Fractions notes basics in kannada
ಹಾಯ್, ಹಲೋ, ಸ್ನೇಹಿತರೇ- ನಿಮಗೆ ನಮಗೆ ಎಲ್ಲರಿಗೂ ತಿಳಿದಿರುವ ಹಾಗೆ ಗಣಿತ ಕಲಿಕೆ ಇಂದಿನ ಮಕ್ಕಳಿಗೆ, ಅಷ್ಟೇನೂ ಆಸಕ್ತಿಯ ವಿಷಯವಾಗಿ ಪರಿಣಮಿಸುತ್ತಿಲ್ಲ, ಹಾಗೆಯೇ ಶಾಲೆಯಲ್ಲಿ ಕಲಿಸುವ ಶಿಕ್ಷಕರು ಗಣಿತ ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಲು ಸ್ವಲ್ಪಮಟ್ಟಿಗೆ ಕಷ್ಟದ ಕೆಲಸ ವಾಗಿ ಪರಿಣಮಿಸಿತ್ತಿದೆ ಹಾಗಾಗಿ ಗಣಿತ ಕಲಿಕೆಯಲ್ಲಿ ಮೊದಲಿಗೆ ಕಲಿಸುವವರಿಗೆ ಗಣಿತ ಶಾಸ್ತ್ರದ ಅತೀ ಪ್ರಮುಖ ವಿಷಯಗಳ ಮೂಲ ಜ್ಞಾನದ / ಪರಿಕಲ್ಪನೆಗಳ ಸ್ಪಷ್ಟತೆಯ ಅಗತ್ಯತೆ ಇರಬೇಕು. ಹಾಗಾಗಿ ಗಣಿತದ ಪ್ರಮುಖ ಪರಿಕಲ್ಪನೆಗಳ ಸುಲಭವಾದ ಮಾಹಿತಿಯನ್ನು ಕನ್ನಡದಲ್ಲಿ ಕೊಡುವ ಪ್ರಯತ್ನ, ಗಣಿತ ಕಲಿಕೆ ಸುಲಭ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ನಿಮಗಾಗಿ, Fractions notes basics in kannada ನನ್ನ ಪುಟ್ಟ ಪ್ರಯತ್ನ ನಿಮ್ಮ ಎಲ್ಲರ ಸಹಕಾರ ಕೋರುತ್ತಾ , ಈ ಟಿಪ್ಪಣಿಗಳು ಕೇವಲಶಿಕ್ಷಕರಿಗೆ ಮಾತ್ರ ಎಂದು ಭಾವಿಸದೆ ಮಕ್ಕಳೂ ಸಹಾ ಇದರ ಉಪಯೋಗ ಹೆಚ್ಚು ಪಡೆಯಲಿ ಎಂಬುದು ನನ್ನಾಶಯ, ನಮ್ಮ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಗಣಿತ ವಿಷಯದ ಪರಿಣತಿ ಅಗತ್ಯವಿದೆ. ಹಾಗಾಗಿ ಈ ನೋಟ್ಸ್ ಆ ಮಕ್ಕಳಿಗೆ ಸಹಕಾರಿ.
Read more https://scienceteachingresourc.blogspot.com/2022/10/7th-standard-maths-notes-kannadas%20.html
ಭಿನ್ನರಾಶಿಗಳು/ Fractions
ಈ ನೋಟ್ಸ್ ನಲ್ಲಿ ಪ್ರಮುಖವಾಗಿ ನೀಡಿರುವ ಭಿನ್ನರಾಶಿಗಳ ಪರಿಕಲ್ಪನೆಗಳು.
- ಭಿನ್ನರಾಶಿಗಳ ಅರ್ಥ ತಿಳಿಯುವಿರಿ.
- ಭಿನ್ನರಾಶಿಗಳ ವಿಧಗಳನ್ನು ವರ್ಗೀಕರಿಸುವುದು.
ಭಿನ್ನರಾಶಿಗಳ ಅರ್ಥ.
ನಮ್ಮ ದೈನಂದಿನ ವ್ಯವಹಾರದಲ್ಲಿ ನಾವು ಅರ್ಧ,ಕಾಲು,ಮುಕ್ಕಾಲು ಈ ತರಹದ ಬೇರೆ ಬೇರೆ ಪರಿಮಾಣಗಳನ್ನು ಬಳಸುವುದು ನಮಗೆ ನಿಮಗೆ ತಿಳಿದಿದೆ.ಈ ರೀತಿ ಭಿನ್ನ ಪರಿಮಾಣಗಳನ್ನು /ಭಿನ್ನರಾಶಿಗಳನ್ನು ಅಂಕೆಗಳಲ್ಲಿ ಬರೆಯುವ ಓದುವ ವಿಧಾನಗಳನ್ನು ನಾವು ಇಲ್ಲಿ ತಿಳಿಯುತ್ತ ಹೋಗೋಣ.
ಈ ಕೆಳಗಿನ ಚಿತ್ರಗಳಲ್ಲಿ ಛಾಯೀಕರಿಸಿರುವ ಭಾಗವನ್ನು ಸೂಚಿಸುವ ಭಿನ್ನರಾಶಿಗಳನ್ನು ಗಮನಿಸಿ.
ಮೊದಲ ಚಿತ್ರದಲ್ಲಿ 4 ಭಾಗಗಳಲ್ಲಿ ಒಂದು ಭಾಗಕ್ಕೆ ಬಣ್ಣ ಹಚ್ಚಲಾಗಿದೆ,
ಎರಡನೇ ಚಿತ್ರದಲ್ಲಿ ಎರಡು ಭಾಗಗಳಲ್ಲಿ ಒಂದು ಭಾಗಕ್ಕೆ ಬಣ್ಣ ಹಚ್ಚಲಾಗಿದೆ,
ಮೂರನೇ ಚಿತ್ರದಲ್ಲಿ ಎಂಟು ಭಾಗಗಳಿಗೆ ಬಣ್ಣ ಹಚ್ಚಲಾಗಿದೆ,
ನಾಲ್ಕನೇ ಚಿತ್ರದಲ್ಲಿ ಮೂರು ಭಾಗಗಳಲ್ಲಿ ಎರಡು ಭಾಗಗಳಿಗೆ ಛಾಯಿಕರಿಸಲಾಗಿದೆ,
ಐದನೇ ಚಿತ್ರದಲ್ಲಿ ಮೂರು ಭಾಗಗಳಲ್ಲಿ ಎರಡು ಭಾಗಗಳಿಗೆ ಛಾಯಿಕರಿಸಲಾಗಿದೆ,
ಹೀಗೆ ಪ್ರತಿ ಚಿತ್ರದಲ್ಲಿ ಒಂದು ವಸ್ತು ಅಥವಾ ಒಂದು ಗುಂಪಿನಲ್ಲಿ ಮಾಡಿದ ಸಮಭಾಗಗಳಲ್ಲಿ ಆಯ್ದುಕೊಂಡ ಅಥವಾ ಬಣ್ಣವನ್ನು ಹಾಕಿದ, ಸಮ ಭಾಗಗಳನ್ನು ಗಮನಿಸಿದಾಗ -
ಒಂದು ವಸ್ತುವಿನ ಅಥವಾ ಒಂದು ಗುಂಪಿನ ಸಮಭಾಗಗಳಲ್ಲಿ ಆಯ್ದುಕೊಂಡ ಭಾಗವನ್ನು ಭಿನ್ನರಾಶಿ ಎನ್ನುತ್ತೇವೆ.
ಭಿನ್ನರಾಶಿಯು ಪೂರ್ಣದ ಒಂದು ಭಾಗವಾಗಿದೆ.
ಭಿನ್ನರಾಶಿ ಸಂಖ್ಯೆಯು ಎರಡು ಭಾಗಗಳನ್ನು ಹೊಂದಿದೆ.?
ಉದಾಹರಣೆಗೆ-
ಚಿತ್ರದಲ್ಲಿ ಎಂಟನೇ ಮೂರುಭಿನ್ನರಾಶಿಗಳ ವಿಧಗಳನ್ನು ವರ್ಗೀಕರಿಸುವುದು.
- ಸಮ ಭಿನ್ನರಾಶಿ
- ವಿಷಮ ಭಿನ್ನರಾಶಿ
- ಮಿಶ್ರ ಭಿನ್ನರಾಶಿ.
ಈ ಕೆಳಗಿನ ಚಿತ್ರಗಳಲ್ಲಿ ಬಣ್ಣ ಹಾಕಿರುವ ಭಾಗಗಳನ್ನು ಗಮನಿಸಿ - ಬಣ್ಣ ಹಾಕಿರುವ ಭಾಗವು ಒಂದು ಪೂರ್ಣಕ್ಕಿಂತ ದೊಡ್ಡದಾಗಿದೆಯೇ?
ಈ ಎಲ್ಲ ಭಿನ್ನರಾಶಿಗಳು 1 ಪೂರ್ಣಕ್ಕಿಂತ ಕಡಿಮೆ ಇವೆ. 1/4 , 2/6, 4/7 ಮತ್ತು 4/8 ರಲ್ಲಿನ ಅಂಶ ಮತ್ತು ಛೇದಗಳನ್ನು ಗಮನಿಸಿದಾಗ ಅಂಶವು ಛೇದಕ್ಕಿಂತ ಚಿಕ್ಕದಾಗಿದೆ.
1/4 ಮತ್ತು 4/7 ಗಳು 1ಕ್ಕಿಂತ ಕಡಿಮೆ ಇದೆ. ಇಂತಹ ಭಿನ್ನರಾಶಿಗಳನ್ನು ಸಮ ಭಿನ್ನರಾಶಿಗಳು ಎನ್ನುತ್ತೇವೆ.
ನೆನಪಿಡಿ:- ಭಿನ್ನರಾಶಿಯು ೧ಕ್ಕಿಂತ ಕಡಿಮೆಯಿದ್ದರೆ ಅದನ್ನು ಸಮ ಭಿನ್ನರಾಶಿ ಎನ್ನುತ್ತೇವೆ.
ಸಮ ಭಿನ್ನರಾಅಂಶವು ಛೇದಕ್ಕಿಂತ ಚಿಕ್ಕದಾಗಿರುತ್ತದೆ. ಉದಾಹರಣೆ - 3/5, 2/3, 7/10, 5/12, 4/9.
ವಿಷಮ ಭಿನ್ನರಾಶಿ
If you have any doubts please comment