ADS

Water A Precious Resource Class 7 Questions And Answers In Kannada Medium

water a precious Resource class 7 questions and answers in Kannada medium 7ನೇ ತರಗತಿ ವಿಜ್ಞಾನ ನೀರು: ಒಂದು ಅಮೂಲ್ಯ ಸಂಪನ್ಮೂಲ  Neeru Ondu Amulya Sampanmula.-  ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

Water A Precious Resource Class 7 Questions And Answers In Kannada Medium

ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ https://scienceteachingresourc.blogspot.com/  ಗೆ ಹೃದಯ ಪೂರ್ವಕ ಸ್ವಾಗತ,ಭೂಮಿಯ ಮೇಲ್ಮೈ ನ ಶೇ.೭೧ ರಷ್ಟು ಭಾಗವು ನೀರಿನಿಂದ ಆವೃತವಾಗಿದೆ ಎಂಬುದು ನಿಮಗೆ ನೀರು: ಅಮೂಲ್ಯ ಸಂಪನ್ಮೂಲ. ಭೂಮಿಯ ಮೇಲಿನ ಹೆಚ್ಚಿನ ಪ್ರಮಾಣದ ನೀರು ಸಾಗರ, ಸಮುದ್ರ, ನದಿ, ಕೆರೆ, ಹಿಮಾವೃತ ಪರ್ವತ, ಅಂತರ್ಜಲ ಮತ್ತು ವಾಯುಮಂಡಲದಲ್ಲಿದೆ. ಇಷ್ಟಾದರೂ ಹೆಚ್ಚಿನ ಪ್ರಮಾಣದ ನೀರು ನೇರವಾಗಿ ಮನುಷ್ಯನ ಬಳಕೆಗೆ ಯೋಗ್ಯವಾಗಿಲ್ಲ. ಬಳಕೆಗೆ ಯೋಗ್ಯವಾದ ನೀರು ಸಿಹಿನೀರು ಮಾತ್ರ. ಈ ಒಂದು ಬ್ಲಾಗ್ ಲೇಖನದಲ್ಲಿ water a precious Resource class 7 questions and answers in Kannada medium 7ನೇ ತರಗತಿ ವಿಜ್ಞಾನ ನೀರು: ಒಂದು ಅಮೂಲ್ಯ ಸಂಪನ್ಮೂಲ  Neeru Ondu Amulya Sampanmula. ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.

Water A Precious Resource- Important Points-

  1. ಎಲ್ಲ ಜೀವಿಗಳಿಗೂ ನೀರು ಅತ್ಯವಶ್ಯಕ. ನೀರಿಲ್ಲದೆ ಯಾವ ಜೀವಿಯು ಇರಲಾರದು.
  2. ನೀರು ಮೂರು ಸ್ಥಿತಿಯಲ್ಲಿ ದೊರೆಯುತ್ತದೆ : ಘನ, ದ್ರವ ಮತ್ತು ಆವಿ.
  3. ಜಲಚಕ್ರದಿಂದ ನೀರಿನ ನಿರ್ವಹಣೆಯಾಗುತ್ತಿದ್ದರೂ ಕೂಡ ಪ್ರಪಂಚದ ಹಲವಾರು ಭಾಗಗಳಲ್ಲಿ ನೀರಿನ ತೀವ್ರ ಅಭಾವವಿದೆ.
  4. ನೀರಿನ ಹಂಚಿಕೆ ಅಸಮವಾಗಿದೆ. ಇದಕ್ಕೆ ಮಾನವರ ಚಟುವಟಿಕೆಗಳೇ ಪ್ರಮುಖ ಕಾರಣ.
  5. ಕೈಗಾರಿಕೆಗಳ ಶೀಘ್ರ ಬೆಳವಣಿಗೆ, ಜನಸಂಖ್ಯಾ ಹೆಚ್ಚಳ, ನೀರಾವರಿ ಬಳಕೆಯ ಹೆಚ್ಚಳ ಮತ್ತು ನೀರಿನ ಅಸಮರ್ಪಕ ನಿರ್ವಹಣೆಯಂತಹ ಕೆಲವು ಕಾರಣಗಳು ನೀರಿನ ಕೊರತೆಯನ್ನು ಉಂಟುಮಾಡುತ್ತವೆ.
  6. ಕೊಳವೆಗಳ ಮೂಲಕ ನೀರನ್ನು ಸರಬರಾಜು ಮಾಡುವ ಸಂದರ್ಭದಲ್ಲಿ, ಕಟ್ಟಡಗಳಲ್ಲಿನ ಸೋರುವ ನಲ್ಲಿಗಳು ಮತ್ತು ಇತರೆ ಸ್ಥಳಗಳಲ್ಲಿ ನೀರು  ಪೋಲಾಗುವ ಬಗ್ಗೆ ನಾವು ಆಲೋಚಿಸಬೇಕಾದ ಅಗತ್ಯವಿದೆ.
  7. ನೀರಿನ ಅನಗತ್ಯ ಬಳಕೆ ಮತ್ತು ಅತಿಯಾಗಿ ಅಂತರ್ಜಲವನ್ನು ಹೊರ ತೆಗೆಯುವುದನ್ನು ತಪ್ಪಿಸಬೇಕು. ಭೂಮಿಯೊಳಗೆ ನೀರನ್ನು ಮರುಪೂರಣ ಮಾಡುವುದನ್ನು ಹೆಚ್ಚಿಸಬೇಕು.
  8. ಪ್ರತಿಯೊಬ್ಬರು ಅಗತ್ಯವಿರುವಷ್ಟು ನೀರನ್ನು ಮಿತವಾಗಿ ಬಳಸಬೇಕು.
  9. ಕೆಲವು ದಿನಗಳವರೆಗೆ ಸಸ್ಯಗಳಿಗೆ ನೀರು ಹಾಕದಿದ್ದಲ್ಲಿ, ಅವು ಬಾಡಿ ಹೋಗಿ ಅಂತಿಮವಾಗಿ ಒಣಗುತ್ತವೆ.

water a precious resource class 7 ಅಭ್ಯಾಸಗಳು

೧. ಹೇಳಿಕೆ ಸರಿಯಾಗಿದ್ದರೆ ಸರಿ ಮತ್ತು ತಪ್ಪಾಗಿದ್ದರೆ ತಪ್ಪು ಎಂದು ಗುರ್ತಿಸಿ.

(ಎ) ಭೂಮಿಯಲ್ಲಿ ಸಂಗ್ರಹವಾಗಿರುವ ಸಿಹಿ ನೀರು ಪ್ರಪಂಚದ ನದಿ ಮತ್ತು ಸರೋವರಗಳಲ್ಲಿರುವ ನೀರಿಗಿಂತ ಹೆಚ್ಚಾಗಿದೆ. (ಸರಿ/ತಪ್ಪು)

 ಉತ್ತರ-ಸರಿ

(ಬಿ) ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಜನರು ಮಾತ್ರ ನೀರಿನ ಕೊರತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. (ಸರಿ/ತಪ್ಪು)

 ಉತ್ತರ-ತಪ್ಪು

(ಸಿ) ಹೊಲ-ಗದ್ದೆಗಳ ನೀರಾವರಿಗೆ ನದಿಯ ನೀರೊಂದೇ ಆಕರವಾಗಿದೆ. (ಸರಿ/ತಪ್ಪು)

 ಉತ್ತರ-ತಪ್ಪು

(ಡಿ) ಮಳೆಯೇ ನೀರಿನ ಅಂತಿಮ ಆಕರ. (ಸರಿ/ತಪ್ಪು)

 ಉತ್ತರ-ತಪ್ಪು

೨. ಅಂತರ್ಜಲವು ಹೇಗೆ ಮರುಪೂರಣವಾಗುತ್ತದೆ? ವಿವರಿಸಿ.

 ಉತ್ತರ-ಮಳೆ ನೀರು ಮತ್ತು ನೀರಿನ ಇತರ ಆಕರಗಳಾದ ನದಿ ಮತ್ತು ಕೊಳಗಳಿಂದ ನೀರು ಆಳಕ್ಕೆ ಇಳಿದು ಮಣ್ಣಿನ ಮಧ್ಯೆ ಇರುವ ಖಾಲಿ ಸ್ಥಳಗಳು ಮತ್ತು ಬಿರುಕುಗಳನ್ನು ತುಂಬುತ್ತದೆ. ನೆಲದೊಳಗೆ ನೀರು ಇಂಗುವ ಪ್ರಕ್ರಿಯೆಯನ್ನು ಒಳನುಸುಳುವಿಕೆ (infiltration) ಎನ್ನುವರು. ಈ ಪ್ರಕ್ರಿಯೆಯಿಂದ ನೆಲದ ನೀರು ಮರುಪೂರಣ ಆಗುತ್ತದೆ. ಅಂತರ್ಜಲ ಮಟ್ಟದ ಕೆಳಗೆ ಗಟ್ಟಿ ಬಂಡೆಗಳ ನಡುವೆ ನೀರು ಸಂಗ್ರಹಿಸಲ್ಪಡುತ್ತದೆ. ಇದನ್ನು ಜಲಧರ (aquifer) ಎನ್ನುವರು. 

೩. ಐವತ್ತು ಮನೆಗಳಿರುವ ಒಂದು ಬೀದಿಯಲ್ಲಿ ಹತ್ತು ಕೊಳವೆ ಬಾವಿಗಳಿವೆ. ಅಂತರ್ಜಲ ಮಟ್ಟದ ಮೇಲೆ ಆಗುವ ದೀರ್ಘಕಾಲದ ಪ್ರಭಾವವೇನು?

 ಉತ್ತರ-ಐವತ್ತು ಮನೆಗಳ ಜನರು ಹತ್ತು ಕೊಳವೆ ಬಾವಿಗಳಿದ್ದರೆ ಅಂತರ್ಜಲ ಗೃಹಬಳಕೆಗೆ ಬಳಕೆಯಾಗುತ್ತದೆ. ಈ ಕೊಳವೆ ಬಾವಿಗಳನ್ನು ದೀರ್ಘಕಾಲದವರೆಗೆ ಬಳಸಿದರೆ,ಇದರಿಂದ ಅಂತರ್ಜಲ ಮಟ್ಟ ಕುಸಿದು, ನೀರಿನ ಮಟ್ಟ ಕುಸಿಯುತ್ತಿದೆ.

೪. ನಿಮಗೆ ಉದ್ಯಾನವನವೊಂದರ ನಿರ್ವಹಣೆಯನ್ನು ನೀಡಿದರೆ, ನೀರಿನ ಬಳಕೆಯನ್ನು ಹೇಗೆ ಮಿತಗೊಳಿಸುವಿರಿ?

 ಉತ್ತರ-ತೋಟಗಾರಿಕೆಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು. ಈ ವಿಧಾನದಲ್ಲಿ, ಹನಿ ಹನಿಯಾಗಿ ಸಸ್ಯದ ಬೇರುಗಳಿಗೆ ನೀರು ತಲುಪುತ್ತದೆ, ಇದು ನೀರಿನ ವ್ಯರ್ಥವನ್ನು ಕಡಿಮೆ ಮಾಡುತ್ತದೆ.

Water A Precious Resource Class 7 Questions And Answers In Kannada Medium

೫. ಅಂತರ್ಜಲ ಮಟ್ಟವು ಕುಸಿಯಲು ಕಾರಣವಾಗುವ ಅಂಶಗಳನ್ನು ವಿವರಿಸಿ.

 ಉತ್ತರ-ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುವ ಅಂಶಗಳು ಈ ಕೆಳಗಿನಂತಿವೆ:

  • ಜನಸಂಖ್ಯೆಯಲ್ಲಿ ಹೆಚ್ಚಳ: ಜನಸಂಖ್ಯೆಯ ಹೆಚ್ಚಳವು ಗೃಹಬಳಕೆ ಮತ್ತು ಕುಡಿಯುವ ಉದ್ದೇಶಗಳಿಗಾಗಿ ನೀರಿನ ಹೆಚ್ಚಿದ ಬೇಡಿಕೆಗೆ ಕಾರಣವಾಗುತ್ತದೆ. ಇದರಿಂದ ನೀರಿನ ಮಟ್ಟ ಕಡಿಮೆಯಾಗುತ್ತದೆ.
  • ಕೈಗಾರಿಕೀಕರಣ: ಕೈಗಾರಿಕೆಗಳಿಗೆ ಉತ್ಪಾದನಾ ಉದ್ದೇಶಗಳಿಗಾಗಿ ಸಾಕಷ್ಟು ನೀರು ಬೇಕಾಗುತ್ತದೆ. ಇದರಿಂದ ನೀರಿನ ಮಟ್ಟ ಕಡಿಮೆಯಾಗುತ್ತದೆ.
  • ಕೃಷಿ ಚಟುವಟಿಕೆಗಳು: ಬೆಳೆಗಳನ್ನು ಬೆಳೆಯಲು ಕೃಷಿಗೆ ಸಾಕಷ್ಟು ನೀರು ಬೇಕಾಗುತ್ತದೆ; ಇದು ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗುತ್ತದೆ.

೬. ಸೂಕ್ತ ಉತ್ತರಗಳಿಂದ ಖಾಲಿ ಜಾಗಗಳನ್ನು ಭರ್ತಿ ಮಾಡಿ.

(ಎ) ಜನರು ಅಂತರ್ಜಲವನ್ನು ________ ಮತ್ತು ________ ಮೂಲಕ ಪಡೆಯುತ್ತಾರೆ.

 ಉತ್ತರ- ಕೊಳವೆ ಭಾವಿಗಳು ಮತ್ತು ಕೈ ಪಂಪ್‌ಗಳ

Water A Precious Resource Class 7 Questions And Answers In Kannada Medium

(ಬಿ) ನೀರಿನ ಮೂರು ಸ್ಥಿತಿಗಳು _________, _________ ಮತ್ತು _________ .

 ಉತ್ತರ-ಘನ, ದ್ರವ ಮತ್ತು ಅನಿಲ .

(ಸಿ) ಭೂಮಿಯ ನೀರಿನ ಧಾರಕ ಪದರ __________. .

 ಉತ್ತರ-ಜಲಗೋಳ

(ಡಿ) ಭೂಮಿಯೊಳಗೆ ನೀರು ಇಂಗುವ ಪ್ರಕ್ರಿಯೆಯನ್ನು ________ ಎನ್ನುವರು.

 ಉತ್ತರ-ಒಳನುಸುಳುವಿಕೆ

೭. ನೀರಿನ ಕೊರತೆ ಉಂಟಾಗಲು ಕೆಳಗಿನವುಗಳಲ್ಲಿ ಯಾವುದು ಒಂದು ಕಾರಣವಲ್ಲ.

(i) ಶೀಘ್ರ ಕೈಗಾರಿಕೆಗಳ ಬೆಳವಣಿಗೆ

(ii) ಜನಸಂಖ್ಯಾ ಹೆಚ್ಚಳ

(iii)ಹೆಚ್ಚು ಮಳೆ ಬೀಳುವುದು.

(iv) ನೀರಿನ ಮೂಲಗಳ ಅಸಮರ್ಪಕ ನಿರ್ವಹಣೆ

 ಉತ್ತರ-(iii)ಹೆಚ್ಚು ಮಳೆ ಬೀಳುವುದು.

೮. ಸರಿಯಾಗಿರುವುದನ್ನು ಆಯ್ಕೆ ಮಾಡಿ. ಒಟ್ಟು ನೀರು -

(i) ಪ್ರಪಂಚದ ಸರೋವರ ಮತ್ತು ನದಿಗಳಲ್ಲಿ ಸ್ಥಿರವಾಗಿ ಉಳಿದಿದೆ.

(ii) ಭೂಮಿಯೊಳಗೆ ಸ್ಥಿರವಾಗಿ ಉಳಿದಿದೆ.

(iii)ಪ್ರಪಂಚದ ಸಮುದ್ರ ಮತ್ತು ಸಾಗರಗಳಲ್ಲಿ ಸ್ಥಿರವಾಗಿ ಉಳಿದಿದೆ

(iv) ವಿಶ್ವದಾದ್ಯಂತ ಸ್ಥಿರವಾಗಿ ಉಳಿದಿದೆ.

 ಉತ್ತರ-(iv) ವಿಶ್ವದಾದ್ಯಂತ ಸ್ಥಿರವಾಗಿ ಉಳಿದಿದೆ.

೯. ಅಂತರ್ಜಲ ಮತ್ತು ಅಂತರ್ಜಲ ಮಟ್ಟವನ್ನು ತೋರಿಸುವ ಚಿತ್ರ ಬರೆಯಿರಿ. ಭಾಗಗಳನ್ನು ಹೆಸರಿಸಿ.

 ಉತ್ತರ-

Water A Precious Resource Class 7 Questions And Answers In Kannada Medium

Water A Precious Resource Class 7 FAQs👇

ಮಳೆನೀರಿನ ಕೊಯ್ಲು ಎಂದರೇನು?

ಮಳೆನೀರನ್ನು ಅಂತರ್ಜಲ ಮರುಪೂರಣ ಮಾಡಲು ಬಳಸಲಾಗುತ್ತದೆ. ಇದನ್ನು ನೀರಿನ ಕೊಯ್ಲು ಅಥವಾ ಮಳೆನೀರಿನ ಕೊಯ್ಲು ಎನ್ನುವರು.

ನೀರು ದೊರೆಯುವ ಮೂರು ಸ್ಥಿತಿಗಳಾವುವು?

ನೀರು ಮೂರು ಸ್ಥಿತಿಯಲ್ಲಿ ದೊರೆಯುತ್ತದೆ : ಘನ, ದ್ರವ ಮತ್ತು ಆವಿ/ಅನಿಲ.

ಅಂತರ್ಜಲ ಮಟ್ಟ ಎಂದರೇನು?

ಮಣ್ಣಿನಲ್ಲಿರುವ ತೇವಾಂಶವು ಭೂಮಿಯ ಅಳದಲ್ಲಿ ನೀರಿನ ಇರುವಿಕೆಯನ್ನು ಸೂಚಿಸುತ್ತದೆ. ನಾವು ಇನ್ನೂ ಆಳಕ್ಕೆ ಕೊರೆದರೆ, ಮಣ್ಣಿನ ಕಣಗಳ ನಡುವಿನ ಸ್ಥಳಾವಕಾಶಗಳಲ್ಲಿ ಮತ್ತು ಕಲ್ಲುಗಳ ನಡುವಿನ ಅವಕಾಶವು ನೀರಿನಿಂದ ತುಂಬಿರುವ ಮಟ್ಟವನ್ನು ತಲುಪುತ್ತೇವೆ. ಈ ಪದರದ ಮೇಲಿನ ಮಟ್ಟವನ್ನು ಅಂತರ್ಜಲ ಮಟ್ಟ ಎನ್ನುವರು.

👉water a precious resource class 7 pdf👈








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.