ADS

ಹೂಗಳ ಬಣ್ಣದಲ್ಲೇಕೆ ವೈವಿಧ್ಯತೆ?

                       ಹೂಗಳ ಬಣ್ಣದಲ್ಲೇಕೆ ವೈವಿಧ್ಯತೆ?      😲

ನಮ್ಮ ಸುತ್ತಲ ಪರಿಸರದಲ್ಲಿ ನಾವು ಹಲವು ವೈವಿಧ್ಯಮಯ ಬಣ್ಣ-ಬಣ್ಣದ ಹೂಗಳನ್ನು ಕಾಣುತ್ತೇವೆ. ಈ ವೈವಿಧ್ಯತೆಗೆ ಕಾರಣವೇನು? ಇದರಿಂದಾಗಿ ಅವುಗಳಿಗೇನು ಪ್ರಯೋಜನ? ತಿಳಿಯಲು ಕುತೂಹಲಕಾರಿ ಅಲ್ಲವೇ? ಹಾಗಾದರೆ  ಈ ಚಮಾತ್ಕಾರಿ ಪರಿಸರದ ಅಂಶವನ್ನುತಿಳಿಯೋಣ ಬನ್ನಿ .



ಕೆಂಪು, ನೀಲಿ, ಹಳದಿ,ಕಪ್ಪು, ಬಿಳಿ ವಿವಿಧ ಗಾತ್ರ, ಆಕಾರ ವಾವ್ ಎಷ್ಟು ವೈವಿಧ್ಯತೆ ಹೂಗಳ ಬಣ್ಣದಲ್ಲಿ ಗಾತ್ರದಲ್ಲಿ, ಆಕಾರದಲ್ಲಿ! ಕಾರಣವೇನು ಗೊತ್ತೇ? 
ಗಾತ್ರ, ಆಕಾರಕ್ಕಿಂತ ಅವುಗಳ ಬಣ್ಷಗಳ ವೈವಿಧ್ಯತೆ ಅಪಾರ , ಈ ರೀತಿಯ ಬಣ್ಣಗಳ ವೈವಿಧ್ಯತೆ ಗೆ ಅವುಗಳಲ್ಲಿರುವ ವರ್ಣಕಗಳು ಅಥವಾ ವರ್ಣದ್ರವ್ಯಗಳು ಕಾರಣವಾಗುತ್ತವೆ.
ನಿಮಗೆ ತಿಳಿದಿರವಂತೆ ಸಸ್ಯಗಳ ಎಲೆಗಳು ಹಸಿರಾಗಿರಲು ಕಾರಣ ಅವುಗಳಲ್ಲಿ ಇರುವ ಪತ್ರಹರಿತ್ತು ಎಂಬ ವರ್ಣದ್ರವ್ಯ ಕಾರಣ ಅಂತ, ಅದೇ ರೀತಿ ಹೂಗಳ ಬಣ್ಣಗಳ ವೈವಿಧ್ಯತೆಗೆ ವರ್ಣಕಗಳು ಅಥವಾ ವರ್ಣದ್ರವ್ಯಗಳು ಕಾರಣವಾಗುತ್ತವೆ.ಮುಖ್ಯವಾಗಿ ಎರಡು ಪ್ರಮುಖ ವರ್ಣಕಗಳು ೧)ಆಂತೋಸಯನಿನ್ಸ್ (anthocyanins)
                                  ೨). ಕಾರ್ಟೋನಾಯಿಡ್ಸ್ (carotenoids)
ಈ ಎರಡು ಪ್ರಮುಖ ವರ್ಣಕಗಳ‌ ಪಾತ್ರ ಬಹಳ ಇರುತ್ತದೆ.
ಆಂತೋಸಯನಿನ್ಸ್ (anthocyanins) ಈ ವರ್ಣಕ ಹೂಗಳಿಗೆ ಕೆಂಪು, ನೀಲಿ,ಹಳದಿ, ಕಪ್ಪು,ನೇರಳೆ,ಕಂದು ಬಣ್ಣನೀಡಲು ಪ್ರಮುಖ ಪಾತ್ರ ವಹಿಸುತ್ತವೆ. ಅದೇ ರೀತಿ ಕಾರ್ಟೋನಾಯಿಡ್ಸ್ (carotenoids) ಗಳು ಕೆಲವು ಹಳದಿ ,ಕೆಂಪು, ಕಿತ್ತಳೆ ಬಣ್ಣದ ಹೂಗಳಿಗೆ ಕಾರಣವಾಗುತ್ತವೆ. 
ಸರಿ ಇದಿಷ್ಟೇ ಅಲ್ಲದೆ ನಾವು ಕೆಲವು ಚಿತ್ರಗಳನ್ನು ಬಿಡಿಸುವಾಗ ಕೆಲವು ಬಣ್ಣಗಳನ್ನು ಪಡೆಯಲು ಬೇರೆ ಬೇರೆ ಬಣ್ಣಗಳನ್ನು ಒಂದಕ್ಕೊಂದು ಸೇರಿಸಿ ಬೇರೆ ಬೇರೆ ರೀತಿಯ ಬಣ್ಣಗಳನ್ನು ಪಡೆಯುತ್ತೆವೆ,
RED+ BLUE= PURPLE
RED+YELLOW= ORANGE
ಕೆಲವು ಹೂಗಳಲ್ಲಿ ಇವೆರಡೂ ವರ್ಣಕಗಳು ಸೇರಿ ವೈವಿಧ್ಯಮಯ ಬಣ್ಣವನ್ನು ಹೊಂದಿರುತ್ತವೆ.
ಇವುಗಳಲ್ಲದೆ ಸಸ್ಯ ಅಥವಾ ಮರ ಬೆಳೆದಿರುವ ಪ್ರದೇಶ , ಮಣ್ಣಿನಲ್ಲಿರುವ ಲವಣಗಳು, pH  ಮೌಲ್ಯ, ಸಸ್ಯಗಳು ಪಡೆಯುವ ಸೂರ್ಯನ ಬೆಳಕು ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುತ್ತವೆ.






ನಮ್ಮ ದೈನಂದಿನ ಜೀವನದಲ್ಲಿ ಹೂವಿನ ಪಾತ್ರ ಬಹಳ ಹುಟ್ಟಿನಿಂದ ಮರಣದವರೆಗೆ ಹಲವು ಸಂತೋಷದ, ದುಃಖದ ಸಂಧರ್ಭಗಳಲ್ಲಿ , ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ, ಹೀಗೆ .....
ಕನ್ನಡದಲ್ಲಿ ವಿಜ್ಞಾನ ಕೌತುಕಗಳನ್ನು ತಿಳಿಯಲು ನನ್ನನ್ನು ಪ್ರೋತ್ಸಾಹಿಸಲು ದಯಮಾಡಿ-------
ನಿಮಗೆ ಈ ವಿಷಯ ಇಷ್ಟ ವಾದರೆ  ನನ್ನ ಬ್ಲಾಗ್ ಫಾಲೋ ಮಾಡಿ,ಕಾಮೆಂಟ್ ಮಾಡಿ, ಲೈಕ್ ಮಾಡಿ .
ಧನ್ಯವಾದಗಳು.
ನಿಮ್ಮವ JPN❤

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
  1. Good information.
    Essential to all learners.
    Republish in a book also.
    All the best sir ji.

    ಪ್ರತ್ಯುತ್ತರಅಳಿಸಿ

If you have any doubts please comment