Kingdoms Kings And An Early Repulic Class 6 History Notes In Kannada Medium 6 ನೇ ತರಗತಿ ಸಮಾಜ ಅಧ್ಯಾಯ-5 ರ ಅತ್ಯುತ್ತಮ ಸಂಕ್ಷಿಪ್ತ ಪ್ರಮುಖ ಅಂಶಗಳನ್ನುಇಲ್ಲಿ ನೀಡಲಾಗಿದೆ. ಈ ಪ್ರಮುಖ ಅಂಶಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.
- ರಾಜರುಗಳ ಆಯ್ಕೆ
- ಅಶ್ವಮೇಧ ಯಜ್ಞ
- ರಾಜ ಮತ್ತು ಪುರೋಹಿತರು
- ವರ್ಣಾಶ್ರಮ ಧರ್ಮ
- ಜನಪದಗಳ ವಿರೋಧ
- ಮಹಾಜನಪದಗಳು
ಹಿಂದೆ ರಾಜರಾಗುತ್ತಿದ್ದ ವಿಧಾನ ಹೇಗೆ?
ಅಶ್ವಮೇಧ ಯಾಗ
- ಒಂದು ಕುದುರೆಯನ್ನು ಸ್ವತಂತ್ರವಾಗಿ ಓಡಾಡಿಸಲಾಗುತ್ತಿತ್ತು ಮತ್ತು ಅದನ್ನು ರಾಜನ ಸೈನಿಕರು ಕಾವಲು ಕಾಯಿತ್ತಿದ್ದರು.
- ಈ ಕುದುರೆ ಇತರ ರಾಜರ ರಾಜ್ಯಗಳಿಗೆ ಹೋದರೆ ಮತ್ತು ಅಲ್ಲಿನ ರಾಜರು ಅದನ್ನು ತಡೆದು ನಿಲ್ಲಿಸಿದರೆ, ಅವರು ಆ ಸೈನಿಕರೊಂದಿಗೆ ಹೋರಾಡಬೇಕಾಗುತ್ತದೆ.
- ಅವರು ಕುದುರೆಯನ್ನು ಹೋಗಲು ಬಿಟ್ಟರೆ, ಯಾಗವನ್ನು ನಡೆಸಲು ಬಯಸಿದ ರಾಜನು ಬಲಶಾಲಿ ಎಂದು ಅವರು ಒಪ್ಪಿಕೊಂಡಂತೆ.
- ನಂತರ ಈ ರಾಜರನ್ನು ಯಾಗಕ್ಕೆ ಆಹ್ವಾನಿಸಲಾಗುತ್ತಿತ್ತು,ಯಾಗವನ್ನು ವಿಶೇಷವಾಗಿ ತರಬೇತಿ ಪಡೆದ ಪುರೋಹಿತರು ನಡೆಸುತ್ತಿದ್ದರು, ಅವರಿಗೆ ಉಡುಗೊರೆಗಳನ್ನು ನೀಡಲಾಗುತ್ತಿತ್ತು.
- ಯಾಗವನ್ನು ಆಯೋಜಿಸಿದ ರಾಜನನ್ನು ಬಹಳ ಶಕ್ತಿಶಾಲಿ ಎಂದು ಗುರುತಿಸಲಾಯಿತು, ಮತ್ತು ಬಂದವರು ಎಲ್ಲರೂ ಅವನಿಗೆ ಉಡುಗೊರೆಗಳನ್ನು ಅರ್ಪಿಸಿತ್ತಿದ್ದರು.
- ಪುರೋಹಿತರು ರಾಜನ ಆಸ್ಥಾನದ ಪ್ರಮುಖ ಸದಸ್ಯರಾಗಿದ್ದರು. ಅವರು ಯಜ್ಞಗಳನ್ನು ನಡೆಸುತ್ತಿದ್ದರು, ರಾಜನಿಗೆ ಸಲಹೆ ನೀಡುತ್ತಿದ್ದರು ಮತ್ತು ಧಾರ್ಮಿಕ ವಿಷಯಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.
- ಈ ಯಾಗಗಳಲ್ಲಿ ರಾಜನು ಕೇಂದ್ರೀಯ ವ್ಯಕ್ತಿಯಾಗಿದ್ದನು.
- ಅವನಿಗೆ ಸಾಮಾನ್ಯವಾಗಿ ವಿಶೇಷ ಆಸನ, ಸಿಂಹಾಸನ ಅಥವಾ ಹುಲಿ ಚರ್ಮ ಇರುತ್ತಿತ್ತು.
- ಯುದ್ಧಭೂಮಿಯಲ್ಲಿ ತನ್ನ ಗೆಳೆಯನಾಗಿದ್ದ ಮತ್ತು ತನ್ನ ಸಾಹಸಗಳಿಗೆ ಸಾಕ್ಷಿಯಾಗಿದ್ದ ಅವನ ಸಾರಥಿ, ಅವನ ವೈಭವದ ಕಥೆಗಳನ್ನು ಹೇಳುತ್ತಿದ್ದ.
- ಅವನ ಸಂಬಂಧಿಕರು, ವಿಶೇಷವಾಗಿ ಅವನ ಹೆಂಡತಿಯರು ಮತ್ತು ಮಕ್ಕಳು, ವಿವಿಧ ಸಣ್ಣನ ಯಾಗಗಳನ್ನು ನಡೆಸಬೇಕಾಗಿತ್ತು.
- ಇತರ ರಾಜರು ಕೇವಲ ಪ್ರೇಕ್ಷಕರಾಗಿದ್ದರು, ಅವರು ಯಾಗದ ಪ್ರದರ್ಶನವನ್ನು ಕುಳಿತು ನೋಡಬೇಕಾಗಿತ್ತು.
- ಪುರೋಹಿತರು ರಾಜನ ಮೇಲೆ ಪವಿತ್ರ ಜಲವನ್ನು ಸಿಂಪಡಿಸುವುದು ಸೇರಿದಂತೆ ವಿಧಿಗಳನ್ನು ನಡೆಸುತ್ತಿದ್ದರು.
- ಸಾಮಾನ್ಯ ಜನರು, ವಿಶ್ ಅಥವಾ ವೈಶ್ಯರು ಸಹ ಉಡುಗೊರೆಗಳನ್ನು ನೀಡುತ್ತಿದ್ದರು.
- ಆದರೆ, ಪುರೋಹಿತರು ಶೂದ್ರರೆಂದು ಪರಿಗಣಿಸಿದಂತಹ ಕೆಲವು ಜನರನ್ನು ಹಲವು ಯಾಗಗಳಿಗೆ ಭಾಗವಹಿಸಲು ಅವಕಾಶ ಇರಲ್ಲಿಲ್ಲ.
ವರ್ಣಾಶ್ರಮ ಧರ್ಮ: Varnas
- ಬ್ರಾಹ್ಮಣರು (ಪುರೋಹಿತರು),
- ಕ್ಷತ್ರಿಯರು (ಯೋಧರು ಮತ್ತು ಆಡಳಿತಗಾರರು),
- ವೈಶ್ಯರು (ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳು)
- ಶೂದ್ರರು (ದುಡಿಮೆಗಾರರು).
ಜನಪದಗಳು
ಮಣ್ಣಿನ ಮಡಿಕೆಗಳು (Painted Grey Ware)
ಮಹಾಜನಪದಗಳು-
- ಸುಮಾರು 2500 ವರ್ಷಗಳ ಹಿಂದೆ, ಕೆಲವು ಜನಪದಗಳು ಇತರ ಜನಪದಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡವು, ಮತ್ತು ಅವುಗಳನ್ನು ಮಹಾಜನಪದಗಳು ಎಂದು ಕರೆಯಲಾಯಿತು.
- ಹೆಚ್ಚಿನ ಮಹಾಜನಪದಗಳಿಗೆ ರಾಜಧಾನಿ ನಗರವಿತ್ತು, ಮಗಧ-ರಾಜಗೃಹ
- ಇವುಗಳಲ್ಲಿ ಹಲವು ಕೋಟೆಗಳಿಂದ ಸುತ್ತುವರೆದಿದ್ದವು. ಅಂದರೆ ಅವುಗಳ ಸುತ್ತ ಮರ, ಇಟ್ಟಿಗೆ ಅಥವಾ ಕಲ್ಲುಗಳಿಂದ ಮಾಡಿದ ಬೃಹತ್ ಗೋಡೆಗಳನ್ನು ನಿರ್ಮಿಸಲಾಗಿತ್ತು.
- ಇತರ ರಾಜರ ದಾಳಿಗಳ ಭಯದಿಂದ ಜನರು ಈ ಕೋಟೆಗಳನ್ನು ನಿರ್ಮಿಸಿದ್ದಾರೆ ಎನ್ನಬಹುದು ಮತ್ತು ರಕ್ಷಣೆ ಅಗತ್ಯವಿತ್ತು.
- ತಮ್ಮ ನಗರಗಳ ಸುತ್ತ ನಿಜವಾಗಿಯೂ ದೊಡ್ಡ, ಎತ್ತರದ ಮತ್ತು ಭವ್ಯ ಗೋಡೆಗಳನ್ನು ನಿರ್ಮಿಸುವ ಮೂಲಕ ತಮ್ಮ ಶ್ರೀಮಂತಿಕೆ ಮತ್ತು ಪರಾಕ್ರಮವನ್ನು ಎಷ್ಟು ಹೆಚ್ಚು ತೋರಿಸಬೇಕೆಂದು ಬಯಸಿದ್ದಾರೆ ಎನ್ನಬಹುದು.
- ಈ ರೀತಿಯಾಗಿ ಕೋಟೆಯೊಳಗಿನ ಭೂಮಿ ಮತ್ತು ಅಲ್ಲಿ ವಾಸಿಸುವ ಜನರನ್ನು ರಾಜನು ಹೆಚ್ಚು ಸುಲಭವಾಗಿ ನಿಯಂತ್ರಿಸಬಹುದಾಗಿತ್ತು. ಈ ರೀತಿಯ ಭಗೀರಥ ಪ್ರಯತ್ನದ ಗೋಡೆಗಳನ್ನು ನಿರ್ಮಿಸಲು ಬಹಳಷ್ಟು ಯೋಜನೆಗಳು ಬೇಕಾಗುತ್ತದೆ. ಸಾವಿರಾರು, ಲಕ್ಷಾಂತರ ಇಟ್ಟಿಗೆ ಅಥವಾ ಕಲ್ಲುಗಳನ್ನು ಸಿದ್ಧಪಡಿಸಬೇಕಾಗಿತ್ತು. ಇದರಿಂದಾಗಿ ಸಾವಿರಾರು ಗಂಡಸರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅಗಾಧ ಪರಿಶ್ರಮದ ಅಗತ್ಯವಿತ್ತು. ಇದಕ್ಕೆಲ್ಲಾ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕಾಗಿತ್ತು.
ಸೈನ್ಯಗಳ ನಿರ್ವಹಣೆ-
Taxes ತೆರಿಗೆಗಳು.
- ಬೆಳೆಗಳ ತೆರಿಗೆ : ಕೃಷಿಯಿಂದ ಬರುವ ಇಳುವರಿಯ ಮೇಲಿನ ತೆರಿಗೆ.
- ಕುಶಲಕರ್ಮಿಗಳ ತೆರಿಗೆ : ಕರಕುಶಲ ವಸ್ತುಗಳನ್ನು ತಯಾರಿಸುವವರು ಕಟ್ಟುವ ತೆರಿಗೆ.
- ಕಾಯುಕ ಜನಾಂಗದ ತೆರಿಗೆ : ಕಾಯುಕ ಜನಾಂಗದವರು ಪ್ರಾಣಿಗಳು ಅಥವಾ ಪ್ರಾಣಿಗಳ ಉತ್ಪನ್ನಗಳನ್ನು ತೆರಿಗೆಯಾಗಿ ನೀಡುತ್ತಿದ್ದರು.
- ವ್ಯಾಪಾರದ ಮೂಲಕ ಸರಕುಗಳ ತೆರಿಗೆ : ವ್ಯಾಪಾರದ ಮೂಲಕ ಸಾಗಿಸುವ ಸರಕುಗಳ ಮೇಲಿನ ತೆರಿಗೆ.
- ಬೇಟೆಗಾರರು ಮತ್ತು ಸಂಗ್ರಹಕಾರರು ರಾಜನಿಗೆ ಕಾಡು ಉತ್ಪನ್ನಗಳನ್ನು ಒದಗಿಸಬೇಕಾಗಿತ್ತು. ಬೇಟೆಗಾರರು ಮತ್ತು ಸಂಗ್ರಹಕಾರರು ರಾಜನಿಗೆ ಕಾಡಿನಿಂದ ಹಣ್ಣು, ಹೂವು, ಮುಂತಾದ ಉತ್ಪನ್ನಗಳನ್ನು ತೆರಿಗೆಯಾಗಿ ಕೊಡುತ್ತಿದ್ದರು.
ಕೃಷಿಯಲ್ಲಿನ ಬದಲಾವಣೆಗಳು
- ಕಬ್ಬಿಣದ ನೇಗಿಲುಗಳ ಹೆಚ್ಚುತ್ತಿರುವ ಬಳಕೆ- ಮರದ ನೇಗಿಲುಗಳಿಗಿಂತ ಕಬ್ಬಿಣದ ನೇಗಿಲನ್ನು ಬಳಸಿದರೆ ಗಟ್ಟಿಯಾದ, ಮಣ್ಣನ್ನು ಉಳುಮೆ ಮಾಡಲು ಸುಲಭವಾಗುತ್ತದೆ, ಹೆಚ್ಚು ಧಾನ್ಯವನ್ನು ಉತ್ಪಾದಿಸಬಹುದು.
- ಜನರು ನಾಟಿ ಪದ್ಧತಿಯನ್ನು ಪ್ರಾರಂಭಿಸಿದರು- ನೆಲದ ಮೇಲೆ ಬೀಜಗಳನ್ನು ಚದುರಿಸಿ ಮೊಳಕೆ ಬರುವ ಸಸ್ಯಗಳ ಬದಲಾಗಿ, ಮೊದಲು ಸಸ್ಯಗಳನ್ನು ಬೆಳೆಸಿ ನಂತರ ಹೊಲಗಳಲ್ಲಿ ನೆಡಲಾಯಿತು. ಇದರಿಂದಾಗಿ ಹೆಚ್ಚು ಸಸ್ಯಗಳು ಬದುಕುಳಿದು ಉತ್ಪಾದನೆ ಹೆಚ್ಚಾಯಿತು.
ಮಗಧ
- ಮಗಧದ ಕೆಲವು ಭಾಗಗಳು ಕಾಡುಪ್ರದೇಶಗಳಾಗಿದ್ದವು. ಕಾಡುಗಳಲ್ಲಿ ವಾಸಿಸುತ್ತಿದ್ದ ಆನೆಗಳನ್ನು ಸೆರೆಹಿಡಿದು ಸೈನ್ಯಕ್ಕಾಗಿ ತರಬೇತಿ ನೀಡಲಾಗುತ್ತಿತ್ತು.
- ಕಾಡುಗಳು ಮನೆಗಳು, ಗಾಡಿಗಳು ಮತ್ತು ರಥಗಳನ್ನು ನಿರ್ಮಿಸಲು ಮರವನ್ನೂ ಒದಗಿಸಿದವು.
- ಕಬ್ಬಿಣದ ಗಣಿಗಳು ಇದ್ದವು, ಇದನ್ನು ಬಲವಾದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸಲಾಗುತ್ತಿತ್ತು.
- ಮಗಧದಲ್ಲಿ ಬಿಂಬಿಸಾರ ಮತ್ತು ಅಜಾತಶತ್ರು ಎಂಬ ಇಬ್ಬರು ಬಹಳ ಶಕ್ತಿಶಾಲಿ ರಾಜರುಗಳಿದ್ದರು, ಅವರು ಇತರ ಜನಪದಗಳನ್ನು ಜಯಿಸಾಲು ಪ್ರಯತ್ನಿಸುತ್ತಿದ್ದರು.
- ಮಹಾಪದ್ಮ ನಂದ - ಉಪಖಂಡದ ವಾಯುವ್ಯ ಭಾಗದವರೆಗೆ ತನ್ನ ಪ್ರಭಾವವನ್ನು ವಿಸ್ತರಿಸಿದನು.
- ಬಿಹಾರದಲ್ಲಿರುವ ರಾಜಗೃಹ (ಇಂದಿನ ರಾಜಗೀರ್) ಹಲವಾರು ವರ್ಷಗಳ ಕಾಲ ಮಗಧದ ರಾಜಧಾನಿಯಾಗಿತ್ತು.
- ನಂತರ ರಾಜಧಾನಿಯನ್ನು ಪಾಟಲಿಪುತ್ರಕ್ಕೆ (ಇಂದಿನ ಪಾಟ್ನಾ) ಸ್ಥಳಾಂತರಿಸಲಾಯಿತು.
ವಜ್ಜಿ
- ರಾಜಧಾನಿ - ವೈಶಾಲಿ (ಬಿಹಾರ)
- ಗಣ ಅಥವಾ ಸಂಘ ಎಂದು ಕರೆಯಲ್ಪಡುವ ವಿಭಿನ್ನ ರೀತಿಯ ಆಡಳಿತದವ್ಯವಸ್ಥೆಯನ್ನು ಹೊಂದಿತ್ತು.
- ಗಣ ಅಥವಾ ಸಂಘದಲ್ಲಿ ಒಬ್ಬ ರಾಜನು ಮಾತ್ರವಲ್ಲದೆ, ಅನೇಕ ರಾಜರುಗಳಿದ್ದರು.
- ಪ್ರತಿಯೊಬ್ಬರನ್ನೂ ರಾಜ ಎಂದು ಕರೆಯಲಾಗುತ್ತಿತ್ತು.
- ಈ ರಾಜರುಗಳು ಒಟ್ಟಾಗಿ ಧಾರ್ಮಿಕ ವಿಧಿಗಗಳನ್ನು ನಡೆಸುತ್ತಿದ್ದರು.
- ಅವರು ಸಭೆಗಳಲ್ಲಿಯೂ ಸೇರುತ್ತಿದ್ದರು ಮತ್ತು ಚರ್ಚೆ ಮತ್ತು ವಾದದ ಮೂಲಕ ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂದು ನಿರ್ಧರಿತ್ತಿದ್ದರು.
- ಉದಾಹರಣೆಗೆ, ಅವರ ಮೇಲೆ ಶತ್ರು ದಾಳಿ ಮಾಡಿದರೆ, ಎದುರಿಸಲು ಏನು ಮಾಡಬೇಕು ಎಂದು ಚರ್ಚಿಸಲು ಸಭೆ ಸೇರುತ್ತಿದ್ದರು.
- ಮಹಿಳೆಯರು, ದಾಸರು ಮತ್ತು ಕಮ್ಮಾರರು ಈ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಿರಲಿಲ್ಲ.
👉Kingdoms Kings And An Early Repulic Class 6 History Notes In Kannada Medium 👈
👇Kingdoms Kings And An Early Repulic Class 6 History Notes In Kannada Medium FAQS👇
ಹಿಂದೆ ರಾಜರಾಗಲು ಯಾವ ವಿಧಾನಗಳಿದ್ದವು?
ಯಜ್ಞ: ದೊಡ್ಡ ಯಾಗಗಳನ್ನು ನಡೆಸುವ ಮೂಲಕ ರಾಜರಾಗುವುದು ಒಂದು ಪ್ರಮುಖ ವಿಧಾನವಾಗಿತ್ತು. ಉದಾಹರಣೆಗೆ, ಅಶ್ವಮೇಧ ಯಾಗ. ಜನಪದ: ಕೆಲವು ರಾಜರನ್ನು ಜನರು ಆಯ್ಕೆ ಮಾಡುತ್ತಿದ್ದರು. ಪರಂಪರೆ: ಕೆಲವೊಮ್ಮೆ, ರಾಜನ ಮಗನು ರಾಜನಾಗುತ್ತಿದ್ದನು.
ಯಾಗಗಳ ಪ್ರಾಮುಖ್ಯತೆ ಏನು?
ಯಾಗಗಳು ರಾಜನ ಶಕ್ತಿ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಲು ಸಹಾಯ ಮಾಡಿದವು. ಯಾಗಗಳಲ್ಲಿ ಭಾಗವಹಿಸುವುದರಿಂದ ರಾಜನಿಗೆ ಸಂಪತ್ತು ಮತ್ತು ಪ್ರಭಾವವನ್ನು ಗಳಿಸಲು ಸಹಾಯವಾಯಿತು.
ವರ್ಣಾಶ್ರಮ ಧರ್ಮ ಏನು?
ವರ್ಣಾಶ್ರಮ ಧರ್ಮವು ಜನರನ್ನು ಜನ್ಮದ ಆಧಾರದ ಮೇಲೆ ನಾಲ್ಕು ವರ್ಗಗಳಾಗಿ ವಿಂಗಡಿಸುವ ಸಾಮಾಜಿಕ ವ್ಯವಸ್ಥೆಯಾಗಿದೆ. ಈ ವರ್ಗಗಳೆಂದರೆ ಬ್ರಾಹ್ಮಣರು (ಪುರೋಹಿತರು), ಕ್ಷತ್ರಿಯರು (ಯೋಧರು ಮತ್ತು ಆಡಳಿತಗಾರರು), ವೈಶ್ಯರು (ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳು) ಮತ್ತು ಶೂದ್ರರು (ದುಡಿಮೆಗಾರರು). ಯಾಗಗಳಲ್ಲಿ ಭಾಗವಹಿಸಲು ಕೆಲವು ವರ್ಗಗಳಿಗೆ ಮಾತ್ರ ಅವಕಾಶವಿತ್ತು.
ಮಹಾಜನಪದಗಳು ಯಾವುವು?
ಸುಮಾರು 2500 ವರ್ಷಗಳ ಹಿಂದೆ, ಕೆಲವು ಜನಪದಗಳು ಇತರ ಜನಪದಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡವು ಮತ್ತು ಅವುಗಳನ್ನು ಮಹಾಜನಪದಗಳು ಎಂದು ಕರೆಯಲಾಯಿತು. ಕೆಲವು ಪ್ರಮುಖ ಮಹಾಜನಪದಗಳೆಂದರೆ ಮಗಧ, ವಜ್ಜಿ, ಗಾಂಧಾರ ಮತ್ತು ಕಾಂಭೋಜ.
ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕಾಲಾನಂತರದಲ್ಲಿ ಯಾವ ಬದಲಾವಣೆಗಳು ಸಂಭವಿಸಿದವು?
ರಾಜರಾಗಲು ಯಜ್ಞಗಳ ಪ್ರಾಮುಖ್ಯತೆ ಕಡಿಮೆಯಾಯಿತು. ಗಣ ಅಥವಾ ಸಂಘಗಳಂತಹ ಗುಂಪು ಆಡಳಿತ ವ್ಯವಸ್ಥೆಗಳು ಕೊನೆಗೊಂಡವು. ಭಾರತದಲ್ಲಿ ಒಂದು ರಾಜ್ಯದ ಆಡಳಿತಕ್ಕೆ ಒಬ್ಬ ರಾಜನ ವ್ಯವಸ್ಥೆ ಬಂದಿತು. ಕಾಲಾನಂತರದಲ್ಲಿ, ಭಾರತದಲ್ಲಿ ವಸಾಹತುಶಾಹಿ ಆಡಳಿತ ಮತ್ತು ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿತು.
If you have any doubts please comment