ಈ ಬ್ಲಾಗ್ ಲೇಖನದಲ್ಲಿ ಪ್ರಸ್ತುತ Perimeter And Area Of Simple Geometrical Figures Class 4 Solutions In Kannada ಸರಳ ರೇಖಾಕೃತಿಗಳ ಸುತ್ತಳತೆ ಮತ್ತು ವಿಸ್ತೀರ್ಣ Sarala Rekhakruthigalu Suttalathe Mattu Visthirna ಪಾಠದಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ನೀಡಲಾಗಿದೆ.
ಈ ಪಾಠದಲ್ಲಿ ನೀವು ಈಗಾಗಲೇ ಸರಳ ರೇಖಾಕೃತಿಗಳ ಸುತ್ತಳತೆ Perimeter And Area Of Simple Geometrical Figures ಯನ್ನು ಕಂಡುಹಿಡಿಯುವುದು,ಸುತ್ತಳತೆಯ ಪರಿಕಲ್ಪನೆ ಬೆಳೆಸಿಕೊಂಡು ಲೆಕ್ಕ ಬಿಡಿಸಿರುವೆ, ಸರಳ ಆಕೃತಿಗಳ ವಿಸ್ತೀರ್ಣದ ಅರ್ಥವನ್ನು ಅರಿತು,ಕೊಟ್ಟ ಆಕೃತಿಗಳ ವಿಸ್ತೀರ್ಣವನ್ನು ಕಂಡುಹಿಡಿಯುವುದನ್ನು ಕಲಿತಿರುವೆ.
ಪ್ರಮುಖ ಅಂಶಗಳು-
ಒಂದು ಸರಳರೇಖಾಕೃತಿಯ ಎಲ್ಲಾ ಬಾಹುಗಳ ಒಟ್ಟು ಉದ್ದವನ್ನು ಆ ಆಕೃತಿಯ ಸುತ್ತಳತೆ ಎಂದು ಕರೆಯುವರು.
ಸರಳರೇಖಾಕೃತಿಯ ಸುತ್ತಳತೆ = ಎಲ್ಲಾ ಬಾಹುಗಳ ಒಟ್ಟು ಉದ್ದ
ಒಂದು ಆಕೃತಿಯು ಆಕ್ರಮಿಸುವ ಸ್ಥಳ ಅಥವಾ ಪ್ರದೇಶವನ್ನು ಆ ಆಕೃತಿಯ ವಿಸ್ತೀರ್ಣ ಎಂದು ಕರೆಯುತ್ತೇವೆ.
ವಿಸ್ತೀರ್ಣವನ್ನು ಚದರಮಾನದಲ್ಲಿ ವ್ಯಕ್ತಪಡಿಸಲಾಗುತ್ತದೆ.
ಅಭ್ಯಾಸ ೧.೧
I. ಮುಂದಿನ ಆಕೃತಿಗಳ ಸುತ್ತಳತೆ ಕಂಡುಹಿಡಿ.
1).
ಉತ್ತರ-ಸುತ್ತಳತೆ = EF+FG+GH+HI+IE
= 3cm+5cm+7cm+6cm+4cm
ಸುತ್ತಳತೆ =24 cm
2).
ಸುತ್ತಳತೆ = JN+NM+ML+LK+KJ
= 2cm+5cm+6cm+6cm+8cm
ಸುತ್ತಳತೆ =27 cm
ಸುತ್ತಳತೆ = PU+UT+TS+SR+RQ+QP
= 3cm+3cm+4cm+2cm+2cm+4cm
ಸುತ್ತಳತೆ =18 cm
ಸುತ್ತಳತೆ = WM+MR+RN+NC+CX+XW
= 2cm+3cm+6cm+4cm+8cm+7cm
ಸುತ್ತಳತೆ =30 cm
II.A ಪಟ್ಟಿಯಲ್ಲಿ ಆಕೃತಿಗಳನ್ನು,B ಪಟ್ಟಿಯಲ್ಲಿ ಅವುಗಳ ಸುತ್ತಳತೆಯನ್ನು ನೀಡಿದೆ.Aಪಟ್ಟಿಯನ್ನುB ಪಟ್ಟಿಗೆ ಹೊಂದಿಸಿ ಉತ್ತರವನ್ನು ಕೊಟ್ಟಿರುವ ಜಾಗದಲ್ಲಿ ಬರೆ :
ಉತ್ತರ-
1).
ಉತ್ತರ-
ಕೊಟ್ಟಿರುವ ಮೂರು ಬಾಹುಗಳ ಮೊತ್ತ = 2 ಸೆಂಮೀ + 10 ಸೆಂಮೀ + 10 ಸೆಂಮೀ
= 22 ಸೆಂಮೀ
ನಾಲ್ಕನೇ ಬಾಹುವಿನ ಉದ್ದ = ಸುತ್ತಳತೆ- ಮೂರು ಬಾಹುಗಳ ಮೊತ್ತ
ನಾಲ್ಕನೇ ಬಾಹುವಿನ ಉದ್ದ = 24 ಸೆಂಮೀ- 22 ಸೆಂಮೀ
ನಾಲ್ಕನೇ ಬಾಹುವಿನ ಉದ್ದ =2 ಸೆಂಮೀ
2).
ಉತ್ತರ-
ಕೊಟ್ಟಿರುವ ನಾಲ್ಕು ಬಾಹುಗಳ ಮೊತ್ತ = 3 ಸೆಂಮೀ + 4 ಸೆಂಮೀ + 8 ಸೆಂಮೀ +4 ಸೆಂಮೀ
= 19 ಸೆಂಮೀ
ಐದನೇ ಬಾಹುವಿನ ಉದ್ದ = ಸುತ್ತಳತೆ- ನಾಲ್ಕು ಬಾಹುಗಳ ಮೊತ್ತ
ಐದನೇ ಬಾಹುವಿನ ಉದ್ದ = 24 ಸೆಂಮೀ- 19ಸೆಂಮೀ
ಐದನೇ ಬಾಹುವಿನ ಉದ್ದ = 5 ಸೆಂಮೀ
ಚಿತ್ರದಲ್ಲಿ ಒಂದು ಬಾಹುವಿನ ಉದ್ದ 7 ಸೆಂಮೀ ಇದ್ದು, ಎಲ್ಲ ಬಾಹುಗಳು ಸಮವಾಗಿವೆ. ಈ ಆಕೃತಿಯ ಸುತ್ತಳತೆ ಕಂಡುಹಿಡಿ.
ಉತ್ತರ-
ಚಿತ್ರದಲ್ಲಿ ಎಲ್ಲ ಬಾಹುಗಳು ಸಮವಾಗಿವೆ.
ಸುತ್ತಳತೆ = KL+LN+NM+MK
= 7cm+7cm+7cm+7cm+8cm+7cm
ಸುತ್ತಳತೆ = 28 cm
ಅಭ್ಯಾಸ ೧.೩
I. ಗ್ರಾಫ್ ಹಾಳೆಯಲ್ಲಿನ ಪ್ರತಿ ಚೌಕದ ವಿಸ್ತೀರ್ಣ 1 ಚದರ ಸೆಂ.ಮೀ ಆದರೆ ಮುಂದಿನ ಆಕೃತಿಗಳ ವಿಸ್ತೀರ್ಣ ಕಂಡುಹಿಡಿ.
ಆಕೃತಿಯೊಳಗಿನ ಒಟ್ಟು ಚೌಕಗಳ ಸಂಖ್ಯೆ = 5
ಆದ್ದರಿಂದ ಆಕೃತಿಯ ವಿಸ್ತೀರ್ಣ = 5 ಚದರ ಸೆಂಮೀ
ಆಕೃತಿಯೊಳಗಿನ ಒಟ್ಟು ಚೌಕಗಳ ಸಂಖ್ಯೆ = 21
ಆದ್ದರಿಂದ ಆಕೃತಿಯ ವಿಸ್ತೀರ್ಣ = 21 ಚದರ ಸೆಂಮೀ
ಆಕೃತಿಯೊಳಗಿನ ಒಟ್ಟು ಚೌಕಗಳ ಸಂಖ್ಯೆ = 20
ಆದ್ದರಿಂದ ಆಕೃತಿಯ ವಿಸ್ತೀರ್ಣ = 20 ಚದರ ಸೆಂಮೀ
ಆಕೃತಿಯೊಳಗಿನ ಒಟ್ಟು ಚೌಕಗಳ ಸಂಖ್ಯೆ = 16
ಆದ್ದರಿಂದ ಆಕೃತಿಯ ವಿಸ್ತೀರ್ಣ = 16 ಚದರ ಸೆಂಮೀ
ಆಕೃತಿಯೊಳಗಿನ ಒಟ್ಟು ಚೌಕಗಳ ಸಂಖ್ಯೆ = 12
ಆದ್ದರಿಂದ ಆಕೃತಿಯ ವಿಸ್ತೀರ್ಣ = 12 ಚದರ ಸೆಂಮೀ
👉Perimeter And Area Of Simple Geometrical Figures Class 4 Solutions In Kannada PDF👈
If you have any doubts please comment