ಹಾಯ್, ಹಲೋ, ಸ್ನೇಹಿತರೆ, 👏
ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ,
🧡 ನಾನು ನಿಮಗೆ importance of experiment in science teaching ವಿಜ್ಞಾನ ಕಲಿಕೆಯಲ್ಲಿ ಪ್ರಯೋಗಳ ಪಾತ್ರ. ಈ ವಿಷಯದ ಬಗ್ಗೆ ಕೆಲವು ಅಂಶಗಳನ್ನು ಹಂಚಿಕೊಳ್ಳಲಿದ್ದೇನೆ.
"ನಂಬದಿರು ಏನನ್ನು ನಿನ್ನ ಅನುಭವಕ್ಕೆ ಬಾರದುದನ್ನು",ಭಗವಾನ್ ಬುದ್ಧ.
ನಾವು ಇಂದು ಜೀವಿಸುತ್ತಿರುವ ಕಾಲ ವಿಜ್ಞಾನ ತಂತ್ರಜ್ಞಾನ ಯುಗ. ಮಾನವ ತನ್ನ ಅದ್ಭುತ ಕನಸುಗಳನ್ನು ನನಸಾಗಿಸಿಕೊಂಡಿದ್ದಾನೆ.ಇವುಗಳ ಬಳಕೆಗೆ ಮಾರುಹೋಗಿ ಮೂಲವಿಜ್ಞಾನವನ್ನು ಮರೆತು ಹೋಗಿದ್ದಾನೆ.ಇದು ದುರಂತವೇ ಸರಿ.
ಇಂದು ಯುವ ಪೀಳಿಗೆ ಮೂಲವಿಜ್ಞಾನದತ್ತ ಒಲವು ಬೆಳೆಸಿಕೊಂಡು ಆಳವಾದ ಅಧ್ಯಯನ ನಡೆಸಿ, ಸಂಶೋಧನೆ ನಡೆಸುವಂತೆ ಆಗಲು ಅವರಿಗೆ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕ ಚಿಂತನೆ, ವೈಜ್ಞಾನಿಕ ಯೋಚನೆ, ಆಳವಾದ ಅಧ್ಯಯನ ಮಾಡುವುದು, ಪ್ರಯೋಗಗಳನ್ನು ಮಾಡುವುದು ಹಾಗೂ ಸೃಜನಶೀಲ ಚಿಂತನೆ ಮಾಡುವಂತೆ ಪ್ರೇರೇಪಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರಾದ ನಮ್ಮೆಲ್ಲರ ಜವಾಬ್ದಾರಿ ಆಗಿದೆ.ಈಗಿನ NEP-2020 ಕೂಡ ಅದನ್ನೇ ಒತ್ತು ನೀಡುತ್ತದೆ.
" ಆಟಿಕೆ ಮುರಿದು ಒಳಗೇನಿದೆ? ಎಂದು ಮಗು ನೋಡಿದಾಗಲೇ ಕಲಿಕೆ ಆರಂಭ".
ಹೌದು ನಾವು ನಮ್ಮ ಮಕ್ಕಳ ಕಲಿಕೆಯನ್ನು ಸೃಜನಶೀಲ ಚಟುವಟಿಕೆಗಳ, ಅನುಭವಗಳ ಸುತ್ತ ಹೆಣೆದರೆ, ಸ್ವಲ್ಪ ಪ್ರಯತ್ನದಿಂದ ಉತ್ತಮ ಗುಣಮಟ್ಟದ ಕಲಿಕೆ ಹಾಗೂ ಮೇಲಿನ ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಇದಕ್ಕೆ ಶಿಕ್ಷಕರಾದ ನಮ್ಮ ಪ್ರಯತ್ನ ಅಗತ್ಯವಿದೆ.
" ಇಡೀ ಪ್ರಪಂಚವೇ ಒಂದು ಕಸದ ತೊಟ್ಟಿ ಹುಡುಕಿ ನೋಡಿದರೆ ಆಟಿಕೆಗಳಬುಟ್ಟಿ". ಈ ಒಂದು ಮಾತೇ ಸಾಕು ನಮ್ಮ ಶಿಕ್ಷಕರು ತರಗತಿಯಲ್ಲಿ ವಿಜ್ಞಾನ ಪ್ರಯೋಗಗಳನ್ನು ಕೈಗೊಳ್ಳಲು.
ನಮಗೆ ನಿಮಗೆ ಗೊತ್ತೇ ಇರುವ ವಿಷಯ ನಮ್ಮ ಶಾಲೆಗಳಿಗೆ ದೊರೆಯುವ ಅನುದಾನವೂ ಕಡಿಮೆ. ವಿಜ್ಞಾನ ಉಪಕರಣಗಳನ್ನು ಕೊಳ್ಳಲು ಹಣವೆಲ್ಲಿ ಎಂಬುದು ಹಲವು ಶಿಕ್ಷಕರ ದೂರಾಗಿರುತ್ತದೆ.ಈ ದೂರಿನ ಆಚೆಗೂ ನಾವು ಚಿಂತಿಸಿ ನೋಡಬೇಕು.
ನಮಗೆ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇಡವೆಂದು ಬಿಸಾಡುವ ಹಲವು ವಸ್ತುಗಳನ್ನು ( ಕಸ) ಸಂಗ್ರಹಿಸಿ ಅವುಗಳನ್ನು ನಮ್ಮ ಬೋಧನೆಯಲ್ಲಿ, ಪ್ರಯೋಗಗಳಲ್ಲಿ ಬಳಸಬಹುದಾಗಿದೆ. ನಿಮಗೆ ಗೊತ್ತೇ ನಮ್ಮ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ.ರಾಮನ್ ರವರು ತಮ್ಮ ಪ್ರಯೋಗ ಕೈಗೊಳ್ಳಲು ಲಕ್ಷಾಂತರ ಹಣ ವ್ಯಯಿಸಲಿಲ್ಲ ,ಆದಾಗ್ಯೂ ಅವರ ರಾಮನ್ ಪರಿಣಾಮ ಕ್ಕೆ ನೊಬೆಲ್ ಪ್ರಶಸ್ತಿ ಪಡೆದರು.ಈ ಸಾಧನೆ ನಮಗೆ ಪ್ರೇರಣೆ ಆಗಬೇಕು ಅಲ್ಲವೇ?
Importance of experiment in science teaching ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂಚಿಕಳ್ಳಲಿದ್ದೇನೆ.
ಕನ್ನಡದಲ್ಲಿ ವಿಜ್ಞಾನ ಕೌತುಕಗಳನ್ನು ತಿಳಿಯಲು ನನ್ನನ್ನು ಪ್ರೋತ್ಸಾಹಿಸಲು ದಯಮಾಡಿ-------
ನಿಮಗೆ ಈ ವಿಷಯ ಇಷ್ಟ ವಾದರೆ ನನ್ನ ಬ್ಲಾಗ್ ಫಾಲೋ ಮಾಡಿ,ಕಾಮೆಂಟ್ ಮಾಡಿ, ಲೈಕ್ ಮಾಡಿ .
ಧನ್ಯವಾದಗಳು.
ನಿಮ್ಮವ JPN❤
ವಿಜ್ಞಾನ ತಂತ್ರಜ್ಞಾನ ಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡುವ ನನ್ನದೇ ಯೂಟ್ಯೂಬ್ ನ ಲಿಂಕ್-
https://youtube.com/channel/UCcqG4mgQekFW5qr_QlkSREw
ಈ ಚಾನೆಲ್ ಗೆ ಲೈಕ್, ಸಬ್ಸ್ಕ್ರೈಬ್, ಶೇರ್ ಮಾಡಲು ಮರೆಯ ಬೇಡಿ.
ವಿಜ್ಞಾನ ತಂತ್ರಜ್ಞಾನ ಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ನೀಡುವ ನನ್ನದೇ ಬ್ಲಾಗ್ ನ ಲಿಂಕ್-
https://scienceteachingresourc.blogspot.com/?m=1
ಈ ಬ್ಲಾಗ್ follow ಮಾಡುವುದನ್ನು ಮರೆಯಬೇಡಿ.
Stock Photo - contributor web links-
https://www.shutterstock.com/g/PARIMALA+K+P?rid=289734485
https://www.dreamstime.com/dhanujn71_info
https://pixabay.com/images/id-5851548/
https://www.dreamstime.com/beautiful-nerium-oleander-flower-evergreen-shrub-widely-grows-indian-sub-continent-plant-poisonous-image207435596
https://www.pexels.com/photo/beautiful-flower-touch-me-not-touch-me-not-flowering-7497446/
<script async src="https://pagead2.googlesyndication.com/pagead/js/adsbygoogle.js?client=ca-pub-7816114004821211"
crossorigin="anonymous"></script>
If you have any doubts please comment