Kannada GK Questions and answer | ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು ಉತ್ತರಗಳು.
Kannada GK Questions and answer.
Kannada GK Questions and answer | ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು ಉತ್ತರಗಳು.
ನಾವು ಇಲ್ಲಿ ವಿಜ್ಞಾನ ವಿಷಯದಲ್ಲಿ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಮುಖವಾಗಿ ಕೇಳಲಾಗುವ ಪ್ರಶ್ನೆಗಳ ತರಗತಿವಾರು ಆಯ್ಕೆ ಮಾಡಿ ಬಹು ಆಯ್ಕೆ ಮಾದರಿಯಲ್ಲಿ ಉತ್ತರಗಳ ಜೊತೆಗೆ ನಿಮಗಾಗಿ ನೀಡಲಾಗಿದೆ. ಈ ಒಂದು ಪ್ರಯತ್ನ ನಿಮ್ಮ ಪರೀಕ್ಷಾ ತಯಾರಿಯಲ್ಲಿ ಸಹಕಾರಿಯಾಗಬಹುದು ಎಂಬುದು ನಮ್ಮ ಆಶಯ.
6th standard NCERT Science Text Book Based.
೧. ಗಿಳಿಯು _______ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ.
ಅ. ಸಸ್ಯಗಳ
ಆ. ಪ್ರಾಣಿಗಳ
ಇ. ಸಸ್ಯ ಮತ್ತು ಪ್ರಾಣಿಗಳ
ಈ. ಮೇಲಿನ ಯಾವುದೂ ಅಲ್ಲ
ಉತ್ತರ- ಅ. ಸಸ್ಯಗಳ
೨. ಹುಲಿಯು _________ ಏಕೆಂದರೆ ಇದು ಮಾಂಸವನ್ನು ಮಾತ್ರ ತಿನ್ನುತ್ತದೆ.
ಅ. ಸಸ್ಯಾಹಾರಿ
ಆ. ಮಾಂಸಾಹಾರಿ
ಇ. ಮಿಶ್ರಾಹಾರಿ
ಈ. ಮೇಲಿನ ಯಾವುದೂ ಅಲ್ಲ
ಉತ್ತರ- ಆ. ಮಾಂಸಾಹಾರಿ
೩.ಜಿಂಕೆಯು ಸಸ್ಯ ಉತ್ಪನ್ನಗಳನ್ನು ಮಾತ್ರ ತಿನ್ನುತ್ತದೆ . ಆದ್ದರಿಂದ ಇದು _________ .
ಅ. ಸಸ್ಯಾಹಾರಿ
ಆ. ಮಾಂಸಾಹಾರಿ
ಇ. ಮಿಶ್ರಾಹಾರಿ
ಈ. ಮೇಲಿನ ಯಾವುದೂ ಅಲ್ಲ
ಉತ್ತರ- ಅ. ಸಸ್ಯಾಹಾರಿ
೪. ಹಸುಗಳು, ಎಮ್ಮೆಗಳು ಮತ್ತು ಮೇಕೆಗಳಿಂದ ದೊರೆತ, ನಾವು ಕುಡಿಯುವ ಒಂದು ಪ್ರಾಣಿ ಜನ್ಯ ಉತ್ಪನ್ನ ________.
ಅ. ತುಪ್ಪಳ
ಆ. ಹಾಲು
ಇ. ಕಬ್ಬು
ಈ. ಮಾಂಸ
ಉತ್ತರ- ಆ. ಹಾಲು
೫. ನಮಗೆ ಸಕ್ಕರೆಯು _________ ನಿಂದ ದೊರೆಯುತ್ತದೆ.
ಅ. ಕುರಿ
ಆ. ಹುಲಿ
ಇ. ಕಬ್ಬು
ಈ. ಮೇಲಿನ ಯಾವುದೂ ಅಲ್ಲ
ಉತ್ತರ- ಇ. ಕಬ್ಬು
೬. ನಮ್ಮ ದೇಹಕ್ಕೆ ಅವಶ್ಯಕವಾದ ಅಂಶಗಳನ್ನು __________ ಎನ್ನುವರು.
ಅ. ಪದಾರ್ಥ
ಆ. ಊಟ
ಇ. ಪೋಷಕಗಳು
ಈ. ಮೇಲಿನ ಯಾವುದು ಅಲ್ಲ.
ಉತ್ತರ- ಇ.ಪೋಷಕಗಳು
೭. ನಮ್ಮ ಆಹಾರದ್ಲಲಿರುವ ಕಾರ್ಬೋಹೈಡ್ರೇಟ್ ಗಳು ಮುಖ್ಯವಾಗಿ _________ ರೂಪದಲ್ಲಿರುತ್ತವೆ.
ಅ. ಘನ
ಆ. ದ್ರವ
ಇ. ಪಿಷ್ಟ ಮತ್ತು ಶರ್ಕರಗಳು
ಈ. ಮೇಲಿನ ಯಾವುದು ಅಲ್ಲ
ಉತ್ತರ- ಇ. ಪಿಷ್ಟ ಮತ್ತು ಶರ್ಕರಗಳು
೮. ನಾವು ಒಂದು ಆಹಾರ ಪದಾರ್ಥ ದಲ್ಲಿ ಪಿಷ್ಟದ ಇರುವಿಕೆಯನ್ನು ________ ಪರೀಕ್ಷೆ ಮಾಡುತ್ತೇವೆ.
ಅ. ನೀರಿನಲ್ಲಿ ಕರಗಿಸುತ್ತೇವೆ.
ಆ. ಎಣ್ಣೆಯ ಕಲೆ ಪರೀಕ್ಷೆ
ಇ. ಅಯೋಡಿನ್ ದ್ರಾವಣ ಪರೀಕ್ಷೆ
ಈ. ಮೇಲಿನ ಯಾವುದೂ ಅಲ್ಲ
ಉತ್ತರ-ಇ. ಅಯೋಡಿನ್ ದ್ರಾವಣ ಪರೀಕ್ಷೆ
೯. ಆಹಾರ ಪದಾರ್ಥ ದಲ್ಲಿ ಪಿಷ್ಟದ ಇರುವಿಕೆಯನ್ನು ಪರೀಕ್ಷೆ ಮಾಡಲು __________ ದ್ರಾವಣ ಬಳಸುತ್ತೇವೆ.
ಅ. ದುರ್ಬಲ ಗಂಧಕಾಮ್ಲ
ಆ. ದುರ್ಬಲ ನೈಟ್ರಿಕಾಮ್ಲ
ಇ. ಉಪ್ಪಿನ
ಈ. ದುರ್ಬಲ ಅಯೋಡಿನ್
ಉತ್ತರ-ಈ. ದುರ್ಬಲ ಅಯೋಡಿನ್
೧೦. ಪಿಷ್ಟದ ಪರೀಕ್ಷೆಯಲ್ಲಿ ಬೇಯಿಸದ ಆಹಾರ ಪದಾರ್ಥದ ಮೇಲೆ ಕೆಲವು ಹನಿ ದರ್ಬಲ ಅಯೋಡಿನ್ ದ್ರಾವಣವನ್ನು ಹಾಕಿದಾಗ ________ ಬಣ್ಣವು ಪಿಷ್ಟದ ಇರುವಿಕೆಯನ್ನು ಸೂಚಿಸುತ್ತದೆ.
ಅ.ಕಪ್ಪು ಮಿಶ್ರಿತ ನೀಲಿ ಬಣ್ಣ
ಆ.ಕಪ್ಪು ಮಿಶ್ರಿತ ಹಳದಿ ಬಣ್ಣ
ಇ.ಕೆಂಪು ಮಿಶ್ರಿತ ನೀಲಿ ಬಣ್ಣ
ಈ.ಹಳದಿ ಮಿಶ್ರಿತ ನೀಲಿ ಬಣ್ಣ
ಉತ್ತರ-ಅ.ಕಪ್ಪು ಮಿಶ್ರಿತ ನೀಲಿ ಬಣ್ಣ
೧೧.ಪ್ರೋಟೀನ್ ಪರೀಕ್ಷೆಯಲ್ಲಿ ಬಳಸುವ ರಾಸಾಯನಿಕ ದ್ರಾವಣಗಳು______ ಮತ್ತು ________.
ಅ.ತಾಮ್ರದ ಸಲ್ಫೇಟ್, ಕಾಸ್ಟಿಕ್ ಸೋಡ
ಆ.ಉಪ್ಪಿನ, ಸಕ್ಕರೆಯ
ಇ.ಜಿಂಕ್ ಸಲ್ಫೇಟ್, ಕಾಸ್ಟಿಕ್ ಸೋಡ
ಈ.ಮೇಲಿನ ಯಾವುದು ಅಲ್ಲ
ಉತ್ತರ -ಅ.ತಾಮ್ರದ ಸಲ್ಫೇಟ್, ಕಾಸ್ಟಿಕ್ ಸೋಡ
೧೨.ಪ್ರೋಟೀನ್ ಪರೀಕ್ಷೆಯಲ್ಲಿ, ಆಹಾರ ಪದಾರ್ಥದ ಮೇಲೆ ತಾಮ್ರದ ಸಲ್ಫೇಟ್ ಹಾಗೂ ಕಾಸ್ಟಿಕ್ ಸೋಡಾ ದ್ರಾವಣದ ಹನಿಗಳನ್ನು ಹಾಕಿದಾಗ ________ ಬಣ್ಣವು ಪ್ರೋಟೀನ್ ಇರುವಿಕೆಯನ್ನು ಸೂಚಿಸುತ್ತದೆ.
ಅ.ಹಸಿರು ಬಣ್ಣ
ಆ.ನೇರಳೆ ಬಣ್ಣ
ಇ.ಕೆಂಪು ಬಣ್ಣ
ಈ.ಕಪ್ಪು ಬಣ್ಣ
ಉತ್ತರ-ಆ.ನೇರಳೆ ಬಣ್ಣ
೧೩.ಹಾಳೆಯ ಮೇಲೆ ಎಣ್ಣೆಯ ಕಲೆಯನ್ನು ಪಡೆಯುವ ಪರೀಕ್ಷೆಯು ಆಹಾರ ಪದಾರ್ಥದಲ್ಲಿರುವ ______ ಅಂಶವನ್ನು ಸೂಚಿಸುತ್ತದೆ.
ಅ.ಪ್ರೋಟೀನ್
ಆ.ಪಿಷ್ಟ
ಇ.ಕೊಬ್ಬು
ಈ.ಮೇಲಿನ ಯಾವುದು ಅಲ್ಲ
ಉತ್ತರ-ಇ.ಕೊಬ್ಬು
೧೪.ನಮ್ಮ ದೇಹಕ್ಕೆ, ಕಾರ್ಬೋಹೈಡ್ರೇಟ್ ಗಳು ಮುಖ್ಯವಾಗಿ _______ ಒದಗಿಸುತ್ತವೆ.
ಅ.ಶಕ್ತಿ
ಆ.ರಕ್ಷಣೆ
ಇ.ಬೆಳವಣಿಗೆ
ಈ.ಜೀರ್ಣ ಕ್ರಿಯೆ
ಉತ್ತರ-ಅ.ಶಕ್ತಿ
೧೫.ಶಕ್ತಿಯನ್ನು ಕೊಡುವ ಆಹಾರ ಪದಾರ್ಥಗಳು_______
ಅ.ಕಾರ್ಬೋಹೈಡ್ರೇಟ್ ಗಳು ಮುತ್ತು ಕೊಬ್ಬು
ಆ.ಪ್ರೋಟೀನ್
ಇ.ವಿಟಮಿನ್ ಗಳು
ಈ.ನಾರುಪದಾರ್ಥ
ಉತ್ತರ-ಅ.ಕಾರ್ಬೋಹೈಡ್ರೇಟ್ ಗಳು ಮುತ್ತು ಕೊಬ್ಬು
೧೬.ನಮ್ಮ ದೇಹದ ಬೆಳವಣಿಗೆ ಮತ್ತು ದುರಸ್ತಿಗೆ_____ ಅವಶ್ಯಕ.
ಅ.ಕಾರ್ಬೋಹೈಡ್ರೇಟ್ ಗಳು
ಆ.ಪ್ರೋಟೀನ್ ಗಳು
ಇ.ವಿಟಮಿನ್ ಗಳು
ಈ.ನಾರುಪದಾರ್ಥ
ಉತ್ತರಆ.ಪ್ರೋಟೀನ್ ಗಳು
೧೭.ದೇಹ ನಿರ್ಮಾಣಕಾರಕ ಆಹಾರ ಪದಾರ್ಥಗಳು ಎಂದು______ ಗಳಿಗೆ ಕರೆಯಲಾಗುತ್ತದೆ.
ಅ.ಕಾರ್ಬೋಹೈಡ್ರೇಟ್
ಆ.ಪ್ರೋಟೀನ್
ಇ.ವಿಟಮಿನ್
ಈ.ನಾರುಪದಾರ್ಥ
ಉತ್ತರ-ಆ.ಪ್ರೋಟೀನ್
೧೮.ರೋಗಗಳು ಬರದಂತೆ ರಕ್ಷಿಸಲು _____ ಸಹಾಯ ಮಾಡುತ್ತವೆ
ಅ.ಕಾರ್ಬೋಹೈಡ್ರೇಟ್
ಆ.ಪ್ರೋಟೀನ್
ಇ.ವಿಟಮಿನ್
ಈ.ನಾರುಪದಾರ್ಥ
ಉತ್ತರ-ಇ.ವಿಟಮಿನ್
೧೯.ನಮ್ಮ ಕಣ್ಣುಗಳು, ಮೂಳೆಗಳು, ಹಲ್ಲುಗಳು ಮತ್ತು ದವಡೆಗಳನ್ನು ಆರೋಗ್ಯವಾಗಿಡಲು ______ ಸಹಾಯ ಮಾಡುತ್ತವೆ.
ಅ.ಕಾರ್ಬೋಹೈಡ್ರೇಟ್
ಆ.ಪ್ರೋಟೀನ್
ಇ.ವಿಟಮಿನ್
ಈ.ನಾರುಪದಾರ್ಥ
ಉತ್ತರ-ಇ.ವಿಟಮಿನ್
೨೦.ನಮ್ಮ ಕಣ್ಣುಗಳು ಮತ್ತು ಚರ್ಮವನ್ನು ಆರೋಗ್ಯವಾಗಿಡಲು ______ ಸಹಾಯ ಮಾಡುತ್ತವೆ.
ಅ.ಎ
ಆ.ಬಿ
ಇ.ಸಿ
ಈ.ಡಿ
ಉತ್ತರ ಅ.ಎ
೨೧.ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ವಿಟಮಿನ್________
ಅ.ಎ
ಆ.ಬಿ
ಇ.ಸಿ
ಈ.ಡಿ
ಉತ್ತರ-ಇ.ಸಿ
೨೨.ಹಲ್ಲುಗಳು ಮತ್ತು ಮೂಳೆಗಳಿಗೆ ಬೇಕಾದ ಕ್ಯಾಲ್ಸಿಯಂ ಬಳಸಲು ನಮ್ಮ ದೇಹಕ್ಕೆ ಸಹಾಯ ಮಾಡುವ ವಿಟಮಿನ್_____
ಅ.ಎ
ಆ.ಬಿ
ಇ.ಸಿ
ಈ.ಡಿ
ಉತ್ತರ-ಈ.ಡಿ
೨೩.ಸೂರ್ಯನ ಬೆಳಕಿನಲ್ಲಿ ನಮ್ಮ ದೇಹ ತಯಾರಿಸುವ ವಿಟಮಿನ್________
ಅ.ಎ
ಆ.ಬಿ
ಇ.ಸಿ
ಈ.ಡಿ
ಉತ್ತರ- ಈ.ಡಿ
೨೪.ಮೂಳೆಗಳು ಬಲಹೀನವಾಗಲು ಮತ್ತು ಹಲ್ಲುಗಳು ಕ್ಷೀಣಿಸಿವುದು ____ ಖನಿಜದ ಕೊರತೆಯಿಂದ ಉಂಟಾಗುತ್ತದೆ.
ಅ.ಕ್ಯಾಲ್ಸಿಯಂ
ಆ.ಕಬ್ಬಿಣ
ಇ.ಅಯೋಡಿನ್
ಈ.ಮೇಲಿನ ಯಾವುದು ಅಲ್ಲ
ಉತ್ತರ-ಅ.ಕ್ಯಾಲ್ಸಿಯಂ
೨೫.ಜೀರ್ಣವಾಗದ ಆಹಾರವನ್ನು ದೇಹದಿಂದ ಹೊರಗೆ ಹಾಕಲು ಸಹಾಯ ಮಾಡುವ ಆಹಾರ ಪದಾರ್ಥ_____
ಅ.ಕಾರ್ಬೋಹೈಡ್ರೇಟ್
ಆ.ಪ್ರೋಟೀನ್
ಇ.ವಿಟಮಿನ್
ಈ.ನಾರುಪದಾರ್ಥ
ಉತ್ತರಈ.ನಾರುಪದಾರ್ಥ
೩೫.ಆಹಾರದಿಂದ ನಮ್ಮ ದೇಹ ಪೋಷಕಗಳನ್ನು ಹೀರಿ ಕೊಳ್ಳಲು _______ ಸಹಾಯ ಮಾಡುತ್ತದೆ.
ಅ.ನೀರು
ಆ.ಕೊಬ್ಬು
ಇ.ಪಿಷ್ಟ
ಈ.ಪ್ರೋಟೀನ್
ಉತ್ತರ-ಅ.ನೀರು
೨೬.ಅಕ್ಕಿ ಮತ್ತು ಬೇಳೆಕಾಳುಗಳನ್ನು ಪದೇ ಪದೆ ತೊಳೆಯುವುದರಿಂದ ______ ಮತ್ತು______ ನಷ್ಟ ವಾಗುತ್ತದೆ.
ಅ.ಕೊಬ್ಬು/ಪಿಷ್ಟ
ಆ.ವಿಟಮಿನ್/ಖನಿಜ
ಇ.ಪ್ರೊಟೀನ್/ಕಾರ್ಬೋಹೈಡ್ರೇಟ್
ಈ.ಮೇಲಿನ ಯಾವುದು ಅಲ್ಲ
ಉತ್ತರ-ಆ.ವಿಟಮಿನ್/ಖನಿಜ
೨೭.ಆಹಾರ ಪದಾರ್ಥಗಳ ನ್ನು ಬೇಯಿಸುವಾಗ ಶಾಖದಿಂದ________ ಅತಿ ಸುಲಭವಾಗಿ ನಾಶವಾಗುತ್ತದೆ.
ಅ.ವಿಟಮಿನ್ ಎ
ಆ.ವಿಟಮಿನ್ ಸಿ
ಇ.ವಿಟಮಿನ್ ಡಿ
ಈ.ವಿಟಮಿನ್ ಬಿ
ಉತ್ತರ-ಆ.ವಿಟಮಿನ್ ಸಿ
೨೮.ಕೊಬ್ಬು ಹೇರಳವಾಗಿರುವ ಆಹಾರ ಪದಾರ್ಥಗಳ ಸೇವಿಸುವುದರಿಂದ_______ ಉಂಟಾಗುತ್ತದೆ.
ಅ.ಬೊಜ್ಜು ಅಥವಾ ಸ್ಥೂಲಕಾಯತೆ
ಆ.ಗಳಗಂಡ
ಇ.ರಿಕೆಟ್ಸ್
ಈ.ಬೆರಿಬೆರಿ
ಉತ್ತರ-ಅ.ಬೊಜ್ಜು ಅಥವಾ ಸ್ಥೂಲಕಾಯತೆ
೨೯.ಕೊರತೆಯಿಂದ ಬರುವ ರೋಗಗಳಿಗೆ ಪ್ರಮುಖ ಕಾರಣ______
ಅ.ಧೀರ್ಘಕಾಲದ ಪೋಷಕಾಂಶಗಳ ಕೊರತೆ
ಆ.ಸ್ಥೂಲಕಾಯ
ಇ.ಹೆಚ್ಚಾಗಿ ಸೇವಿಸುವುದು
ಈ.ಮೇಲಿನ ಯಾವುದು ಅಲ್ಲ
ಉತ್ತರ-ಅ.ಧೀರ್ಘಕಾಲದ ಪೋಷಕಾಂಶಗಳ ಕೊರತೆ
೩೦.ವಿಟಮಿನ್ 'ಎ' ಕೊರತೆಯಿಂದ ಬರುವ ರೋಗ______
ಅ.ದೃಷ್ಟಿ ದೋಷ/ ರಾತ್ರಿ ಕುರುಡು
ಆ.ಬೆರಿಬೆರಿ
ಇ.ರಿಕೆಟ್ಸ್
ಈ.ಸ್ಕರ್ವಿ
ಉತ್ತರ-ಅ.ದೃಷ್ಟಿ ದೋಷ/ ರಾತ್ರಿ ಕುರುಡು
೩೧.ವಿಟಮಿನ್'ಬಿ1' ಕೊರತೆಯಿಂದ ಬರುವ ರೋಗ _____
ಅ.ಬೆರಿಬೆರಿ
ಆ.ರಿಕೆಟ್ಸ್
ಇ.ಸ್ಕರ್ವಿ
ಈ.ಗಳಗಂಡ
ಉತ್ತರ-ಅ.ಬೆರಿಬೆರಿ
೩೨.ವಿಟಮಿನ್ ಸಿ ಕೊರತೆಯಿಂದ ಬರುವ ರೋಗ___
ಅ.ಬೆರಿಬೆರಿ
ಆ.ರಿಕೆಟ್ಸ್
ಇ.ಸ್ಕರ್ವಿ
ಈ.ರಕ್ತಹೀನತೆ
ಉತ್ತರಇ.ಸ್ಕರ್ವಿ
೩೩.ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ರೋಗ____
ಅ.ಬೆರಿಬೆರಿ
ಆ.ರಿಕೆಟ್ಸ್
ಇ.ಸ್ಕರ್ವಿ
ಈ.ರಕ್ತಹೀನತೆ
ಉತ್ತರಆ.ರಿಕೆಟ್ಸ್
೩೪.ಮೂಳೆಗಳು ಬಲಹೀನವಾಗಲು ಮತ್ತು ಹಲ್ಲುಗಳು ಕ್ಷೀಣಿಸಿವುದು ____ ಖನಿಜದ ಕೊರತೆಯಿಂದ ಉಂಟಾಗುತ್ತದೆ.
ಅ.ಕ್ಯಾಲ್ಸಿಯಂ
ಆ.ಕಬ್ಬಿಣ
ಇ.ಅಯೋಡಿನ್
ಈ.ಮೇಲಿನ ಯಾವುದು ಅಲ್ಲ
ಉತ್ತರ-ಅ.ಕ್ಯಾಲ್ಸಿಯಂ
೩೫.ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುವ ರೋಗ______
ಅ.ಬೆರಿಬೆರಿ
ಆ.ರಿಕೆಟ್ಸ್
ಇ.ಸ್ಕರ್ವಿ
ಈ.ಗಳಗಂಡ
ಉತ್ತರ-ಈ.ಗಳಗಂಡ
೩೬.ಆಹಾರದಲ್ಲಿ ಕಬ್ಬಿಣದ ಕೊರತೆಯಿಂದ ______ರೋಗ ಉಂಟಾಗುತ್ತದೆ.
ಅ.ಬೆರಿಬೆರಿ
ಆ.ರಿಕೆಟ್ಸ್
ಇ.ಸ್ಕರ್ವಿ
ಈ.ರಕ್ತಹೀನತೆ
ಉತ್ತರ-ಈ.ರಕ್ತಹೀನತೆ
ಈಗ ನೀವು ಮೇಲಿನ ಪ್ರಶ್ನೆಗಳಿಗೆ ಇನ್ನೊಂದು ವಿಧಾನದಲ್ಲಿ ಉತ್ತರಿಸಿ ನಿಮ್ಮ ಪರೀಕ್ಷೆಗೆ ತಯಾರಿ ನಡೆಸಿ.
ಈ ಒಂದು ಬ್ಲಾಗ್ ಲೇಖನದಲ್ಲಿ Kannada GK Questions and answer | ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೆಗಳು ಉತ್ತರಗಳು ಇಲ್ಲಿ ನೀಡಲಾಗಿದೆ. ಈ ಉತ್ತರಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ. ದಯಮಾಡಿ ಏನಾದರೂ ಪ್ರಶ್ನೆಗಳಿದ್ದರೆ ಕಾಮೆಂಟ್ ಮಾಡಲು ಮರೆಯದಿರಿ ಹಾಗು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.



.jpg)


Good information
ಪ್ರತ್ಯುತ್ತರಅಳಿಸಿIf you have any doubts please comment