class 7 science chapter 17 forests: our lifeline question and answer in kannada medium- 7ನೇ ತರಗತಿ ವಿಜ್ಞಾನ ಕಾಡುಗಳು: ನಮ್ಮ ಜೀವನಾಡಿ Kadugalu Namma Jeevanadi.- ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಅತ್ಯುತ್ತಮ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.
Class 7 Science Chapter 17 Question Answer Kannada.
ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏 ವಿಜ್ಞಾನ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ https://scienceteachingresourc.blogspot.com/ ಗೆ ಹೃದಯ ಪೂರ್ವಕ ಸ್ವಾಗತ, ಕಾಡುಗಳು ನಮಗೆ ಆಕ್ಸಿಜನ್ ಒದಗಿಸುತ್ತವೆ. ಅವು ಮಣ್ಣನ್ನು ರಕ್ಷಿಸುತ್ತವೆ ಮತ್ತು ಅಸಂಖ್ಯಾತ ಪ್ರಾಣಿಗಳಿಗೆ ಆವಾಸವಾಗಿವೆ. ಹತ್ತಿರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವಂತೆ ಕಾಡು ಸಹಾಯ ಮಾಡುತ್ತದೆ. ಔಷಧೀಯ ಸಸ್ಯ, ಉರುವಲು, ಮರಮುಟ್ಟು ಮತ್ತು ಇನ್ನೂ ಹಲವು ಉಪಯೋಗಿ ಉತ್ಪನ್ನಗಳ ಆಕರವಾಗಿದೆ. ನಾವು ನಮ್ಮ ಕಾಡುಗಳನ್ನು ರಕ್ಷಿಸಲೇಬೇಕು.ಭಾರತದ ಒಟ್ಟು ಭೂಮಿಯ ಮೇಲ್ಮೆöÊ ವಿಸ್ತೀರ್ಣದ ೨೧% ರಷ್ಟು ಪ್ರದೇಶವನ್ನು ಕಾಡು ಆವರಿಸಿಕೊಂಡಿದೆ. ಸ್ವಾತಂತ್ರಾö್ಯನಂತರ ಇದು ನಿರಂತರವಾಗಿ ಇಳಿಮುಖವಾಗುತ್ತಲೇ ಇದೆ. ಆದರೆ ಜನರು ಇತ್ತೀಚೆಗೆ ಕಾಡಿನ ಮಹತ್ವವನ್ನು ಅರಿತುಕೊಂಡಂತೆ ಕಂಡುಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಾಡಿನಿಂದ ಆವೃತವಾದ ಪ್ರದೇಶಗಳ ವಿಸ್ತೀರ್ಣ ಸ್ವಲ್ಪ ಹೆಚ್ಚಿರುವುದನ್ನು ವರದಿಗಳು ತಿಳಿಸುತ್ತವೆ.ಈ ಒಂದು ಬ್ಲಾಗ್ ಲೇಖನದಲ್ಲಿ class 7 science chapter 17 forests: our lifeline question and answer in kannada medium- 7ನೇ ತರಗತಿ ವಿಜ್ಞಾನ ಕಾಡುಗಳು: ನಮ್ಮ ಜೀವನಾಡಿ Kadugalu Namma Jeevanadi ಅಧ್ಯಾಯದಲ್ಲಿ ಕೇಳಲಾಗಿರುವ ಅಭ್ಯಾಸ ಪ್ರಶ್ನೆಗಳಿಗೆ ಮಾದರಿ ಉತ್ತರಗಳನ್ನು ಇಲ್ಲಿ ನೀಡಲಾಗಿದೆ.
ಇಂಪಾರ್ಟೆಂಟ್ ಪಾಯಿಂಟ್ಸ್ -[7th Standard Science Chapter 17 Notes]
ಅಭ್ಯಾಸಗಳು [NCERT Solutions Class 7 Science Chapter 17 Forests: Our Lifeline]
೧. ಕಾಡು ಬೆಳೆಯಲು ಮತ್ತು ಪುನರುತ್ಪತ್ತಿಯಾಗಲು ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ವಿವರಿಸಿ.
ಉತ್ತರ-
- ಸಸ್ಯ ಬೀಜಗಳನ್ನು ದೂರ ದೂರಕ್ಕೆ ಹರಡಲು/ಚದುರಿಸಲು ಪ್ರಾಣಿಗಳು ಸಹಾಯ ಮಾಡುತ್ತವೆ.
- ಕೊಳೆಯುತ್ತಿರುವ ಹಿಕ್ಕೆಯು (ಪ್ರಾಣಿಗಳ ಸಗಣಿ) ಮೊಳಕೆಯೊಡೆದ ಬೀಜಗಳಿಗೆ ಸಸ್ಯಗಳು ಬೆಳೆಯಲು ಪೋಷಕಾಂಶಗಳನ್ನು ಒದಗಿಸುತ್ತದೆ
- ಸೂಕ್ಷ್ಮಜೀವಿಗಳು ಸತ್ತ ಸಸ್ಯಗಳು ಮತ್ತು ಪ್ರಾಣಿಗಳನ್ನು ಹ್ಯೂಮಸ್ ಆಗಿ ಪರಿವರ್ತಿಸುತ್ತವೆ
೨. ಕಾಡುಗಳು ಪ್ರವಾಹವನ್ನು ಹೇಗೆ ತಡೆಗಟ್ಟುತ್ತವೆ ಎಂಬುದನ್ನು ವಿವರಿಸಿ.
ಉತ್ತರ-
ಮಳೆನೀರಿಗೆ ಕಾಡು ನೈಸರ್ಗಿಕ ಹೀರಿಕೆ ಮಾಧ್ಯಮವಾಗಿ ವರ್ತಿಸಿಸುತ್ತದೆ.ಮಳೆನೀರು ಇಂಗಲು ಅನುವು ಮಾಡಿಕೊಡುತ್ತದೆ. ಮಳೆನೀರು ನೇರವಾಗಿ ನೆಲಕ್ಕೆ ಸುರಿದು ಸುತ್ತಮುತ್ತ ಪ್ರವಾಹ ಉಂಟಾಗುತ್ತಿತ್ತು. ಮರಗಳು ಇರುವುದರಿಂದ ಮಳೆ ನೀರು ನೇರವಾಗಿ ನೆಲಕ್ಕೆ ಬಡಿಯುವುದಿಲ್ಲ. ಅದು ನಿಧಾನವಾಗಿ ನೆಲಕ್ಕೆ ಬಡಿಯುತ್ತದೆ. ಮರಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ಮಣ್ಣು ಸುಲಭವಾಗಿ ಕೊಚ್ಚಿ ಹೋಗುವುದಿಲ್ಲ. ಈ ರೀತಿಯಾಗಿ, ಕಾಡುಗಳು ಪ್ರವಾಹವನ್ನು ತಡೆಯುತ್ತವೆ.
೩. ವಿಘಟಕಗಳೆಂದರೇನು? ಅವುಗಳಲ್ಲಿ ಯಾವುದಾದರೂ ಎರಡನ್ನು ಹೆಸರಿಸಿ. ಕಾಡಿನಲ್ಲಿ ಅವು ಏನು ಮಾಡುತ್ತವೆ?
ಉತ್ತರ-ಸತ್ತ ಸಸ್ಯಗಳು ಮತ್ತು ಪ್ರಾಣಿಗಳನ್ನು ಹ್ಯೂಮಸ್ ಆಗಿ ಪರಿವರ್ತಿಸುವ ಸೂಕ್ಷ್ಮ ಜೀವಿಗಳನ್ನು ವಿಘಟಕಗಳು (decomposers) ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು. ಸತ್ತ ಸಸ್ಯಗಳು ಮತ್ತು ಪ್ರಾಣಿಗಳನ್ನು ಕೊಳೆಯಿಸುವ ಮೂಲಕ ಪೋಷಕಾಂಶಗಳ ಮರುಬಳಕೆಯಲ್ಲಿ ಅವು ಸಹಾಯ ಮಾಡುತ್ತವೆ.
೪. ವಾತಾವರಣದಲ್ಲಿ ಆಕ್ಸಿಜನ್ ಮತ್ತು ಕಾರ್ಬನ್-ಡೈ-ಆಕ್ಸೈಡ್ ನ ಸಮತೋಲನ ಕಾಯುವಲ್ಲಿ ಕಾಡಿನ ಪಾತ್ರವನ್ನು ವಿವರಿಸಿ.
ಉತ್ತರ-ಸಸ್ಯಗಳು ದ್ಯುತಿಸಂಶ್ಲೇಷಣ ಪ್ರಕ್ರಿಯೆಯ ಮೂಲಕ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಸಸ್ಯಗಳು ಪ್ರಾಣಿಗಳ ಉಸಿರಾಟಕ್ಕೆ ಆಮ್ಲಜನಕವನ್ನು ಒದಗಿಸಲು ನೆರವಾಗುತ್ತವೆ. ಪ್ರಾಣಿಗಳು ಬಿಡುಗಡೆ ಮಾಡುವ ಇಂಗಾಲದ ಡೈಆಕ್ಟ್ಡ್ ಅನ್ನು ಸಸ್ಯಗಳು ಆಹಾರ ತಯಾರಿಕೆಗೆ ಬಳಸಿಕೊಳ್ಳುತ್ತವೆ.ಇದು ವಾತಾವರಣದಲ್ಲಿ ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೆಡ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಸ್ಯಗಳು ಸಹಾಯ ಮಾಡುತ್ತವೆ.
೫. ಕಾಡಿನಲ್ಲಿ ಯಾವುದೂ ವ್ಯರ್ಥವಲ್ಲ. ಏಕೆ? ವಿವರಿಸಿ.
ಉತ್ತರ-ಕಾಡಿನಲ್ಲಿ ಯಾವುದೇ ತ್ಯಾಜ್ಯವಿಲ್ಲ, ಏಕೆಂದರೆ ಉತ್ಪತ್ತಿಯಾದ ತ್ಯಾಜ್ಯ ಜೈವಿಕ ವಿಘಟನೀಯವಾಗಿದೆ, ಇದು ಸೂಕ್ಷ್ಮಜೀವಿಗಳ ಕ್ರಿಯೆಯಿಂದ ಹ್ಯೂಮಸ್ ಆಗಿ ಪರಿವರ್ತನೆಗೊಳ್ಳುತ್ತದೆ.ಸತ್ತ ಪ್ರಾಣಿಯು ರಣಹದ್ದು, ಕಾಗೆ, ನರಿ ಮತ್ತು ಕೀಟಗಳಿಗೆ ಆಹಾರವಾಗುವುದು” ಎಂದು ಟಿಬು ಉತ್ತರಿಸಿದನು. ಈ ರೀತಿಯಲ್ಲಿ ಪೋ ಷಕಗಳು ಚಕ್ರೀಯವಾಗಿ ಬಳಕೆಯಾಗುತ್ತವೆ. ಆದ್ದರಿಂದ ಕಾಡಿನಲ್ಲಿ ಯಾವುದೂ ವ್ಯರ್ಥವಾಗುವುದಿಲ್ಲ
೬. ಕಾಡಿನಿಂದ ದೊರಕುವ ಐದು ಉತ್ಪನ್ನಗಳನ್ನು ಹೆಸರಿಸಿ.
ಉತ್ತರ-
i) ಔಷಧಿಗಳು
ii) ಮಸಾಲೆಗಳು
iii) ಮರ
iv)ಕಾಗದ
v) ಅಂಟು
೭. ಬಿಟ್ಟ ಸ್ಥಳ ತುಂಬಿ :
(ಎ) ಕೀಟಗಳು, ಚಿಟ್ಟೆಗಳು, ಜೇನುನೊಣಗಳು ಮತ್ತು ಪಕ್ಷಿಗಳು ಹೂಬಿಡುವ ಸಸ್ಯಗಳ ___________ ಗೆ ಸಹಾಯ ಮಾಡುತ್ತವೆ.
ಉತ್ತರ-ಪರಾಗಸ್ಪರ್ಶ ಕ್ರಿಯೆ
(ಬಿ) ಕಾಡು __________ ಮತ್ತು ________ ಗಳನ್ನು ಶುದ್ಧೀಕರಿಸುತ್ತದೆ.
ಉತ್ತರ-ನೀರು ಮತ್ತು ಗಾಳಿ
(ಸಿ) ಮೂಲಿಕೆಗಳು ಕಾಡಿನಲ್ಲಿ ____________ ಸ್ತರವನ್ನು ಪ್ರತಿನಿಧಿಸುತ್ತವೆ.
ಉತ್ತರ-ಕೆಳ
(ಡಿ) ಕೊಳೆಯುತ್ತಿರುವ ಎಲೆಗಳು ಮತ್ತು ಪ್ರಾಣಿಗಳ ಹಿಕ್ಕೆಗಳು ಕಾಡಿನಲ್ಲಿ __________ನ್ನು ಸಮೃದ್ಧಿಗೊಳಿಸುತ್ತವೆ.
ಉತ್ತರ-ಮಣ್ಣ
೮. ನಮ್ಮಿಂದ ದೂರದಲ್ಲಿರುವ ಕಾಡಿಗೆ ಸಂಬಂಧಪಟ್ಟ ಪರಿಸ್ಥಿತಿ ಮತ್ತು ಅವುಗಳ ಸಮಸ್ಯೆಗಳ ಬಗ್ಗೆ ನಾವು ಏಕೆ ಚಿಂತಿಸಬೇಕು?
ಉತ್ತರ-
ಕೆಳಗಿನ ಕಾರಣಗಳಿಗಾಗಿ ನಾವು ಕಾಡಿನ ಬಗ್ಗೆ ಚಿಂತಿಸಬೇಕಾಗಿದೆ:
- ಕಾಡುಗಳ ಇಳಿಕೆ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ಅಂಶದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ಜಾಗತಿಕ ತಾಪಮಾನಕ್ಕೆ (ಭೂಮಿಯ ಉಷ್ಣತೆಯ ಹೆಚ್ಚಳ)ಕಾರಣವಾಗುತ್ತದೆ.
- ಅರಣ್ಯಗಳ ಸವಕಳಿಯು ಮಣ್ಣಿನ ಸವಕಳಿಗೆ ಕಾರಣವಾಗುತ್ತದೆ
- ಕಾಡುಗಳ ಇಳಿಕೆ ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
- ಕಾಡುಗಳ ಅನುಪಸ್ಥಿತಿಯು ಹೆಚ್ಚಾಗಿ ಪ್ರವಾಹಕ್ಕೆ ಕಾರಣವಾಗುತ್ತದೆ.
- ಕಾಡುಗಳ ಕಡಿತದಿಂದಾಗಿ, ಭೂಮಿ ಬಂಜರು ಆಗುತ್ತದೆ, ಇದನ್ನು ಮರುಭೂಮಿ ಎಂದು ಕರೆಯಲಾಗುತ್ತದೆ.
೯. ಕಾಡಿನಲ್ಲಿ ಪ್ರಾಣಿ ಮತ್ತು ಸಸ್ಯಗಳ ವೈವಿಧ್ಯತೆಯ ಅವಶ್ಯಕತೆ ಇದೆ. ಏಕೆ?
ಉತ್ತರ-ಹಲವಾರು ವಿಧದ ಸಸ್ಯಗಳು ಬೆಳೆಯಲು ಅನುಕೂಲ ಮಾಡಿಕೊಡುವ ಮೂಲಕ ಸಸ್ಯಾಹಾರಿಗಳಿಗೆ ಹೆಚ್ಚಿನ ಆಹಾರ ಹಾಗೂ ಆವಾಸದ ಅವಕಾಶವನ್ನು ಕಾಡು ಒದಗಿಸುತ್ತದೆ. ಹೆಚ್ಚಿನ ಸಂಖ್ಯೆಯ ಸಸ್ಯಾಹಾರಿಗಳು ಇರುವುದು ಎಂದರೆ, ವಿವಿಧ ರೀತಿಯ ಮಾಂಸಾಹಾರಿಗಳಿಗೆ ಆಹಾರದ ಲಭ್ಯತೆ ಹೆಚ್ಚುವುದು ಎಂದರ್ಥ.ವಿಶಾಲವಾದ ಕಾಡು ಪುನರುತ್ಪತ್ತಿಯಾಗಲು ಮತ್ತು ಬೆಳೆಯಲು ಪ್ರಾಣಿ ವೈವಿಧ್ಯವು ಸಹಾಯ ಮಾಡುತ್ತದೆ. ವಿಘಟಕಗಳು ಕಾಡಿನಲ್ಲಿ ಬೆಳೆಯುವ ಸಸ್ಯಗಳಿಗೆ ಪೋಷಕಗಳನ್ನು ಒದಗಿಸಲು ಸಹಾಯ ಮಾಡುತ್ತವೆ.
೧೦. ಚಿತ್ರ ೧೭.೧೫ ರಲ್ಲಿ ಭಾಗಗಳನ್ನು ಗುರುತಿಸಲು ಮತ್ತು ಬಾಣದ ಗುರುತಿನ ದಿಕ್ಕು ತೋರಿಸಲು ಚಿತ್ರಕಾರನು ಮರೆತಿದ್ದಾನೆ. ಬಾಣದ ಗುರುತಿಗೆ ಸರಿಯಾದ ದಿಕ್ಕು ತೋರಿಸಿ ಮತ್ತು ಕೆಳಗಿನ ಅಂಶಗಳನ್ನು ಉಪಯೋಗಿಸಿಕೊಂಡು ಚಿತ್ರದ ಭಾಗಗಳನ್ನು ಗುರ್ತಿಸಿ.
- ಮೋಡಗಳು.
- ಮಳೆ.
- ವಾತಾವರಣ.
- ಇಂಗಾಲದ ಡೈಆಕ್ಸೈಡ್.
- ಆಕ್ಸಿಜನ್.
- ಗಿಡಗಳು.
- ಪ್ರಾಣಿಗಳು.
- ಮಣ್ಣು.
- ಬೇರುಗಳು.
- ಅಂತರ್ಜಲ ಮಟ್ಟ.
೧೧. ಈ ಕೆಳಗಿನವುಗಳಲ್ಲಿ ಯಾವುದು ಕಾಡಿನ ಉತ್ಪನ್ನವಲ್ಲ?
(i) ಅಂಟು
(ii) ಹಲಗೆ
(iii) ಅರಗು
(iv) ಸೀಮೆಎಣ್ಣೆ
ಉತ್ತರ-(iv) ಸೀಮೆಎಣ್ಣೆ
೧೨. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ.
(i) ಕಾಡುಗಳು ಮಣ್ಣನ್ನು ಸವೆತದಿಂದ ರಕ್ಷಿಸುತ್ತವೆ.
(ii) ಕಾಡಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳು ಪರಸ್ಪರ ಅವಲಂಬಿತವಾಗಿಲ್ಲ.
(iii) ವಾಯುಗುಣ ಮತ್ತು ಜಲಚಕ್ರಗಳ ಮೇಲೆ ಕಾಡು ಪ್ರಭಾವ ಬೀರುತ್ತದೆ.
(iv) ಕಾಡು ಬೆಳೆಯಲು ಮತ್ತು ಪುನರುತ್ಪತ್ತಿಯಾಗಲು ಮಣ್ಣು ಸಹಾಯ ಮಾಡುತ್ತದೆ.
ಉತ್ತರ-(ii) ಕಾಡಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳು ಪರಸ್ಪರ ಅವಲಂಬಿತವಾಗಿಲ್ಲ.
೧೩. ಸತ್ತ ಸಸ್ಯಗಳ ಮೇಲೆ ಸೂಕ್ಷ್ಮ ಜೀವಿಗಳು ವರ್ತಿಸಿ ಇದನ್ನು ಉತ್ಪತ್ತಿ ಮಾಡುತ್ತವೆ.
(i) ಮರಳು
(ii) ಅಣಬೆ
(iii) ಹ್ಯೂಮಸ್
(iv) ಉರುವಲು
ಉತ್ತರ-(iii) ಹ್ಯೂಮಸ್
FAQs InClass 7 Science Chapter 17 Forests: Our Lifeline.
ಕಾಡು ಎಂದರೇನು?
ಕಾಡು ಎನ್ನುವುದು ಮರಗಿಡಗಳು, ಪ್ರಾಣಿಗಳು ಮತ್ತು ಸೂಕ್ಷ್ಮ ಜೀವಿಗಳನ್ನೊಳಗೊಂಡ ಒಂದು ವ್ಯವಸ್ಥೆಯಾಗಿದೆ. .
ಕಾಡುಗಳನ್ನು ಏಕೆ ಹಸಿರು ಶ್ವಾಸಕೋಶಗಳೆನ್ನುವರು?
ಸಸ್ಯಗಳು ದ್ಯುತಿಸಂಶ್ಲೇಷಣ ಪ್ರಕ್ರಿಯೆಯ ಮೂಲಕ ಆಕ್ಸಿಜನ್‌ಅನ್ನು ಬಿಡುಗಡೆ ಮಾಡುತ್ತವೆ. ಸಸ್ಯಗಳು ಪ್ರಾಣಿಗಳ ಉಸಿರಾಟಕ್ಕೆ ಆಕ್ಸಿಜನ್ ಒದಗಿಸಲು ನೆರವಾಗುತ್ತವೆ. ಅವು ವಾತಾವರಣದಲ್ಲಿ ಆಕ್ಸಿಜನ್ ಮತ್ತು ಕಾರ್ಬನ್ ಡೈಆಕ್ಸೆöÊಡ್‌ನ ಸಮತೋಲನ ಕಾಪಾಡುತ್ತವೆ ಅದಕ್ಕಾಗಿಯೇ ಕಾಡುಗಳನ್ನು ಶ್ವಾಸಕೋಶಗಳು ಎಂದು ಕರೆಯಲಾಗುತ್ತದೆ.
ವೃಕ್ಷಕಿರೀಟ (crown of the tree) ಎಂದರೇನು?
ಮರದ ಕಾಂಡದ ಮೇಲಿನ ಕವಲೊಡೆದ ಭಾಗವನ್ನು ವೃಕ್ಷಕಿರೀಟ (crown of the tree) ಎನ್ನುವರು.
If you have any doubts please comment