7th Sasyagalalli Santanotpatti Notes in Kannada.
7th Sasyagalalli Santanotpatti Notes | 7ನೇ ತರಗತಿ ಸಸ್ಯಗಳಲ್ಲಿ ಸಂತಾನೋತ್ಪತ್ತಿ ವಿಜ್ಞಾನ ನೋಟ್ಸ್.ಸರಳವಾಗಿ ಪ್ರಮುಖ ಅಂಶಗಳ ವಿವರಣೆ ಮಾಡಲಾಗಿದೆ.
7th Sasyagalalli Santanotpatti Notes | 7ನೇ ತರಗತಿ ಸಸ್ಯಗಳಲ್ಲಿ ಸಂತಾನೋತ್ಪತ್ತಿ ವಿಜ್ಞಾನ ನೋಟ್ಸ್.ಸರಳವಾಗಿ ಪ್ರಮುಖ ಅಂಶಗಳ ವಿವರಣೆ ಮಾಡಲಾಗಿದೆ. Reproduction in Plants Class 7 Notes Science Chapter 12. sasyagalalli santanotpatti ಈನೋಟ್ಸ್ನಲ್ಲಿ ಯಾವ ಅಂಶಗಳ ಬಗ್ಗೆ ಮಾಹಿತಿನೀಡಲಾಗಿದೆ ಎಂಬುದನ್ನು ಈ ಕೆಳಗಿನ ಮೈನ್ಡ್ ಮ್ಯಾಪ್ ನಲ್ಲಿ ಗಮನಿಸಿ.
ಈ ಅಧ್ಯಾಯ ನೋಟ್ಸ್ ಪ್ರಾರಂಭ ಮಾಡುವ ಮುನ್ನ ಈ ಕೆಳಗಿನ ಪ್ರಶ್ನೆಗಳನ್ನು ಗಮನಿಸೋಣ.7th Sasyagalalli Santanotpatti |Notes of Ch 12 Reproduction in Plants Class 7th Science.
- ಸಂತಾನೋತ್ಪತ್ತಿ ಎಂದರೇನು?
- ಸಸ್ಯಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ?
- ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಯಾವುದಾದರು ವಿಧಾನಗಳಿವೆಯೇ?
- ಅಲೈಂಗಿಕ ಮತ್ತು ಲೈಂಗಿಕ ಸಂತಾನೋತ್ಪತ್ತಿ ಎಂದರೇನು?
- ಅಲೈಂಗಿಕ ಸಂತಾನೋತ್ಪತ್ತಿಯ ವಿವಿಧ ವಿಧಾನಗಳಾವುವು?
- ಅಲೈಂಗಿಕ ಸಂತಾನೋತ್ಪತ್ತಿಯ ವಿವಿಧ ವಿಧಾನಗಳು ಯಾವ ಸಸ್ಯಗಳಲ್ಲಿ ಕಂಡು ಬರುತ್ತವೆ?
- ಲೈಂಗಿಕ ಸಂತಾನೋತ್ಪತ್ತಿಯ ವಿವಿಧ ವಿಧಾನಗಳಾವುವು?
- ಹೂವಿನ ಪ್ರಮುಖ ಕಾರ್ಯವೇನು?
- ಪರಾಗಸ್ಪರ್ಶ ಎಂದರೇನು?
- ಬೀಜ ಪ್ರಸರಣ ಎಂದರೇನು?
ಸಂತಾನೋತ್ಪತ್ತಿ ಎಂದರೇನು?
Reproduction in Plants Class 7 Notes ನಿಮಗೆಲ್ಲಾ ತಿಳಿದಿದೆ ಜೀವಿಗಳ ಪ್ರಮುಖ ಲಕ್ಷಣಗಳು ಯಾವುವು ಎಂದು ಉಸಿರಾಟ, ಬೆಳವಣಿಗೆ, ಆಹಾರ ಸೇವನೆ, ಚಲನೆ, ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ, ಸಂತಾನೋತ್ಪತ್ತಿ .sasyagalalli santanotpatti.
ತನ್ನನ್ನೆ ಹೋಲುವ ಜೀವಿಯನ್ನು ಉತ್ಪತ್ತಿ ಮಾಡುವುದು ಎಲ್ಲ ಜೀವಿಗಳ ಅತಿ ಪ್ರಮುಖ ಲಕ್ಷಣವಾಗಿದೆ.
ಪೋಷಕ ಜೀವಿಗಳಿಂದ ಹೊಸ ಮರಿ ಜೀವಿಗಳು ಹುಟ್ಟುವುದಕ್ಕೆ ಸಂತಾನೋತ್ಪತ್ತಿ ಎನ್ನುವರು.
ಉದಾಹರಣೆಗೆ - ಜಿಂಕೆ ತನ್ನನ್ನೆ ಹೋಲುವ ಮರುಜೀವಿಗೆ ಜನ್ಮ ನೀಡುತ್ತದೆ.
ಮೊಲ ತನ್ನನ್ನೆ ಹೋಲುವ ಇನ್ನೊಂದು ಮರಿಜೀವಿಗೆ ಜನ್ಮ ನೀಡುತ್ತದೆ. ಹಾಗೆ ಆನೆಯೂ ಕೂಡ ತನ್ನನ್ನು ಹೋಲುವ ಮರುಜೀವಿಗೆ ಜನ್ಮ ನೀಡುತ್ತದೆ.
ಸಸ್ಯದ ಪ್ರಮುಖ ಭಾಗಗಳು ಯಾವುವು? sasyagalalli santanotpatti
- ಮೊದಲನೇ ವಿಧಾನ ಅಲೈಂಗಿಕ ಸಂತಾನೋತ್ಪತ್ತಿ.
- ಎರಡನೆಯ ವಿಧಾನ ಲೈಂಗಿಕ ಸಂತಾನೋತ್ಪತ್ತಿ.
ಅಲೈಂಗಿಕ ಸಂತಾನೋತ್ಪತ್ತಿ.1.ಕಾಯಜ ಸಂತಾನೋತ್ಪತ್ತಿ .
ಕಾಯಜ ಸಂತಾನೋತ್ಪತ್ತಿ ಇದು ಒಂದು ಅಲೈಂಗಿಕ ಸಂತಾನೋತ್ಪತ್ತಿಯ ವಿಧಾನವಾಗಿದೆ. ಇದರಲ್ಲಿ ಬೇರು, ಕಾಂಡ, ಎಲೆ ಮತ್ತು ಮೊಗ್ಗುಗಳಿಂದ ಹೊಸ ಗಿಡಗಳು ಹುಟ್ಟುತ್ತವೆ. ಸಸ್ಯದ ಕಾಯಜ ಭಾಗಗಳಿಂದ ಹೊಸ ಸಸಿಗಳು ಹುಟ್ಟುವ ಕಾರಣ ಈ ವಿಧಾನಕ್ಕೆಕಾಯಜ ಸಂತಾನೋತ್ಪತ್ತಿ ಎನ್ನುವರು.- ಸಂಪಿಗೆ ಗಿಡ ಇದರಲ್ಲಿ ಸಂತಾನೋತ್ಪತ್ತಿಯ ಸಸ್ಯದ ಕಾಯಜ ಭಾಗ ಕಾಂಡ.
- ಬ್ರಯೋಫಿಲ್ಲಮ್ ಇದರಲ್ಲಿ ಸಂತಾನೋತ್ಪತ್ತಿಯ ಕಾಯಜ ಭಾಗ ಎಲೆ (ಎಲೆಯ ತುದಿ ಭಾಗಗಳಲ್ಲಿ ಹೊಸ ಸಸಿಗಳು ಬೆಳೆಯುತ್ತವೆ).
- ಮನಿ ಪ್ಲಾಂಟ್ ಇದರಲ್ಲಿ ಸಂತಾನೋತ್ಪತ್ತಿಯ ಕಾಯಜಭಾಗ ಕಾಂಡ
- ಸಿಹಿಗೆಣಸು ಇದರಲ್ಲಿ ಸಂತಾನೋತ್ಪತ್ತಿಯ ಕಾಯಜಭಾಗ ಬೇರು
- ಅರಿಶಿನ ಇದರಲ್ಲಿ ಸಂತಾನೋತ್ಪತ್ತಿಯ ಕಾಯಜಭಾಗ ಕಾಂಡ
- ಶುಂಠಿ ಇದರಲ್ಲಿ ಸಂತಾನೋತ್ಪತ್ತಿಯ ಕಾಯಜಭಾಗ ಕಾಂಡ
- ಆಲೂಗೆಡ್ಡೆ ಇದರಲ್ಲಿ ಸಂತಾನೋತ್ಪತ್ತಿಯ ಕಾಯಜಭಾಗ ಬೇರು
- ಕ್ಯಾಕ್ಟಸ್ ಇದರಲ್ಲಿ ಸಂತಾನೋತ್ಪತ್ತಿಯ ಭಾಗ ಕಾಂಡ.
ಆಲೂಗೆಡ್ಡೆ ಶುಂಠಿ ಅರಿಶಿಣ ಇವುಗಳ ಗಾಯಗಳಲ್ಲಿ ಕಣ್ಣುಗಳು ಕಂಡುಬರುತ್ತವೆ ಆ ಭಾಗದಲ್ಲಿ ಕತ್ತರಿಸಿ ಮಣ್ಣಿನಲ್ಲಿ ನೆಟ್ಟಾಗ ಹೊಸ ಸಸ್ಯವಾಗಿ ಬೆಳೆಯುತ್ತವೆ.
- ಕಾಯಜಸಂತಾನೋತ್ಪತ್ತಿಯಿಂದ ಉಂಟಾದ ಗಿಡಗಳು ಕಡಿಮೆ ಸಮಯದಲ್ಲೇ ಬೆಳೆಯುತ್ತವೆ.
- ಬೀಜಗಳಿಂದ ಹುಟ್ಟಿದ ಗಿಡಗಳಿಗಿಂತ ಬೇಗನೆ ಹೂ ಮತ್ತು ಹಣ್ಣುಗಳನ್ನು ಬಿಡುತ್ತವೆ.
- ಸಸ್ಯದಿಂದ ಉತ್ಪತ್ತಿಯಾಗುವ ಕಾರಣ ಹೊಸ ಸಸ್ಯಗಳು ಪೋಷಕ ಸಸ್ಯದ ತದ್ರುಪವಾಗಿರುತ್ತವೆ.
ಮೊಗ್ಗುವಿಕೆ
ಈಸ್ಟ್ ಒಂದು ಏಕಕೋಶ ಜೀವಿ. ಇವುಗಳನ್ನು ನಾವು ಸೂಕ್ಷ್ಮದರ್ಶಕ ಯಂತ್ರದ ಸಹಾಯದಿಂದ ಮಾತ್ರ ನೋಡಲು ಸಾಧ್ಯ. ಸಾಕಷ್ಟು ಪೋಷಕಗಳನ್ನು ಒದಗಿಸಿದರೆ ಇವು ಕೆಲವೇ ಗಂಟೆಗಳಲ್ಲಿ ವಿಭಜನೆಗೊಂಡು ಸಂಖ್ಯೆಯಲ್ಲಿ ಹೆಚ್ಚಳ ಗೊಳ್ಳುತ್ತವೆ.
ಮೊಗ್ಗುವಿಕೆ ಮೂಲಕ ಈಸ್ಟ್ ನಲ್ಲಿ ಸಂತಾನೋತ್ಪತ್ತಿ .
ತುಂಡಾಗುವಿಕೆ
ತುಂಡಾಗುವಿಕೆ ಮೂಲಕ ಸಸ್ಯಗಳು ಹೇಗೆ ಸಂತಾನೋತ್ಪತ್ತಿ ಮಾಡುತ್ತವೆ?
ಬೀಜಕ ಉತ್ಪತ್ತಿ.
ಉದಾಹರಣೆಗಳು- ಹಾವಸೆ, ಜರಿಗಿಡ.
ಲೈಂಗಿಕ ಸಂತಾನೋತ್ಪತ್ತಿ
ಪರಾಗಸ್ಪರ್ಶ
ಪರಾಗಸ್ಪರ್ಶ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪರಾಗ ರೇಣುಗಳು ಅವು ಒಣಗುವುದನ್ನು ತಡೆಯಬಲ್ಲ ರಕ್ಷಣಾ ಕವಚ ಅಥವಾ ಪದರವನ್ನು ಹೊಂದಿರುತ್ತವೆ. ಈ ಪರಾಗ ರೇಣುಗಳು ಹಗುರವಾಗಿದ್ದು ಗಾಳಿ ಅಥವಾ ನೀರಿನಲ್ಲಿ ಸಾಗಾಣಿಕೆ ಆಗುತ್ತವೆ.7th Sasyagalalli Santanotpatti Notes in Kannada.
ಹೂವಿನಲ್ಲಿ ಪರಾಗಸ್ಪರ್ಶ.
ಒಂದು ಹೂವಿನ ಕೇಸರದಿಂದ ಅಂದರೆ ಪರಾಗ ಕೋಶದಿಂದ ಶಾಲಾ ಕಾಗ್ರಕ್ಕೆ ಪರಾಗವು ವರ್ಗಾವಣೆಯಾಗುವ ಪ್ರಕ್ರಿಯೆಗೆ ಪರಾಗ ಸ್ಪರ್ಶ ಎನ್ನುವರು. ಕೀಟಗಳು, ಪಕ್ಷಿಗಳು ಹೂಗಳ ಮೇಲೆ ಕುಳಿತು ತಮ್ಮ ದೇಹದೊಂದಿಗೆ ಪರಾಗ ರೇಣುಗಳನ್ನು ಒಯ್ಯುತ್ತವೆ ಅದೇ ಜಾತಿಯ ಹೂವಿನ ಶಲಾಕಾಗ್ರ ದ ಮೇಲೆ ಕೆಲವು ಪರಾಗ ರೇಣುಗಳು ಬೀಳಬಹುದು.
ಹೂಗಳು ಸಾಮಾನ್ಯವಾಗಿ ವರ್ಣರಂಗಿತವಾಗಿದ್ದು ಸುವಾಸನೆ ಬೀರುತ್ತದೆ ಇದಕ್ಕೆ ಕಾರಣವೇನು?
ಅದು ಕೀಟಗಳನ್ನು ಆಕರ್ಷಿಸುವುದಕ್ಕಾಗಿ ಇರುವ ಪ್ರಕೃತಿಯ ಅದ್ಭುತ ವಿಸ್ಮಯವಾಗಿದೆ.
- ಸ್ವಕೀಯ ಪರಾಗ ಸ್ಪರ್ಶ
- ಪರಕೀಯ ಪರಾಗ ಸ್ಪರ್ಶ
ಸ್ವಕೀಯ ಪರಾಗಸ್ಪರ್ಶ ಎಂದರೇನು?
ಸ್ವಕೀಯ ಪರಾಗ ಸ್ಪರ್ಶದಲ್ಲಿ ಒಂದು ಹೂವಿನ ಪರಾಗ ಕೋಶದಿಂದ ಅದೇ ಹೂವಿನ ಶಲಾಕಾಗ್ರ ಕ್ಕೆ ಪರಾಗ ವರ್ಗಾವಣೆ ಆಗುತ್ತದೆ.
ಪರಕೀಯ ಪರಾಗ ಸ್ಪರ್ಶ ಎಂದರೇನು?
ಪರಕೀಯ ಪರಾಗ ಸ್ಪರ್ಶದಲ್ಲಿ ಒಂದು ಹೂವಿನ ಪರಾಗ ಕೋಶದಿಂದ ಅದೇ ಜಾತಿಯ ಬೇರೊಂದು ಹೂವಿನ ಶಾಲಾಕಾಗ್ರಕೆ ಪರಾಗದ ವರ್ಗಾವಣೆ ಆಗುತ್ತದೆ.
ನಿಷೇಚನ .
ಪುರುಷ ಮತ್ತು ಹೆಣ್ಣು ಲಿಂಗಾಣುಗಳ ಸಂಯೋಗವನ್ನು ನಿಷೇಚನ ಎನ್ನುವರು. ಲಿಂಗಾನುಗಳ ಸಂಯೋಗಗೊಂಡು ಕೋಶವನ್ನು ಯುಗ್ಮಜ ಎನ್ನುವರು. ಯುಗ್ಮಜವು ಮುಂದೆ ಭ್ರೂಣವಾಗಿ ಬೆಳೆಯುತ್ತದೆ.
ಹಣ್ಣು ಮತ್ತು ಬೀಜ ಉಂಟಾಗುವುದು.
ನಿಷೇಚನ ನಂತರ ಹೂವಿನ ಉಳಿದೆಲ್ಲ ಭಾಗಗಳು ಉದುರಿ ಹೋಗಿ ಅಂಡಾಶಯ ಹಣ್ಣಾಗಿ ಬೆಳೆಯುತ್ತದೆ ಬಲಿತ ಅಂಡಾಶಯವನ್ನು ಹಣ್ಣು ಎನ್ನುವರು.
IF YOU WANT GET PDF NOTES OF THIS CLICK HERE👇
ಬೀಜ ಪ್ರಸರಣ.
ಸಸ್ಯಗಳ ಸಂತಾನೋತ್ಪತ್ತಿ ಕಾರ್ಯದಲ್ಲಿ ಬೀಜಗಳ ಪ್ರಸರಣ ಅತಿ ಪ್ರಮುಖ ಪ್ರಕ್ರಿಯೆಯಾಗಿದೆ. ಬೀಜಗಳು ಬೇರೆ ಬೇರೆ ಜಾಗಗಳಿಗೆ ಪ್ರಸರಣ ಗೊಳ್ಳುವುದರಿಂದ ಪ್ರಕೃತಿಯಲ್ಲಿ ವಿಭಿನ್ನ ಜಾಗಗಳಲ್ಲಿ ಒಂದೇ ಜಾತಿಯ ಗಿಡಗಳು ಬೆಳೆಯುವುದನ್ನು ನಾವು ಕಾಣಬಹುದು.
reproduction in plants notes class 7th ಗಾಳಿ, ನೀರು ಮತ್ತು ಪ್ರಾಣಿಗಳಿಂದ ಬೀಜ ಮತ್ತು ಹಣ್ಣುಗಳು ವಿವಿಧ ಪ್ರದೇಶಗಳಿಗೆ ಸಾಗಿಸಲ್ಪಡುತ್ತವೆ. ರೆಕ್ಕೆಯಂತೆ ಚಾಚಿರುವ ಹೊರಪದರು ಇರುವ ನುಗ್ಗೆಕಾಯಿ ಮತ್ತು ಮೇಪಲ್‌ನ ಬೀಜಗಳು ಹುಲ್ಲಿನ ಹಗುರ ಬೀಜಗಳು, ಆಕ್‌ನ ರೋಮಭರಿತ ಬೀಜಗಳು ಅಥವಾ ಸೂರ್ಯಕಾಂತಿಯ ರೋಮಭರಿತ ಹಣುಗಾಳಿಗೆ ಬಹಳ ದೂರ ಚದುರಿ ಹೋಗುತ್ತವೆ. ಕೆಲವು ನೀರಿನಿಂದ ಪ್ರಸರಣಗೊಳ್ಳುತ್ತವೆ. ಕೆಲವು ಹಣ್ಣು ಅಥವಾ ಬೀಜಗಳು ನಾರುಭರಿತ ಅಥವಾ ಮೃದುವಾದ ಹೊರಪದರದ ಮೂಲಕ ನೀರಿನಲ್ಲಿ ತೇಲುವ ಸಾಮರ್ಥ್ಯ ಪಡೆದುಕೊಂಡಿರುತ್ತವೆ. ಉದಾಹರಣೆಗೆ, ತೆಂಗಿನಕಾಯಿ. ಕೆಲವು ಬೀಜಗಳು ವಿಶೇಷವಾಗಿ ಮೈಮೇಲೆ ಮುಳ್ಳು, ಕೊಕ್ಕೆ ಅಥವಾ ಕೊಂಡಿಯ ರಚನೆ ಇರುವಂಥ ಬೀಜಗಳು, ಪ್ರಾಣಿಗಳಿಂದ ಪ್ರಸರಣಗೊಳ್ಳುತ್ತವೆ. ಇವು ಪ್ರಾಣಿಗಳ ದೇಹಕ್ಕೆ ಅಂಟಿಕೊಂಡು ದೂರದ ಪ್ರದೇಶಗಳಿಗೆ ವರ್ಗಾವಣೆಗೊಳ್ಳುತ್ತವೆ. ಉದಾಹರಣೆಗೆ, ಕ್ಸಾಂತಿಯಮ್ ಕೆಲವು ಜಾತಿಯ ಹಣ್ಣುಗಳು ಇದ್ದಕ್ಕಿದ್ದಂತೆ ಸಿಡಿದು ಬೀಜಗಳನ್ನು ದೂರಕ್ಕೆ ಎಸೆಯುತ್ತವೆ. ಹೀಗಾಗಿ ಪೋಷಕ ಸಸ್ಯದಿಂದ ಬಹು ದೂರಕ್ಕೆ ಬೀಜಗಳು ಚದುರುತ್ತವೆ. ಈ ವಿಧಾನವನ್ನು ಹರಳು ಮತ್ತು ಕರ್ಣಕುಂಡಲದಲ್ಲಿ ಕಾಣಬಹುದು.
7th Sasyagalalli Santanotpatti FAQs
ಸಂತಾನೋತ್ಪತ್ತಿ ಎಂದರೇನು?
ಪೋಷಕ ಜೀವಿಗಳಿಂದ ಹೊಸ ಮರಿ ಜೀವಿಗಳು ಹುಟ್ಟುವುದಕ್ಕೆ ಸಂತಾನೋತ್ಪತ್ತಿ ಎನ್ನುವರು.
ಕಾಯಜ ಸಂತಾನೋತ್ಪತ್ತಿಯ ಪ್ರಯೋಜನಗಳು ಯಾವುವು?
ಕಾಯಜಸಂತಾನೋತ್ಪತ್ತಿಯಿಂದ ಉಂಟಾದ ಗಿಡಗಳು ಕಡಿಮೆ ಸಮಯದಲ್ಲೇ ಬೆಳೆಯುತ್ತವೆ. ಬೀಜಗಳಿಂದ ಹುಟ್ಟಿದ ಗಿಡಗಳಿಗಿಂತ ಬೇಗನೆ ಹೂ ಮತ್ತು ಹಣ್ಣುಗಳನ್ನು ಬಿಡುತ್ತವೆ. ಸಸ್ಯದಿಂದ ಉತ್ಪತ್ತಿಯಾಗುವ ಕಾರಣ ಹೊಸ ಸಸ್ಯಗಳು ಪೋಷಕ ಸಸ್ಯದ ತದ್ರುಪವಾಗಿರುತ್ತವೆ. .
ನಿಷೇಚನ ಎಂದರೇನು?
RELATED VIDEOS👇
ನೀವು ನನ್ನನ್ನು ಇಲ್ಲೂ ಕೂಡ ಫಾಲೋ ಮಾಡಬಹುದು
https://www.kannadaeshikshaka.in/
Stock Photography Related-
2.https://wirestock.io/?ref=parimala.k.p
3.http://feeds.feedburner.com/ScienceTeachingResorcesBlog-TheBestBlogToLearnTeachScience
If you have any doubts please comment