Aditya L1 MCQs in Kannada.
Aditya L1 (ಆದಿತ್ಯ L1) ಮೊದಲ ಬಾಹ್ಯಾಕಾಶ ಆಧಾರಿತವಾಗಿರುವ ಭಾರತೀಯ ಸೌರ ವೀಕ್ಷಣಾಲಯವಾಗಿದೆ. ಸೂರ್ಯನನ್ನು ಅಧ್ಯಯನ ಮಾಡುವ ಮಿಷನ್ ಇದಾಗಿದೆ. ಈ ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ಸುತ್ತಲೂ ಹಾಲೋ ಕಕ್ಷೆಯಲ್ಲಿ ಲಗ್ರಾಂಜಿಯನ್ ಪಾಯಿಂಟ್ 1 (L1) ನಲ್ಲಿ ಇರಿಸಲಾಗಿದೆ. ಉಪಗ್ರಹವನ್ನು ಸುಮಾರು ಭೂಮಿಯಿಂದ 1.5 ಮಿಲಿಯನ್ ಕಿ.ಮೀ.ಹಾಲೋ ಕಕ್ಷೆಯಲ್ಲಿ ಇರಿಸಲಾಗಿದೆ. ಈ ಒಂದು L1 ಪಾಯಿಂಟ್ ನಿಂದ ಸೂರ್ಯನನ್ನು ನಿರಂತರ ಯಾವುದೇ ರೀತಿಯ ಅಡೆ ತಡೆ ಇಲ್ಲದೇ ಅವನಲ್ಲಿ ಆಗುವ ಸೌರಚಟುವಟಿಕೆಗಳ ಬಗ್ಗೆ ವೀಕ್ಷಿಸಲು ಮಾಹಿತಿಯನ್ನು ಪಡೆಯಲು ಸಾಧ್ಯ.ಆದಿತ್ಯ-L1 ಬಾಹ್ಯಾಕಾಶ ನೌಕೆಯು ಏಳು ಪೇಲೋಡ್‌ಗಳನ್ನು ಒಯ್ಯುತ್ತದೆ. ವಿದ್ಯುತ್ಕಾಂತೀಯ ಮತ್ತು ಕಣಪತ್ತೆಕಾರಕಗಳನ್ನು ಬಳಸಿ ಸೂರ್ಯನ ದ್ಯುತಿಗೋಳ,ವರ್ಣಗೋಳ, ಮತ್ತು ಹೊರಭಾಗಸೂರ್ಯನ ಪದರಗಳು (ಕರೋನಾ) ವನ್ನು ವೀಕ್ಷಿಸಲು ನೆರವಾಗುತ್ತದೆ. ಈ ಒಂದು ಲೇಖನದಲ್ಲಿ Aditya L1MCQs in Kannada ಗಳನ್ನು ನೀಡಲಾಗಿದೆ ಇವು ನಿಮ್ಮ ವಿವಿಧ ಸ್ಪರ್ದಾತ್ಮಕ ಪರೀಕ್ಷಾ ತಯಾರಿಯಲ್ಲಿ ನೆರವಾಗುತ್ತದೆ ಎಂಬುದು ನಮ್ಮ ಆಶಯ.
೧. ನಮ್ಮ ಭೂಮಿಗೆ ಹತ್ತಿರದ ನಕ್ಷತ್ರ _________
ಎ. ಆಲ್ಫಾ ಸೆಂಟೌರಿ
ಬಿ. ಸೂರ್ಯ
ಸಿ. ಸಿರಿಯಸ್
ಡಿ. ಪೋಲಾರಿಸ್
ಉತ್ತರ- ಬಿ. ಸೂರ್ಯ
೨. ಸೌರವ್ಯೂಹದ ಅತಿದೊಡ್ಡ ವಸ್ತು/ ಆಕಾಶಕಾಯ ___________
ಎ. ಗುರು ಗ್ರಹ
ಬಿ. ಸೂರ್ಯ
ಸಿ. ಧೂಮಕೇತು
ಡಿ. ಕ್ಷುದ್ರ ಗ್ರಹಗಳು
ಉತ್ತರ- ಬಿ. ಸೂರ್ಯ
೩. ಸೂರ್ಯನ ಅಂದಾಜು ವಯಸ್ಸು ಸುಮಾರು ___________ ವರ್ಷಗಳು.
ಎ. 4.5 ಶತಕೋಟಿ
ಬಿ. 4.3 ಶತಕೋಟಿ
ಸಿ. 4 ಶತಕೋಟಿ
ಡಿ. 5.5 ಶತಕೋಟಿ
ಉತ್ತರ- ಎ. 4.5 ಶತಕೋಟಿ
೪. ಸೂರ್ಯನು ___________ ಮತ್ತು ________ ಅನಿಲಗಳ ಬಿಸಿ ಹೊಳೆಯುವ ಚೆಂಡಾಗಿದೆ.
ಎ. ಜಲಜನಕ ಮತ್ತು ಹೀಲಿಯಂ
ಬಿ. ಆಮ್ಲಜನಕ ಮತ್ತು ಕಾರ್ಬನ್
ಸಿ. ನೈಟ್ರೋಜೆನ್ ಮತ್ತು ಕಾರ್ಬನ್
ಡಿ. ಹೀಲಿಯಂ ಮತ್ತು ಸೋಡಿಯಂ
ಉತ್ತರ- ಎ.ಜಲಜನಕ ಮತ್ತು ಹೀಲಿಯಂ
೫. ಭೂಮಿಯಿಂದ ಸೂರ್ಯನು ಸುಮಾರು _________ ಕಿಲೋಮೀಟರ್ ದೂರದಲ್ಲಿದ್ದಾನೆ.
ಎ. 250 ಮಿಲಿಯನ್
ಬಿ.160 ಮಿಲಿಯನ್
ಸಿ. 170 ಮಿಲಿಯನ್
ಡಿ.150 ಮಿಲಿಯನ್
ಉತ್ತರ-ಡಿ. ಭೂಮಿಯಿಂದ ಸೂರ್ಯನು ಸುಮಾರು 150 ಮಿಲಿಯನ್ ಕಿಲೋಮೀಟರ್ ದೂರದಲ್ಲಿದ್ದಾನೆ.
೧೧. ಭಾರತದ ಮೊದಲ ಬಾಹ್ಯಾಕಾಶ ಆಧಾರಿತವಾಗಿರುವ ಸೌರ ವೀಕ್ಷಣಾಲಯ __________
ಎ.ಚಂದ್ರಯಾನ 3
ಬಿ.ಆದಿತ್ಯ-1
ಸಿ. ಆದಿತ್ಯ L1
ಡಿಸೂರ್ಯ-L1
ಉತ್ತರ- ಸಿ. ಆದಿತ್ಯ L1
12. ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ಸುತ್ತಲೂ ಹಾಲೋ ಕಕ್ಷೆಯಲ್ಲಿ ಇರುವ ________ ನಲ್ಲಿ ಇರಿಸಲಾಗಿದೆ
ಎ.ಲಗ್ರಾಂಜಿಯನ್ ಪಾಯಿಂಟ್ 1 (L1)
ಬಿ.ಆದಿತ್ಯ-1
ಸಿ. ಲಗ್ರಾಂಜಿಯನ್ ಪಾಯಿಂಟ್ 4 (L4)
ಡಿ.ಲಾಂಗ್ ಪಾಯಿಂಟ್ -1
ಉತ್ತರ- ಎ.ಲಗ್ರಾಂಜಿಯನ್ ಪಾಯಿಂಟ್ 1 (L1)
೧೩. ಭಾರತದ ಮೊದಲ ಬಾಹ್ಯಾಕಾಶ ಆಧಾರಿತವಾಗಿರುವ ಸೌರ ವೀಕ್ಷಣಾಲಯ ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ಸುತ್ತಲೂ ಹಾಲೋ ಕಕ್ಷೆಯಲ್ಲಿ ಇರುವ ಲಗ್ರಾಂಜಿಯನ್ ಪಾಯಿಂಟ್ 1 (L1) ಇರಿಸಲಾಗಿದೆ. ಇದು ಸುಮಾರು
ಭೂಮಿಯಿಂದ __________ ದೂರದಲ್ಲಿದೆ.
ಎ.2.5 ಮಿಲಿಯನ್ ಕಿ.ಮೀ.
ಬಿ.1.2 ಮಿಲಿಯನ್ ಕಿ.ಮೀ.
ಸಿ. 1.3 ಮಿಲಿಯನ್ ಕಿ.ಮೀ.
ಡಿ.1.5 ಮಿಲಿಯನ್ ಕಿ.ಮೀ.
ಉತ್ತರ- ಡಿ.1.5 ಮಿಲಿಯನ್ ಕಿ.ಮೀ.
೧೪. ಆದಿತ್ಯ L1 ಬಾಹ್ಯಾಕಾಶ ನೌಕೆಯ ಪ್ರಮುಖ ವಿಜ್ಞಾನ ಉದ್ದೇಶಗಳು -
ಎ. ಕರೋನಲ್ ಹೀಟಿಂಗ್ ವೇಗವರ್ಧನೆ ಮತ್ತು ಸೌರ ಮಾರುತವನ್ನು ಅರ್ಥಮಾಡಿಕೊಳ್ಳುವುದು
ಬಿ. ಕರೋನಲ್ ಮಾಸ್ ಎಜೆಕ್ಷನ್ (CME), ಜ್ವಾಲೆಗಳು ಮತ್ತು ಭೂಮಿಯ ಸಮೀಪ ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳುವುದು
ಸಿ. ಸೌರಶಕ್ತಿಯ ಜೋಡಣೆ ಮತ್ತು ಸೌರ ಮಾರುತ ವಿತರಣೆಯನ್ನು ಮತ್ತು ತಾಪಮಾನ ಅನಿಸೊಟ್ರೋಪಿ ಅನ್ನು ಅರ್ಥಮಾಡಿಕೊಳ್ಳಲು
ಡಿ. ಮೇಲಿನ ಎಲ್ಲವೂ
ಉತ್ತರ- ಡಿ. ಮೇಲಿನ ಎಲ್ಲವೂ
೧೫. ಆದಿತ್ಯ L1 ಬಾಹ್ಯಾಕಾಶ ನೌಕೆಯು __________ ಪೇಲೋಡ್‌ಗಳನ್ನು ಒಯ್ದಿದೆ.
ಎ. ಏಳು
ಬಿ. ಆರು
ಸಿ. ಹತ್ತು
ಡಿ.ಐದು
ಉತ್ತರ- ಎ. ಏಳು
೨೦). ಆದಿತ್ಯ-ಎಲ್ 1 ಮಿಷನ್ ಅನ್ನು _________ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.
A) ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ತಿರುವನಂತಪುರಂ.
B) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) SHAR.
C) ಯು ಆರ್ ರಾವ್ ಉಪಗ್ರಹ ಕೇಂದ್ರ (URSC), ಬೆಂಗಳೂರು.
D) ISRO ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC), ಮಹೇಂದ್ರಗಿರಿ.
ಉತ್ತರ-B) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) SHAR.
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) SHARವು ಆಂದ್ರಪ್ರದೇಶದ ಶ್ರೀ ಹರಿ ಕೋಟಾದಲ್ಲಿದೆ. ಚಂದ್ರಯಾನ-1 ಮತ್ತು ಚಂದ್ರಯಾನ-2 ಎರಡರಲ್ಲೂ ಮಿಷನ್‌ಗಳನ್ನು ಈ ಸೆಂಟರ್‌ನಿಂದ ಪ್ರಾರಂಭಿಸಲಾಯಿತು
೨೧. ಆದಿತ್ಯ-ಎಲ್ 1 ಮಿಷನ್ ಅನ್ನು _________ರಂದು ಉಡಾವಣೆ ಮಾಡಲಾಯಿತು.
ಎ. ಸೆಪ್ಟೆಂಬರ್ 2, 2023
ಬಿ. ಸೆಪ್ಟೆಂಬರ್ 3, 2023
ಸಿ.ಸೆಪ್ಟೆಂಬರ್ 12, 2023
ಡಿ.ಸೆಪ್ಟೆಂಬರ್ 13, 2023
ಉತ್ತರ- ಎ. ಸೆಪ್ಟೆಂಬರ್ 2, 2023
If you have any doubts please comment