾಗಶಃ ಅವರು ಬರೆಯುವ ವಿಷಯಗಳ ವ್ಯಾಪ್ತಿಯ ಕಾರಣ. ಅವರ ಪ್ರಮುಖ ಕೃತಿಗಳು ಹಲವಾರು ಬಿಸಿಯಾದ ಸಾರ್ವಜನಿಕ ಚರ್ಚೆಗಳು ಮತ್ತು ವಿವಾದಗಳ ಕೇಂದ್ರವಾಗಿದೆ.ಅವರಿಗೆ 2010ರಲ್ಲಿ 20ನೇ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು.ಮಾರ್ಚ್ 2015 ರಲ್ಲಿ, ಭೈರಪ್ಪ ಅವರಿಗೆ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ನೀಡಲಾಯಿತು.ಭಾರತ ಸರ್ಕಾರವು ಅವರಿಗೆ 2016 ರಲ್ಲಿ ಪದ್ಮಶ್ರೀ ಮತ್ತು 2023 ರಲ್ಲಿ ಪದ್ಮಭೂಷಣ ನಾಗರಿಕ ಗೌರವವನ್ನು ನೀಡಿತು.

ಆತ್ಮೀಯರೇ, ಇಲ್ಲಿ ನಾವು 5th EVS Chapter 16 Answers Kannada Medium ಈ ಅಧ್ಯಾಯದ ಪ್ರಮುಖ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಾಯಕವಾಗಬಹುದು ಎಂಬುದು ನಮ್ಮ ಭಾವನೆ.

5th EVS Lesson 16 Our India - Political and Cultural Notes In PDF👇👇👇 

pdf 6.5Mb

5th EVS Notes 👇👇👇👇





















ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.