ADS

Simple science- 1ಚಲನೆ

 ಚಲನೆ









ಚಿತ್ರ ಮತ್ತು ವಿಡಿಯೋ ವಿಶ್ಲೇಷಣೆ ಮಾಡಿದಾಗ ಕಾಯವ ಚಲಿಸುತ್ತಿದೆ ಅಥವಾ ಇಲ್ಲವೇ ಎಂದು ನಾವು ಹೇಳಬೇಕಾದರೆ ಇನ್ನೊಂದು ವಸ್ತುವನ್ನು ಆಧಾರವಾಗಿಟ್ಟುಕೊಂಡು ಹೇಳಬೇಕು.

 ನಾವು ಆಧಾರವಾಗಿಟ್ಟುಕೊಂಡ ವಸ್ತುವನ್ನು ಅಥವಾ ಕಾಯವನ್ನು   ಸಂಬಂಧಸೂಚಕ ಚೌಕಟ್ಟು ಇಂಗ್ಲಿಷ್ನಲ್ಲಿ - FRAME OF REFERENCE ಎನ್ನುತ್ತಾರೆ.

ಹಾಗಾಗಿ ಸಂಬಂಧ ಸೂಚಕ ಚೌಕಟ್ಟಿಗೆ ಹೋಲಿಸಿದಾಗ ಒಂದು ಕಾಯದ ಅಥವಾ ವಸ್ತುವಿನ ಸ್ಥಾನವು ಬದಲಾಗುತ್ತಿದ್ದಾರೆ ವಸ್ತು ಅಥವಾ ಕಾಯವ ಚಲನೆಯಲ್ಲಿದೆ ಅಂತ ಹೇಳಬಹುದು ಸ್ಥಾನವು ಬದಲಾವಣೆ ಆಗದಿದ್ದರೆ ವಸ್ತು ನಿಶ್ಚಲ ಸ್ಥಿತಿಯಲ್ಲಿದೆ ಎಂದು ಹೇಳಬಹುದು.

ಚಲಿಸಿದ ಚಲಿಸುತ್ತಿರುವ ವಸ್ತುವೊಂದು ತನ್ನ ಸ್ಥಾನವನ್ನು ಎಷ್ಟು ಬದಲಾಯಿಸಿ ಕೊಂಡಿದೆ ಎನ್ನುವುದರ ಮಾನವೇ ಸ್ಥಾನಪಲ್ಲಟ.

 ಚಲನೆಯನ್ನು ಆರಂಭಿಸುವ ಪ್ರಾರಂಭ ಬಿಂದು ಮತ್ತು ತಲುಪಿದ ಅಂತಿಮ ಬಿಂದು ಇವೆರಡರ ನಡುವಿನ ಸರಳರೇಖಾತ್ಮಕ ಅಂತರವನ್ನು ಅಳೆದರೆ ನಮಗೆ ಸ್ಥಾನಪಲ್ಲಟ ಸಿಗುವುದು.

 ಸ್ಥಾನಪಲ್ಲಟವು ಪ್ರಾರಂಭ ಮತ್ತು ಅಂತಿಮ ಬಿಂದುಗಳ ನಡುವಿನ ನೇರ ಅಂತರವನ್ನು ಮಾತ್ರ ಪರಿಗಣಿಸುತ್ತದೆ ಹೊರತು  ಅಂತಿಮ ಬಿಂದುವನ್ನು ತಲುಪುವಲ್ಲಿ ತೆಗೆದುಕೊಂಡ ಹಾದಿ ಅಲ್ಲಿನ ತಿರುವುಗಳನ್ನು ಅವುಗಳನ್ನು ಅವಘಣಿಸುತ್ತದೆ.

 ನಾವು ಪಯಣಿಸಿದ ನಿಜವಾದ ದೂರ ಬೇಕಾದರೆ ಎಲ್ಲಾ ವಕ್ರತೆಗಳನ್ನು ಪರಿಗಣನೆಗೆ ತೆಗೆದುಕೊಂಡು ಅಳೆದರೆ ಆಗ ನಮಗೆ ಕ್ರಮಿಸಿದ ದೂರ Distance travelled ಲಭ್ಯವಾಗುತ್ತದೆ .

ವಸ್ತು ನೇರ ನೇರ ಹಾದಿಯಲ್ಲಿ ಪಯಣಿಸಿದರೆ ಕ್ರಮಿಸಿದ ದೂರ ಸ್ಥಾನಪಲ್ಲಟಕ್ಕೆ ಸಮವಾಗುತ್ತದೆ.

ಸ್ಥಾನಪಲ್ಲಟ ಒಂದು ಸದಿಶ/ vector quantity.

 ಸ್ಥಾನಪಲ್ಲಟಕ್ಕೆ ಪ್ರಮಾಣದ ಜೊತೆ ನಿಶ್ಚಿತ ದಿಕ್ಕು ಇದೆ .

ಕ್ರಮಿಸಿದ ದೂರ ಒಂದು ಅದಿಶ ಪರಿಮಾಣ/scalar quantity ಅದಕ್ಕೆ ಪ್ರಮಾಣ ಮಾತ್ರ ಇದೆ.

 ಸತತವಾಗಿ ಬದಲಾಗುತ್ತಿರುವ ಕಾರಣ ದಿಕ್ಕನ್ನು ಹೇಳಲಾಗುವುದಿಲ್ಲ.


ಚಲನೆಯ ವಿಧಗಳು

ಚಲನೆಯ ಸ್ವರೂಪವನ್ನು ಆಧರಿಸಿ ಅವುಗಳನ್ನು ಕೆಲವು ವಿಧಗಳಾಗಿ ವಿಂಗಡಿಸಲಾಗಿದೆ

 ಸರಳ ಸ್ಥಾನಾಂತರ ಚಲನೆ ಟ್ರಾನ್ಸ್ಲೇಟರ್ ಮೋಷನ್ ಒಂದು ಕಾಯದ ಎಲ್ಲಾ ಕಣಗಳ ಏಕಕಾಲದಲ್ಲಿ ಒಂದೇ ದೂರದಲ್ಲಿ  ಚಲಿಸಿದರೆ ಅದನ್ನು ಸರಳ ಸ್ಥಳಾಂತರ ಚಲನೆ ಎಂದು ಕರೆಯುತ್ತೇವೆ. ಉದಾಹರಣೆಗೆ ಒಂದು ಚೆಂಡನ್ನು ನೇರವಾಗಿ ಎಸೆದಾಗ ಅದು ದೂರ ಹೋಗಿ ಬೀಳುತ್ತದೆ. ಅಂದರೆ ಚೆಂಡು ಇಡಿಯಾಗಿ ತನ್ನ ಸ್ಥಾನ ಬದಲಾಯಿಸುತ್ತದೆ. ಈ ಬಗೆಯ  ಚಲನೆಗೆ ಸ್ಥಾನಾಂತರ ಚಲನೆ ಎಂದು ಹೇಳುತ್ತೇವೆ.

ಇತರೆ ಉದಾಹರಣೆಗಳು

ರಸ್ತೆಯ ಮೇಲೆ ಚಲಿಸುತ್ತಿರುವ ಕಾರು.

ಹಳಿಯ ಮೇಲೆ ಚಲಿಸುತ್ತಿರುವ ರೈಲು.

ಮರದ ಮೇಲಿಂದ ಬೀಳುತ್ತಿರುವ ತೆಂಗಿನಕಾಯಿ.

ಜಾರುಬಂಡಿ ಯಿಂದ ಜಾರುತ್ತಿರುವ ಮಗು .


ಸರಳ ಸ್ಥಾನಾಂತರ ಚಲನೆಯನ್ನು ಪುನಹ ಎರಡು ವಿಧಗಳಾಗಿ ನೋಡಬಹುದು

 ನೇರ ಚಲನೆ 

ವಕ್ರರೇಖೆಯ ಚಲನೆ


ನೇರ ಚಲನೆ ಒಂದು ವಸ್ತುವು ಸರಳರೇಖೆಯಲ್ಲಿ ಚಲಿಸಿದರೆ ಅಂತಹ ಚಲನೆಯನ್ನು ನೇರ ಚಲನೆ ಎಂದು ಕರೆಯುತ್ತೇವೆ. ಉದಾಹರಣೆಗೆ 

ಮರದ ಮೇಲಿಂದ ಬೀಳುತ್ತಿರುವ ತೆಂಗಿನಕಾಯಿ 

ನೇರವಾದ ಹಳಿಯ ಮೇಲೆ ಚಲಿಸುತ್ತಿರುವ ರೈಲು


ವಕ್ರರೇಖೆಯ ಚಲನೆ ಕರ್ವಿಲಿನೀರ್ ಮೋಷನ್ ಯಾವುದೇ ಒಂದು ವಸ್ತು ಅಥವಾ ಕಾಯ ವಕ್ರ ಪಥದಲ್ಲಿ ಚಲಿಸಿದರೆ ಅಂತಹ ಚಲನೆಯನ್ನು ವಕ್ರರೇಖೆಯ ಚಲನೆ ಎಂದು ಕರೆಯುತ್ತೇವೆ 

ಉದಾಹರಣೆಗೆ-ನಾವು ಒಂದು ಚೆಂಡನ್ನು ಗಾಳಿಯಲ್ಲಿ ಓರೆಯಾಗಿ ಮೇಲಕ್ಕೆ ಎಸೆದಾಗ ಅದು ಪ್ರಾರಂಭದಲ್ಲಿ ಮೇಲೇರುತ್ತ ಹೋಗಿ ನಂತರ ಕೆಳಗಿಳಿಯುತ್ತಾ ದೂರ ಹೋಗಿ ಬೀಳುತ್ತದೆ ಇದರ ಪತ ವಕ್ರವಾಗಿರುತ್ತದೆ. 


ವಕ್ರರೇಖೆಯ ಚಲನೆಗೆ ಇತರ ಉದಾಹರಣೆಗಳು 

ವಕ್ರರೇಖೆಯ ಪದದಲ್ಲಿ ಚಲಿಸುತ್ತಿರುವ ರೈಲು 

ತಿರುವು ರಸ್ತೆಯಲ್ಲಿ ಚಲಿಸುತ್ತಿರುವ ಬಸ್ಸು 

ಗುಂಡು ಎಸೆತ


ಭ್ರಮಣ ಚಲನೆ ರೋಟೇಟರಿ ಮೋಷನ್

 ಒಂದು ಅಕ್ಷದ ಮೇಲೆ ತನ್ನ ಸ್ಥಾನ ಬದಲಾವಣೆ ಮಾಡದೆ ಚಲಿಸಿದರೆ ಅದನ್ನು  ಭ್ರಮಣ ಚಲನೆ ಕರೆಯುತ್ತೇವೆ.

 ಇಲ್ಲಿ ಕಾಯದ ಎಲ್ಲಾ ಕಣಗಳು ಭ್ರಮಣ ಬಿಂದುವಿನ ಸುತ್ತಲೂ ಒಂದೇ ಪಥದಲ್ಲಿ ತಿರುಗುವುದಿಲ್ಲ.

 ಕಾಯದ ಪ್ರತಿಯೊಂದು ಕಣವೂ ಬೇರೆಬೇರೆ ತ್ರಿಜ್ಯದಲ್ಲಿ ಒಂದು ನಿರ್ದಿಷ್ಟ ಬಿಂದುವಿನ ಸುತ್ತಲೂ ತಿರುಗುತ್ತಿರುತ್ತದೆ. ಗಡಿಯಾರದ ಮುಳ್ಳಿನ ಚಲನೆ

ಚರಕದ ಚಕ್ರದ  ಚಲನೆ


ಆಂದೋಲನ ಚಲನೆ ಆಸಿಲೇಟರ್ ಮೋಶನ್ 

ಒಂದು ನಿರ್ದಿಷ್ಟ ಬಿಂದುವಿನಿಂದ ತೂಗುಬಿಟ್ಟ ಕಾಯವು ಹಿಂದಕ್ಕೂ ಮುಂದಕ್ಕೂ ಮತ್ತೆ ಮತ್ತೆ ಚಲಿಸಿದರೆ ಅದನ್ನು ಆಂದೋಲನ ಚಲನೆ ಎಂದು ಕರೆಯುತ್ತೇವೆ.

 ಉದಾಹರಣೆಗೆ 

ಗೋಡೆ ಗಡಿಯಾರದ ಲೋಲಕದ ಚಲನೆ

 ಜೋಕಾಲಿ ಆಡುತ್ತಿರುವ ಮಗು 

ಬಿರುಗಾಳಿಗೆ ಮರದ ಕೊಂಬೆ ಮತ್ತು ಎಲೆಗಳ ಚಲನೆ ತಂತಿವಾದ್ಯಗಳ ತಂತಿಗಳ ಚಲನೆ



ವೃತ್ತಿಯ ಚಲನೆ ಸರ್ಕ್ಯುಲಾರ್ ಮೋಷನ್ 

ಒಂದು ಕಾಯವು ಸ್ಥಿರ ಬಿಂದುವಿನಿಂದ /ನಿಗದಿಪಡಿಸಿದ ಬಿಂದುವಿನಿಂದ ವೃತ್ತಿಯ ಪಥದಲ್ಲಿ ಚಲಿಸಿದರೆ  ವೃತ್ತಿಯ ಚಲನೆ ಎಂದು ಕರೆಯುತ್ತೇವೆ.

 ಉದಾಹರಣೆಗೆ

  ಕುಂಬಾರ ಮಡಿಕೆ ಮಾಡುವುದು .

  ಫ್ಯಾನ್ ನ ರೆಕ್ಕೆಗಳು ತಿರುಗುವುದು.

ಎತ್ತಿನ ಗಾಣ ತಿರುಗುವುದು.


ಯಾದೃಚ್ಛಿಕ ಚಲನೆ  ರಾಂಡಮ್ ಮೋಷನ್

 ಒಂದು ಕಾಯವು ಬೇರೆ ಬೇರೆ ದಿಕ್ಕಿನಲ್ಲಿ ನಿರ್ದಿಷ್ಟ ಕಾಲಮಾನದಲ್ಲಿ ಚಲನೆ ಹೊಂದಿದ್ದರೆ ಅದನ್ನುಯಾದೃಚ್ಛಿಕ ಚಲನೆ ಕರೆಯುತ್ತೇವೆ 

ಉದಾಹರಣೆಗೆ 

 ಪತಂಗವು ರೆಕ್ಕೆ ಬಡಿಯುವುದು 

ಮರದ ಎಲೆ ಉದುರುವುದು.



 ಪುನರಾವರ್ತಿತ ಚಲನೆ ರಿಪೀಟೆಟಿವ್ ಮೋಷನ್ 

ಒಂದು ಕಾಯುವ ಸಮಯದೊಂದಿಗೆ ನಿರಂತರವಾಗಿ ಚಲನೆ ಹೊಂದಿದರೆ  ಅದನ್ನು ಪುನರಾವರ್ತಿತ ಚಲನೆ ಎಂದು ಕರೆಯುತ್ತೇವೆ 

ಉದಾಹರಣೆಗೆ 

ಕಣ್ಣಿನ ರೆಪ್ಪೆ ಮಿಟುಕಿಸುವುದು 

ಮಾತನಾಡುವಾಗ ತುಟಿಯ ಚಲನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.