ADS

KTBS Solutions for Class 8 Science Chapter 2 in Kannada Medium

KTBS Solutions for Class 8 Science Chapter 2  in Kannada Medium  Microorganisms Friend And Foe  ಅಧ್ಯಾಯ 2 ಸೂಕ್ಷ್ಮ ಜೀವಿಗಳು ಮಿತ್ರ ಮತ್ತು ಶತ್ರು.ದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

KTBS Solutions for Class 8 Science Chapter 2  in Kannada Medium  Microorganisms Friend And Foe

    ಸೂಕ್ಷ್ಮ ಜೀವಿಗಳು ಮಿತ್ರ ಮತ್ತು ಶತ್ರು ಅಧ್ಯಾಯದಲ್ಲಿನ ಪ್ರಮುಕಾಂಶಗಳು. 

    1. ಸೂಕ್ಷ್ಮ ಜೀವಿಗಳು ತುಂಬಾ ಚಿಕ್ಕದಾಗಿವೆ ಮತ್ತು ಬರಿಗಣ್ಣಿಗೆ ಕಾಣಿಸುವುದಿಲ್ಲ.
    2. ಸೂಕ್ಷ್ಮ ಜೀವಿಗಳು ಅತಿತಂಪು (ice cold) ಹವಾಗುಣದಿಂದ ಹಿಡಿದು ಬಿಸಿನೀರಿನ ಬುಗ್ಗೆಗಳು ಮತ್ತು ಮರುಭೂಮಿಗಳಿಂದ ಹಿಡಿದು ಜೌಗುಪ್ರದೇಶಗಳಂತಹ ಎಲ್ಲಾ ವಿಧಗಳ ವಾತಾವರಣದಲ್ಲಿ ಬದುಕಬಲ್ಲವು.
    3. ಸೂಕ್ಷ್ಮ ಜೀವಿಗಳು ಗಾಳಿ, ನೀರಿನಲ್ಲಿ ಕಂಡುಬರುತ್ತವೆ. ಸಸ್ಯ ಮತ್ತು ಪ್ರಾಣಿಗಳ ದೇಹಗಳ ಒಳಗೂ ಸಹ ಕಂಡುಬರುತ್ತವೆ. 
    4. ಅವುಗಳು ಏಕಕೋಶೀಯ ಅಥವಾ ಬಹುಕೋಶೀಯವಾಗಿರಬಹುದು.
    5. ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಪ್ರೋಟೋಜೊವಾ ಮತ್ತು ಕೆಲವು ಶೈವಲಗಳು ಸೂಕ್ಷ್ಮ ಜೀವಿಗಳ ಗುಂಪಿಗೆ ಸೇರಿವೆ. ವೈರಸ್‌ಗಳು ಮೇಲಿನ ಜೀವಿಗಳಿಗಿಂತ ಭಿನ್ನವಾಗಿದ್ದರೂ ಕೂಡಾ ಸೂಕ್ಷ್ಮ ಜೀವಿಗಳೆಂದು ಪರಿಗಣಿಸಲ್ಪಟ್ಟಿವೆ.
    6. ವೈರಸ್‌ಗಳು ಇತರ ಸೂಕ್ಷö್ಮಜೀವಿಗಳಿಗಿಂತ ಭಿನ್ನವಾಗಿವೆ. ಬ್ಯಾಕ್ಟೀರಿಯಾ, ಸಸ್ಯ ಅಥವಾ ಪ್ರಾಣಿ ಜೀವಕೋಶದಂತಹ ಆತಿಥೇಯ ಜೀವಿಗಳಲ್ಲಿ ಮಾತ್ರ ಅವುಗಳು ಸಂತಾನೋತ್ಪತ್ತಿ ಮಾಡುತ್ತವೆ.
    7. ಔಷಧಗಳು ಮತ್ತು ಆಲ್ಕೋಹಾಲ್‌ಗಳ ವಾಣಿಜ್ಯ ಉತ್ಪಾದನೆಗೆ ಕೆಲವು ಸೂಕ್ಷö್ಮಜೀವಿಗಳು ಉಪಯುಕ್ತವಾಗಿವೆ.
    8. ಕೆಲವು ಸೂಕ್ಷ್ಮ ಜೀವಿಗಳು ಸಾವಯವ ತ್ಯಾಜ್ಯ, ಸತ್ತ ಸಸ್ಯಗಳು ಮತ್ತು ಪ್ರಾಣಿಗಳನ್ನು ಸರಳ ವಸ್ತುಗಳಾಗಿ ವಿಘಟಿಸಿ ಪರಿಸರವನ್ನು ಸ್ವಚ್ಛಗೊಳಿಸುತ್ತವೆ.
    9. ಭೇದಿ ಮತ್ತು ಮಲೇರಿಯಾಗಳಂತಹ ಗಂಭೀರ ರೋಗಗಳನ್ನು ಪ್ರೋಟೋಜೋವಾಗಳು ಉಂಟುಮಾಡುತ್ತವೆ.
    10. ನಮ್ಮ ಆಹಾರದ ಮೇಲೆ ಕೆಲವು ಸೂಕ್ಷ್ಮ ಜೀವಿಗಳು ಬೆಳೆಯುತ್ತವೆ ಮತ್ತು ಆಹಾರದಲ್ಲಿ ವಿಷವನ್ನು ಉತ್ಪತ್ತಿ ಮಾಡುತ್ತವೆ.
    11. ದ್ವಿದಳ ಸಸ್ಯಗಳ ಬೇರುಗಳ ಗಂಟುಗಳಲ್ಲಿ ಕೆಲವು ಸೂಕ್ಷ್ಮ ಜೀವಿಗಳು ವಾಸಿಸುತ್ತವೆ. ಅವುಗಳು ಗಾಳಿಯಿಂದ ನೈಟ್ರೋಜನ್‌ಅನ್ನು ಸ್ಥಿರೀಕರಿಸುತ್ತವೆ ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.
    12. ಮಣ್ಣಿನಲ್ಲಿರುವ ಕೆಲವು ಬ್ಯಾಕ್ಟೀರಿಯಾ ಮತ್ತು ನೀಲಿ ಹಸಿರು ಶೈವಲಗಳು ವಾತಾವರಣದಿಂದ ನೈಟ್ರೋಜನ್‌ಅನ್ನು ಸ್ಥಿರೀಕರಿಸಿ ನೈಟ್ರೋಜನ್ ಸಂಯುಕ್ತಗಳಾಗಿ ಪರಿವರ್ತಿಸುತ್ತವೆ.
    13. ಕೆಲವು ಸೂಕ್ಷ್ಮ ಜೀವಿಗಳು ಮಣ್ಣಿನಲ್ಲಿರುವ ನೈಟ್ರೋಜನ್ ಸಂಯುಕ್ತಗಳನ್ನು ನೈಟ್ರೋಜನ್ ಅನಿಲವಾಗಿ ಪರಿವರ್ತಿಸುತ್ತವೆ, ಇದು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.

    ಅಭ್ಯಾಸಗಳು

    ೧. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರದಿಂದ ಭರ್ತಿ ಮಾಡಿ. 


    (a)ಸೂಕ್ಷ್ಮಜೀವಿಗಳನ್ನು ------------ಸಹಾಯದಿಂದ ಕಾಣಬಹುದು.

    ಉತ್ತರ - ಸೂಕ್ಷ್ಮದರ್ಶಕ ಯಂತ್ರ - Microscope

    ಸೂಕ್ಷ್ಮದರ್ಶಕ ಯಂತ್ರ - Microscope


    (b) ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ನೀಲಿ ಹಸಿರು ಶೈವಲಗಳು ಗಾಳಿಯಿಂದ ನೇರವಾಗಿ 
    --------------- ಅನ್ನು ಸ್ಥಿರೀಕರಿಸುತ್ತವೆ.
    ಉತ್ತರ - ನೈಟ್ರೋಜನ್
    ನೀಲಿ ಹಸಿರು ಶೈವಲಗಳು


    (c) ಆಲ್ಕೋಹಾಲ್‌ಅನ್ನು --------- ಸಹಾಯದಿಂದ ಉತ್ಪಾದಿಸಲಾಗುತ್ತದೆ.

    ಉತ್ತರ - ಯೀಸ್ಟ್ - YEAST

    ಯೀಸ್ಟ್ - YEAST



    (d) ಕಾಲರಾ ರೋಗವು ------ ದಿಂದ ಉಂಟಾಗುತ್ತದೆ.
    ಉತ್ತರ - ಬ್ಯಾಕ್ಟೀರಿಯಾ  (Bacteria- Vibrio cholera)

    ಬ್ಯಾಕ್ಟೀರಿಯಾ  (Bacteria- Vibrio cholera)


    ೨. ಸರಿಯಾದ ಉತ್ತರವನ್ನು ಗುರುತಿಸಿ

    (a) ಇದರ ಉತ್ಪಾದನೆಯಲ್ಲಿ ಯೀಸ್ಟ್ಅನ್ನು ಬಳಸಲಾಗುತ್ತದೆ.
    (i) ಸಕ್ಕರೆ 
    (ii) ಆಲ್ಕೋಹಾಲ್
    (iii) ಹೈಡ್ರೋಕ್ಲೋರಿಕ್ ಆಮ್ಲ 
    (iv) ಆಮ್ಲಜನಕ
    ಉತ್ತರ - (ii) ಆಲ್ಕೋಹಾಲ್  
    ಆಲ್ಕೋಹಾಲ್
    (b) ಈ ಕೆಳಗಿನದು ಪ್ರತಿಜೈವಿಕವಾಗಿದೆ
    (i) ಸೋಡಿಯಂ ಬೈಕಾರ್ಬೋನೇಟ್
    (ii) ಸ್ಟ್ರೆಪ್ಟೋಮೈಸಿನ್
    (iii) ಆಲ್ಕೋಹಾಲ್
    (iv) ಯೀಸ್ಟ್
    ಉತ್ತರ - (ii) ಸ್ಟ್ರೆಪ್ಟೋಮೈಸಿನ್
    ಸ್ಟ್ರೆಪ್ಟೋಮೈಸಿನ್


    (c) ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ರೊಟೋಜೋವಾಗಳ ವಾಹಕ 
    ---------
    (i) ಅನಾಫಿಲೀಸ್ ಹೆಣ್ಣು ಸೊಳ್ಳೆ
     (ii) ಜಿರಳೆ 
    (iii) ನೊಣ 
    (iv) ಚಿಟ್ಟೆ
    ಉತ್ತರ - (i) ಅನಾಫಿಲೀಸ್ ಹೆಣ್ಣು ಸೊಳ್ಳೆ
    ಅನಾಫಿಲೀಸ್ ಹೆಣ್ಣು ಸೊಳ್ಳೆ


    (d) ಸಂಪರ್ಕದಿಂದ ಹರಡುವ ರೋಗಗಳ ಅತ್ಯಂತ ಸಾಮಾನ್ಯ ವಾಹಕ.
    (i) ಇರುವೆ 
    (ii) ನೊಣ
    (iii) ಡ್ರಾಗನ್ ಫ್ಲೈ 
    (iv) ಜೇಡ
    ಉತ್ತರ - (ii) ನೊಣ
    ನೊಣ


    (e) ಬ್ರೆಡ್ ಅಥವಾ ಇಡ್ಲಿಹಿಟ್ಟು ಉಬ್ಬುವುದು ಈ ಕಾರಣದಿಂದ,
    (i) ಶಾಖ
    (ii) ರುಬ್ಬುವಿಕೆ
    (iii) ಯೀಸ್ಟ್ ಕೋಶಗಳ ಬೆಳವಣಿಗೆ
    (iv) ನಾದುವುದು
    ಉತ್ತರ - ಯೀಸ್ಟ್ ಕೋಶಗಳ ಬೆಳವಣಿಗೆ
    ಯೀಸ್ಟ್ ಕೋಶಗಳ ಬೆಳವಣಿಗೆ


    (ಜಿ) ಸಕ್ಕರೆಯನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ 
    (i) ನೈಟ್ರೋಜನ್ ಸ್ಥಿರೀಕರಣ 
    (ii) ಶಿಲೀಂಧ್ರಗಳ ಬೆಳವಣಿಗೆ 
    (iii) ಹುದುಗುವಿಕೆ 
    (iv) ಸೋಂಕು
    ಉತ್ತರ - (iii) ಹುದುಗುವಿಕೆ 
    ಹುದುಗುವಿಕೆ

     ೩. ಪಟ್ಟಿಯಲ್ಲಿ ನೀಡಿರುವ ಸೂಕ್ಷ್ಮಜೀವಿಗಳನ್ನುB ಪಟ್ಟಿಯಲ್ಲಿ ಕೊಟ್ಟಿರುವ ಅವುಗಳ 
    ಕಾರ್ಯಕ್ಕನುಗುಣವಾಗಿ ಹೊಂದಿಸಿ ಬರೆಯಿರಿ.

    AB
    (i) ಬ್ಯಾಕ್ಟೀರಿಯಾ(a) ನೈಟ್ರೋಜನ್ ಸ್ಥಿರೀಕರಿಸುವುದು
    (ii) ರೈಜೋಬಿಯಂ(b) ಮೊಸರು ತಯಾರಿಸುವುದು
    (iii) ಲ್ಯಾಕ್ಟೋಬ್ಯಾಸಿಲಸ್(c) ಬ್ರೆಡ್ ತಯಾರಿಸುವುದು
    (iv) ಯೀಸ್ಟ್(d) ಮಲೇರಿಯಾಗೆ ಕಾರಣ
    (v) ಪ್ರೊಟೋಜೋವಾ(e) ಕಾಲರಾಗೆ ಕಾರಣ
    (vi) ವೈರಸ್(f) ಏಡ್ಸ್ಗೆ ಕಾರಣ
    (g) ಪ್ರತಿಜೈವಿಕಗಳ ಉತ್ಪತ್ತಿ

    ಉತ್ತರ - 
    AB
    (i) ಬ್ಯಾಕ್ಟೀರಿಯಾ(e) ಕಾಲರಾಗೆ ಕಾರಣ
    (ii) ರೈಜೋಬಿಯಂ(a) ನೈಟ್ರೋಜನ್ ಸ್ಥಿರೀಕರಿಸುವುದು
    (iii) ಲ್ಯಾಕ್ಟೋಬ್ಯಾಸಿಲಸ್(b) ಮೊಸರು ತಯಾರಿಸುವುದು
    (iv) ಯೀಸ್ಟ್(c) ಬ್ರೆಡ್ ತಯಾರಿಸುವುದು
    (v) ಪ್ರೊಟೋಜೋವಾ(d) ಮಲೇರಿಯಾಗೆ ಕಾರಣ
    (vi) ವೈರಸ್(f) ಏಡ್ಸ್ಗೆ ಕಾರಣ

    ೪. ಸೂಕ್ಷ್ಮಜೀವಿಗಳನ್ನು ಬರಿಗಣ್ಣಿನಿಂದ ನೋಡಬಹುದೇ? ಇಲ್ಲದಿದ್ದರೆ, ಅವುಗಳನ್ನು ಹೇಗೆ 
    ನೋಡಬಹುದು?

    ಉತ್ತರ - ಸೂಕ್ಷ್ಮಜೀವಿಗಳನ್ನು ಬರಿ ಕಣ್ಣಿನಿಂದ ನೋಡಲು ಸಾಧ್ಯವಾಗದಷ್ಟು ಸೂಕ್ಷ್ಮವಾದ ಜೀವಿಗಳು . ಅವುಗಳನ್ನು ನೋಡಲು ನಾವು ಸೂಕ್ಷ್ಮದರ್ಶಕವನ್ನು ಬಳಸಬೇಕು. 

    ೫. ಸೂಕ್ಷ್ಮಜೀವಿಗಳ ಪ್ರಮುಖ ಗುಂಪುಗಳು ಯಾವುವು?

    ಉತ್ತರ - ಸೂಕ್ಷ್ಮಜೀವಿಗಳ ಮುಖ್ಯ ಗುಂಪುಗಳು ಹೀಗಿವೆ-
    1. ಬ್ಯಾಕ್ಟೀರಿಯಾ, 
    2. ಶಿಲೀಂಧ್ರಗಳು, 
    3. ಪ್ರೋಟೋಜೊವಾಗಳು,  
    4. ಶೈವಲಗಳು,
    5. ವೈರಸ್‌ಗಳು. 
    ಸೂಕ್ಷ್ಮಜೀವಿಗಳ ಮುಖ್ಯ ಗುಂಪುಗಳು



    ಸೂಕ್ಷ್ಮಜೀವಿಗಳ ಪ್ರಮುಖ ಗುಂಪುಗಳು


    ೬. ಮಣ್ಣಿನಲ್ಲಿ ವಾತಾವರಣದ ನೈಟ್ರೋಜನ್‌ನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳನ್ನು ಹೆಸರಿಸಿ.

    ಉತ್ತರ - ರೈಜೋಬಿಯಂ, ನೀಲಿ ಹಸಿರು ಶೈವಲಗಳು. 
    ಮಣ್ಣಿನಲ್ಲಿ ವಾತಾವರಣದ ನೈಟ್ರೋಜನ್‌ನ್ನು ಸ್ಥಿರೀಕರಿಸುವ ಸೂಕ್ಷ್ಮಜೀವಿಗಳು-

    ೭. ನಮ್ಮ ಜೀವನದಲ್ಲಿ ಸೂಕ್ಷ್ಮಜೀವಿಗಳ ಉಪಯುಕ್ತತೆಯನ್ನು ಕುರಿತು ೧೦ ಸಾಲುಗಳನ್ನು 
    ಬರೆಯಿರಿ.

    ಉತ್ತರ - ಸೂಕ್ಷ್ಮಜೀವಿಗಳ ಉಪಯೋಗಗಳು  ಈ ಕೆಳಗಿನಂತಿವೆ- 
    • ಮೊಸರು, ಬ್ರೆಡ್ ಮತ್ತು ಕೇಕ್ ತಯಾರಿಕೆಗೆ ಸೂಕ್ಷ್ಮಜೀವಿಗಳನ್ನು ಬಳಸಲಾಗುತ್ತದೆ.ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯವು ಹಾಲಿನಲ್ಲಿ ವೃದ್ಧಿಯಾಗಿ ಅದನ್ನು ಮೊಸರಿನಾಗಿ ಪರಿವರ್ತಿಸುತ್ತದೆ. ಅಕ್ಕಿ ಇಡ್ಲಿ ಮತ್ತು ದೋಸೆ ಹಿಟ್ಟಿನ ಹುದುಗುವಿಕೆಗೆ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಕೂಡ ಸಹಕಾರಿ. 
    • ಪರಿಸರವನ್ನು ಸ್ವಚ್ಛಗೊಳಿಸಲೂ ಅವುಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಬ್ಯಾಕ್ಟೀರಿಯಾಗಳು ಸಾವಯವ ತ್ಯಾಜ್ಯಗಳನ್ನು(ತರಕಾರಿ ಸಿಪ್ಪೆಗಳು, ಪ್ರಾಣಿಗಳ ಅವಶೇಷಗಳು, ಮಲ ಇತ್ಯಾದಿ) ಹಾನಿಕರವಲ್ಲದ ಮತ್ತು ಬಳಸಬಹುದಾದ ವಸ್ತುಗಳನ್ನಾಗಿ ವಿಘಟಿಸುತ್ತವೆ. 
    • ಸೂಕ್ಷ್ಮಜೀವಿಗಳನ್ನು ದೊಡ್ಡ ಪ್ರಮಾಣದಲ್ಲಿ ಆಲ್ಕೋಹಾಲ್, ವೈನ್ ಮತ್ತು ಅಸಿಟಿಕ್ ಆಮ್ಲ ಉತ್ಪಾದಿಸಲು ಬಳಸಲಾಗುತ್ತದೆ. 
    • ಬ್ಯಾಕ್ಟೀರಿಯಾಗಳನ್ನು ಔಷಧಗಳ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಉದಾ -ಸ್ಟ್ರೆಪ್ಟೋಮೈಸಿನ್ ಪ್ರತಿಜೈವಿಕ. 
    • ರೈಜೋಬಿಯಂ, ನೀಲಿ ಹಸಿರು ಶೈವಲಗಳು  ಮಣ್ಣಿನಲ್ಲಿ ವಾತಾವರಣದ ನೈಟ್ರೋಜನ್‌ನ್ನುಸ್ಥಿರೀಕರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ಕೃಷಿಯಲ್ಲಿ ಬಳಸುವರು.

    ೮. ಸೂಕ್ಷ್ಮಜೀವಿಗಳಿಂದ ಉಂಟಾಗುವ ಹಾನಿಗಳ ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ.

    ಉತ್ತರ - ಸೂಕ್ಷ್ಮಜೀವಿಗಳು ಅನೇಕ ರೀತಿಯಲ್ಲಿ ಹಾನಿಕಾರಕಗಳಾಗಿವೆ. 
    1. ಕೆಲವು ಸೂಕ್ಷ್ಮಜೀವಿಗಳು ಮನುಷ್ಯರಲ್ಲಿ, ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ರೋಗಗಳನ್ನು ಉಂಟುಮಾಡುತ್ತವೆ. ಈ ರೀತಿಯ ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳನ್ನು ರೋಗಕಾರಕ ಜೀವಿಗಳು ಎನ್ನಲಾಗುತ್ತದೆ. ಉದಾಹರಣೆಗೆ, ಮನುಷ್ಯರಲ್ಲಿನ ಕಾಲರಾ ರೋಗವನ್ನು ವಿಬ್ರಿಯೋ ಕಾಲರಾ ಎಂಬ ಬ್ಯಾಕ್ಟೀರಿಯವು ಉಂಟುಮಾಡುತ್ತದೆ. ಪ್ರಾಣಿಗಳಲ್ಲಿ, ಫುಟ್ ಮತ್ತು ಮೌತ್ ರೋಗವನ್ನು ವೈರಸ್ ಉಂಟುಮಾಡುತ್ತದೆ. 
    2. ಕೆಲವು ಸೂಕ್ಷ್ಮಜೀವಿಗಳು ಆಹಾರ, ಬಟ್ಟೆ ಮತ್ತು ಚರ್ಮದ ವಸ್ತುಗಳನ್ನು ಹಾಳುಮಾಡುತ್ತವೆ.
    3. ಹಲವಾರು ಸೂಕ್ಷ್ಮಜೀವಿಗಳು ಗೋಧಿ, ಭತ್ತ, ಆಲೂಗಡ್ಡೆ, ಕಬ್ಬು, ಕಿತ್ತಳೆ, ಸೇಬು ಮತ್ತು ಇತರ ಸಸ್ಯಗಳಲ್ಲಿ ರೋಗಗಳನ್ನು ಉಂಟುಮಾಡುತ್ತವೆ. ರೋಗಗಳು ಬೆಳೆಗಳ ಇಳುವರಿಯನ್ನು ಕುಂಠಿತಗೊಳಿಸುತ್ತವೆ.ಉದಾಹರಣೆಗೆ- ಶಿಲೀಂಧ್ರ ಗೋಧಿಯ ತುಕ್ಕು ರೋಗ ಕ್ಕೆ ಕಾರಣವಾಗುತ್ತದೆ. 
    4. ಸೂಕ್ಷ್ಮಜೀವಿಗಳು ಆಹಾರ ವಿಷಕ್ಕೆ ಕಾರಣವೂ ಆಗಿವೆ - ನಮ್ಮ ಆಹಾರದ ಮೇಲೆ ಬೆಳೆಯುವ ಸೂಕ್ಷ್ಮಜೀವಿಗಳು ಕೆಲವೊಮ್ಮೆ ವಿಷಕಾರಿ ಪದಾರ್ಥಗಳನ್ನು ಉತ್ಪಾದಿಸುತ್ತವೆ. ಇವುಗಳು ಆಹಾರವನ್ನು ವಿಷಯುಕ್ತವಾಗಿ ಮಾಡುವುದರ ಮೂಲಕ ಗಂಭೀರವಾದ ಕಾಯಿಲೆಯನ್ನು ಹಾಗೂ ಸಾವನ್ನು ಕೂಡಾ ಉಂಟುಮಾಡುತ್ತವೆ.

    ೯. ಪ್ರತಿಜೈವಿಕಗಳು ಎಂದರೇನು? ಪ್ರತಿಜೈವಿಕಗಳನ್ನು ತೆಗೆದುಕೊಳ್ಳುವಾಗ ಯಾವ 
    ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?


    ಉತ್ತರ - ರೋಗ ಉಂಟುಮಾಡುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕೊಲ್ಲುತ್ತವೆ ಅಥವಾ ಅವುಗಳ ಬೆಳವಣಿಗೆಯನ್ನು ನಿಲ್ಲಿಸುತ್ತವ ಔಷಧಿಗಳು / ರಾಸಾಯನಿಕ ಕಾರಕಗಳನ್ನು ಪ್ರತಿಜೈವಿಕಗಳು ಎಂದು ಕರೆಯುತ್ತಾರೆ. ಪ್ರತಿಜೈವಿಕಗಳಾದ ಸ್ಟ್ರೆಪ್ಟೋಮೈಸಿನ್, ಟೆಟ್ರಾಸೈಕ್ಲಿನ್ ಮತ್ತು ಎರಿಥ್ರೋಮೈಸಿನ್‌ಗಳನ್ನು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳಿಂದ ತಯಾರಿಸಲಾಗುತ್ತದೆ. ಅರ್ಹ ವೈದ್ಯರ ಸಲಹೆಯ ಮೇರೆಗೆ ಮಾತ್ರ ಪ್ರತಿಜೈವಿಕಗಳನ್ನು ತೆಗೆದುಕೊಳ್ಳಬೇಕು ಎಂದು ನೆನಪಿಡುವುದು ಮುಖ್ಯ. ಅಲ್ಲದೆ, ನೀವು ವೈದ್ಯರು ಸೂಚಿಸಿದ ಅವಧಿಯನ್ನು ಮುಗಿಸಬೇಕು. ಅಗತ್ಯವಿಲ್ಲದಿದ್ದಾಗ ಅಥವಾ ತಪ್ಪು ಪ್ರಮಾಣದಲ್ಲಿ ಪ್ರತಿಜೈವಿಕಗಳನ್ನು ನೀವು ತೆಗೆದುಕೊಂಡರೆ, ಇದು ಭವಿಷ್ಯದಲ್ಲಿ ನಿಮಗೆ ಅಗತ್ಯವಿರುವಾಗ ಔಷಧಿಯನ್ನು ಕಡಿಮೆ ಪರಿಣಾಮಕಾರಿಯನ್ನಾಗಿ ಮಾಡಬಹುದು. ಅನಗತ್ಯವಾಗಿ ಪ್ರತಿಜೈವಿಕಗಳನ್ನು ತೆಗೆದುಕೊಂಡರೂ ಸಹ ನಮ್ಮ ದೇಹದಲ್ಲಿ ಉಪಯುಕ್ತ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದು. ಆದರೆ, ವೈರಸ್‌ಗಳಿಂದ ಉಂಟಾದ ಶೀತ ಮತ್ತು ಜ್ವರದ ವಿರುದ್ಧ ಪ್ರತಿಜೈವಿಕಗಳು ಪರಿಣಾಮಕಾರಿಯಲ್ಲ.

    ALSO READ- Class 8 Science Chapter 1 Question Answer Crop Production and Management in Kannada Medium

    Class 8 Science Chapter 2 Microorganisms Friend And Foe FAQs-👇👇

    ೧). ಪೆನ್ಸಿಲಿನ್‌ನನ್ನು ತಯಾರಿಸಲು ಬಳಸುವ ಸೂಕ್ಷ್ಮ ಜೀವಿ ಯಾವುದು?

    ೨). ಸಿಡುಬು ರೋಗಕ್ಕೆ ಲಸಿಕೆಯನ್ನು ಯಾರು ಕಂಡುಹಿಡಿದರು?

    ೩). ರೋಗಕಾರಕ ಜೀವಿಗಳು ಎಂದರೇನು?

    ೪). ಸಂಪರ್ಕದಿಂದ ಹರಡುವ ರೋಗಗಳು ಎಂದರೇನು?


    👉Class 8 Science Chapter 2 Question Answer Microorganisms Friend And Foe in Kannada Medium PDF👈



    ಈ ಒಂದು ಬ್ಲಾಗ್ ಲೇಖನದಲ್ಲಿ KTBS Solutions for Class 8 Science Chapter 2  in Kannada Medium  Microorganisms Friend And Foe ಅಧ್ಯಾಯ 2 ಸೂಕ್ಷ್ಮ ಜೀವಿಗಳು ಮಿತ್ರ ಮತ್ತು ಶತ್ರು.ದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. ದಯಮಾಡಿ ಏನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಲು ಮರೆಯದಿರಿ ಹಾಗು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.

    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.